Follow Us On

Google News
Big News
Trending

ಭಟ್ಕಳ ಶಿಕ್ಷಕನ ಫೇಸ್ ಬುಕ್ ಅಕೌಂಟ್ ನಕಲಿ ಮಾಡಿ ಹಣ ಎಗರಿಸಿದ ಖದೀಮರು

ಗುರುಭಕ್ತಿಗೆ ಮುಳುವಾದ ಫೇಕ್ ಅಕೌಂಟ್
ಗುರುವಿನ ಸಹಾಯಕ್ಕೆ ಬರುವುದು ಕರ್ತವ್ಯ ವೆಂದು ಹಣ ಕಳಿಸಿದ ಶಿಷ್ಯ
ಬಯಲಾಗುತ್ತಿದೆ ಸೈಬರ್ ವಂಚನೆಯ ಕರಾಳ ಮುಖಗಳು
ಯಾರಾದರೂ ಸೋಷಿಯಲ್ ಅಕೌಂಟ್ ಬಳಸಿ ಹಣ ಕೇಳಿದ್ರೆ ಸತ್ಯಾಸತ್ಯತೆ ಅರಿಯಿರಿ

[sliders_pack id=”1487″]

ಭಟ್ಕಳ: ಪೊಲೀಸ್ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಯ ಫೇಸ್ ಬುಕ್ ಖಾತೆಯ ನಕಲು ಮಾಡಿ, ಮೆಸ್ಸೆಂಜರ್ ಮೂಲಕ ಅನಾರೋಗ್ಯದ ಕಾರಣ ನೀಡಿ ಹಣ ಲಪಟಾಯಿಸುವ ಸೈಬರ್ ಅಪರಾಧದ ಘಟನೆಗಳು ಇತ್ತಿಚೆಗೆ ವರದಿಯಾಗಿದ್ದವು. ಈಗ ಶಿಕ್ಷಕರ ಫೇಸ್ ಬುಕ್ ಖಾತೆಯ ನಕಲು ಮಾಡಿ ಅವರ ಹೆಸರಿನಲ್ಲಿ ವಂಚನೆ ಎಸಗಿರುವ ಸಂಗತಿ ವರದಿಯಾಗಿದೆ.


ತಾಲೂಕಿನ ಸಾಹಿತಿ, ಶಿಕ್ಷಕ ಶಿರಾಲಿಯ ಶ್ರೀಧರ ಶೇಟ್ ಯವರ ಫೇಸ್ ಬುಕ್ ಖಾತೆಯ ನಕಲು ಮಾಡಿ ಅವರ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಲಾಗಿದೆ. ಸ್ನೇಹಿತರು ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಿದ ನಂತರ ತನ್ನ ಸಂಬoಧಿಕರನ್ನು ತೀವ್ರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯ ಐ.ಸಿ.ಯು.ನಲ್ಲಿ ದಾಖಲಾಗಿಸಲಾಗಿದ್ದು, ಅರ್ಜೆಂಟಾಗಿ ಹಣದ ಅವಶ್ಯಕತೆಯಿದೆ. ಗೂಗಲ್ ಪೇ ಮೂಲಕ ಕಳಿಸಿ ಎಂದು ಭಾವನಾತ್ಮಕ ಸಂದೇಶವನ್ನು ಮೆಸ್ಸೆಂಜರ್ ಮೂಲಕ ಕಳಿಸಲಾಗಿದೆ.


ಇದನ್ನು ನಂಬಿದ ಅವರ ಶಿಷ್ಯರು ಗುರುವಿನ ಸಹಾಯಕ್ಕೆ ಬರುವುದು ಶಿಷ್ಯನ ಕರ್ತವ್ಯ ವೆಂದು ಕೊಂಡು ಹಣ ಕಳಿಸಿದ್ದಾರೆ. ಶ್ರೀಧರ ಶೇಟ್ ರವರ ಹಲವು ಸ್ನೇಹಿತರು ಮತ್ತು ಶಿಕ್ಷಕರಿಗೂ ಇದೇ ಸಂದೇಶ ರವಾನೆ ಯಾಗಿದೆ. ಇದರ ಬಗ್ಗೆ ಸಂದೇಹ ಮೂಡಿ ಮುರ್ಡೇಶ್ವರ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಆಗಿರುವ ಧನಂಜಯ, ಸ್ನೇಹಿತರಾದ ದೇವಿದಾಸ, ಶಿಕ್ಷಕರಾದ ನಾರಾಯಣ ನಾಯ್ಕ, ಹನುಮಂತ ನಾಯ್ಕ, ಕೇಶವ ಮೊಗೇರ ಮುಂತಾದವರುಶ್ರೀಧರ ಶೇಟ್ ರವನ್ನು ಸಂಪರ್ಕಿಸಿ ಅವರ ಹೆಸರಿನಲ್ಲಿ ಹಣ ಕಳಿಸುವ ಸಂದೇಶದ ಬಗ್ಗೆ ತಿಳಿಸಿದ್ದಾರೆ.


ತಕ್ಷಣ ಎಚ್ಚೆತ್ತ ಅವರು ಫೇಸ್ ಬುಕ್ ನ ನಕಲಿ ಖಾತೆಯನ್ನು ರದ್ದು ಪಡಿಸಿ, ತಮ್ಮ ಖಾತೆ ನಕಲಾಗಿರುವ ವಿಷಯವನ್ನು ಸ್ನೇಹಿತರಿಗೆ ತಿಳಿಸಿ ಅವರು ವಂಚನೆಗೊಳಗಾಗದoತೆ ಎಚ್ಚರಿಕೆ ವಹಿಸಿದ್ದಾರೆ. ಆಗ ಅವರ ಶಿಷ್ಯರೋರ್ವರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಆ ನಕಲಿ ಖಾತೆಯ ಫೋನ್ ನಂಬರ್ 9050386353 ಗೆ ಪೋನ್ ಮಾಡಿದರೆ ಸ್ವಿಚ್ ಆಫ್ ಬಂದಿದೆ.

ಇದೇ ನಂಬರ್ ಹೊಂದಿರುವ ಗೂಗಲ್ ಪೇ ಯ ಜಾಡನ್ನು ಹಿಡಿದು ಹೊರಟರೆ ಅದು ಹರ್ಯಾಣದ ಓರ್ವರ ಹೆಸರನ್ನು ತೋರಿಸುತ್ತದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button