Follow Us On

Google News
Info
Trending

ಕುಮಟಾದ ಶಿಕ್ಷಕಿಗೆ ಛಂದ ಪುಸ್ತಕ ಬಹುಮಾನ

ಕುಮಟಾ : ಪ್ರಸಕ್ತ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಛಾಯಾ ಭಟ್ ಪಡೆದುಕೊಂಡಿದ್ದಾರೆ. ಇವರು ಮೂಲತಃ ಕುಮಟಾ ತಾಲೂಕಿನ ಹೊಲನಗದ್ದೆ ಊರಿನವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಈಗ ಬೆಂಗಳೂರಿನ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕಳೆದ ವರ್ಷವೂ ಇವರ ಹಸ್ತಪ್ರತಿ ಕೊನೆಯ ಸುತ್ತಿಗೆ ಹೋಗಿತ್ತು. ಈ ಬಾರಿ ಅವರು ಕೇವಲ ಹಳೆಯ ಕತೆಗಳನ್ನು ಮಾತ್ರ ಸ್ಪರ್ಧೆಗೆ ಕಳುಹಿಸದೆ, ಮತ್ತಷ್ಟು ಹೊಸಕತೆಗಳನ್ನು ಬರೆದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಬಹುಮಾನವು ಮೂವತ್ತು ಸಾವಿರ ರೂಪಾಯಿ ನಗದು ಫಲಕ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಡಾಟರ್ಸ ಡೇ ದಿನವೇ ಈ ಬಹುಮಾನ ಬಂದಿದ್ದು ಈಕೆಯ ಸಾಧನೆಗೆ ತಂದೆ ಆರ್.ಎನ್ ಹೆಗಡೆ ಹಾಗೂ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.

ಪುಸ್ತಕವು ಮುಂದಿನ ತಿಂಗಳಲ್ಲಿ ಓದುಗರಿಗೆ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ಕೊರೋನಾ ಕಾರಣದಿಂದ ಕಾರ್ಯಕ್ರಮ ಏರ್ಪಡಿಸುವುದು ಕಷ್ಟ. ಆದ್ದರಿಂದ ಡಿಜಿಟಲ್ ಮೂಲಕವೇ ಪುಸ್ತಕ ಬಿಡುಗಡೆ ಮಾಡುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button
Idagunji Mahaganapati Chandavar Hanuman