ಜಿಲ್ಲೆಯಲ್ಲಿಂದು ಐವರ ಬಲಿ ಪಡೆದ ಕರೊನಾ
ಹೊನ್ನಾವರದಲ್ಲಿ 18 ಕೇಸ್ ದಾಖಲು
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಂದು 200 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರದಲ್ಲಿ 38, ಅಂಕೋಲಾದಲ್ಲಿ 14, ಕುಮಟಾದಲ್ಲಿ 29, ಹೊನ್ನಾವರದಲ್ಲಿ 27, ಭಟ್ಕಳದಲ್ಲಿ 7, ಶಿರಸಿ 33, ಸಿದ್ದಾಪುರ 6, ಯಲ್ಲಾಪುರದಲ್ಲಿ 27, ಮುಂಡಗೋಡಿನಲ್ಲಿ 8, ಹಳಿಯಾಳದ 11 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದೇ ವೇಳೆ ಇಂದು 136 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 4, ಅಂಕೋಲಾದಲ್ಲಿ 7, ಕುಮಟಾ 12, ಹೊನ್ನಾವರದಲ್ಲಿ 13, ಭಟ್ಕಳ 10, ಶಿರಸಿ 5, ಸಿದ್ದಾಪುರ 12, ಯಲ್ಲಾಪುರದಲ್ಲಿ 42, ಮುಂಡಗೋಡ 8, ಹಳಿಯಾಳದಲ್ಲಿ 3, ಜೋಯ್ಡಾದ 20 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿಂದು ಐವರ ಸಾವು:
ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೆ, ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಮುಂಡಗೋಡಿನಲ್ಲಿ 1, ಹೊನ್ನಾವರ 2, ಭಟ್ಕಳ 1, ಯಲ್ಲಾಪುರದಲ್ಲಿ ಓರ್ವ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯ 7560 ಮಂದಿಯಲ್ಲಿ ಸೋಂಕು ದೃಢವಾಗಿದ್ದು, 5305 ಮಂದಿ ಗುಣಮುಖರಾಗಿದ್ದಾರೆ. 935 ಮಂದಿ ಆಸ್ಪತ್ರೆಗಳಲ್ಲಿ, 1230 ಸೋಂಕಿತರು ಹೋಮ್ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊನ್ನಾವರದಲ್ಲಿ 18 ಕೇಸ್ ದಾಖಲು:
ಹೊನ್ನಾವರ: ತಾಲೂಕಿನಲ್ಲಿ ಇಂದು 18 ಜನರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಇದೇ ವೇಳೆ ಇಂದು ಚಂದಾವರದ 42 ವರ್ಷದ ಪುರುಷ ಮತ್ತು ಹಳದೀಪುರದ 55 ವರ್ಷದ ಪುರುಷ ಸಾವನ್ನಪ್ಪಿದಾರೆ.
ಪ್ರಭಾತನಗರ ರಜತಗಿರಿಯ 50 ವರ್ಷದ ಪುರುಷ, ಕೆಳಗಿನಪಾಳ್ಯದ 26 ವರ್ಷದ ಯುವಕ, ಪಟ್ಟಣದ 48 ವರ್ಷದ ಮಹಿಳೆ, ಕಡತೋಕಾದ 31 ವರ್ಷದ ಯುವಕ, 30 ವರ್ಷದ ಯುವಕ. ಹೊದ್ಕೆಶಿರುರಿನ 35 ವರ್ಷದ ಮಹಿಳೆ, ಕರ್ಕಿಯ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಚಂದಾವರದ 68 ವರ್ಷದ ಮಹಿಳೆ, 21 ವರ್ಷದ ಯುವಕ, 26 ವರ್ಷದ ಯುವಕ, 15 ವರ್ಷದ ಬಾಲಕ, 23 ವರ್ಷದ ಯುವತಿ, 21 ವರ್ಷದ ಯುವಕ, 53 ಪುರುಷ, 45 ವರ್ಷದ ಮಹಿಳೆ, ಕೊಡಾಣಿಯ 14 ವರ್ಷದ ಬಾಲಕ, ಕುದ್ರಗಿಯ 36 ವರ್ಷದ ಮಹಿಳೆ ಹಾಗು ಕಾಸರಕೋಡಿನ 24 ವರ್ಷದ ಯುವತಿಗೆ ಸೋಂಕು ಕಾಣಿಸಿಕೊಂಡಿದೆ.
ಇoದು ವರದಿಯಾದ ಪ್ರಕರಣದಲ್ಲಿ ಚಂದಾವರದಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 221 ಜನರು ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 665 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ