ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಾಹಮಾರಿ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,092ಕ್ಕೆ ಏರಿಕೆ
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 23 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ನಾಗೂರ್‌ನಲ್ಲಿ 4, ಕಲಭಾಗ 2 ಕೇಸ್ ಸೇರಿದಂತೆ ಗುಡೆಅಂಗಡಿ, ಭಸ್ತಿಪೇಟೆ, ಕೊಡ್ಕಣಿ, ತಲಗೋಡ್, ಹಿಣಿ, ಹೆಗಡೆ, ಹೆರವಟ್ಟಾ, ಅಳ್ವೇಕೊಡಿ, ಉಪ್ಪಿನಗಣಪತಿ, ವಿವೇಕನಗರ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗಿದೆ.
ಕೊಡ್ಕಣಿಯ 23 ವರ್ಷದ ಮಹಿಳೆ, ಹಿಣಿಯ 10 ವರ್ಷದ ಬಾಲಕ, ತಲಗೋಡ್‌ನ 24 ವರ್ಷದ ಯುವತಿ, ಭಸ್ತಿಪೇಟೆಯ 74 ವರ್ಷದ ವೃದ್ಧೆ, ಗುಡೆಅಂಗಡಿಯ 37 ವರ್ಷದ ಪುರುಷ, ನಾಗೂರ್‌ನ 55 ವರ್ಷದ ಮಹಿಳೆ, 64 ವರ್ಷದ ಪುರುಷ, 34 ವರ್ಷದ ಪುರುಷ, 63 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಕಲಭಾಗನ 30 ವರ್ಷದ ಪುರುಷ, 65 ವರ್ಷದ ಪುರುಷ, ಮೂರಕಟ್ಟೆಯ 31 ವರ್ಷದ ಪುರುಷ, ಹೆರವಟ್ಟಾದ 30 ವರ್ಷದ ಪುರುಷ, ಮಾಸೂರಿನ 77 ವರ್ಷದ ವೃದ್ಧೆ, ಅಳ್ವೇಕೊಡಿಯ 40 ವರ್ಷದ ಪುರುಷ, ಕುಮಟಾದ 19 ವರ್ಷದ ಯುವತಿ, 47 ವರ್ಷದ ಪುರುಷ, ಹೆಗಡೆಯ 30 ವರ್ಷದ ಪುರುಷ, ಉಪ್ಪಿನಗಣಪತಿಯ 75 ವರ್ಷದ ವೃದ್ಧೆಗೂ ಪಾಸಿಟಿವ್ ಬಂದಿದೆ.
- ಹೆಸರಾಂತ ಉದ್ಯಮಿ ಈರಪ್ಪ ನಾಯ್ಕ ಗರ್ಡಿಕರ್ ಅವರಿಂದ ದೀಪಾವಳಿ ಶುಭಸಂದರ್ಭದಲ್ಲಿ ಕಚೇರಿ ಮತ್ತು ವಾಹನಗಳಿಗೆ ಪೂಜೆ
- ಮೃತ ಗೃಹ ರಕ್ಷಕ ಪ್ರವೀಣ್ ನಾಯ್ಕ ಕುಟುಂಬಕ್ಕೆ ಧನಸಹಾಯ
ಮಿರ್ಜಾನ್‌ನ 22 ವರ್ಷದ ಯುವತಿ, ವಿವೇಕನಗರದ 37 ವರ್ಷದ ಪುರುಷ, ಮೂರೂರ್ ರೋಡ್ ಸಮೀಪದ 17 ವರ್ಷದ ಯುವಕ, ಹೆಬೈಲ್‌ನ 13 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ. ಇಂದಿನ 23 ಪ್ರಕರಣ ಸೇರಿ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1092 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ
ಸೆಲ್ಕೋ ಸೋಲಾರ್ ದೀಪ ಬಳಸಿ, ನಿಮ್ಮ ಮನೆ ಬೆಳಗಿಸಿ
ಸೌರಶಕ್ತಿ ಅಂದರೆ ಕೇವಲ ಬೆಳಕಲ್ಲ
ಅದು ಸ್ವಾವಲಂಬಿ ಬದುಕಿಗೂ ದಾರಿ
ಇದು ಸೆಲ್ಕೋ ಸಂಸ್ಥೆಯ ಗುರಿ
ಸಂಪರ್ಕಿಸಿ: ದತ್ತಾರಾಮ ಭಟ್ಟ, ಮ್ಯಾನೇಜರ್
ಸೆಲ್ಕೋ ಸೋಲಾರ್, ಸನ್ಮಾನ ಹೊಟೇಲ್ ಹತ್ತಿರ
N.H 66, ಕುಮಟಾ
9880003735/9449360181
ಕೆಳಗಿನ ಸೋಷಿಯಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಸುದ್ದಿಯನ್ನು ಶೇರ್ ಮಾಡಿ.