ಮಾಹಿತಿ
Trending

ಹೃದಯ ತಪಾಸಣಾ ಕೇಂದ್ರ ಸಿದ್ದಾಪುರದಲ್ಲಿ ಶುಭಾರಂಭ

ಸಿದ್ದಾಪುರ: ತಾಲೂಕಿನಲ್ಲಿ ಸಿ.ಆರ್.ಕವಲಕೊಪ್ಪ ಹೃದಯ ತಪಾಸಣಾ ಕೇಂದ್ರ ಲೋಕಾರ್ಪಣಗೊಂಡಿತು.
ಸಿದ್ದಾಪುರ ಪಟ್ಟಣದ ಧನ್ವಂತರಿ ಆಯುವೇದ ಕಾಲೇಜ್ ನಲ್ಲಿ ಹೃದಯ ತಪಾಸಣಾ ಕೇಂದ್ರ ಹಾಗೂ ಉನ್ನತೀಕರಣಗೊಂಡಿರುವ ಎಕ್ಸ್-ರೇ ಘಟಕವನ್ನು ತಹಸೀಲ್ದಾರ ಮಂಜುಳಾ ಭಜಂತ್ರಿ,ಡಾ.ದಿವಾಕರ ಭಟ್ಟ,ಡಾ.ಶ್ರೀಧರ ವೈದ್ಯ ಉದ್ಘಾಟಿಸಿದರು.

ಖ್ಯಾತ ಹೃದ್ರೋಗ ತಜ್ಞ ಡಾ.ದಿವಾಕರ ಭಟ್ಟ ಮಾತನಾಡಿ, ದೇವರು ನಮಗೆ ಆರೋಗ್ಯ ಭಾಗ್ಯವನ್ನು ನೀಡಿದ್ದಾನೆ ಅದನ್ನು ಉಳಿಸಿಬೆಳೆಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಹೃದಯ ಸಂಬಂಧಿ ಖಾಯಿಲೆ ನಿಶ್ಯಬ್ಧವಾಗಿ ನಮ್ಮನ್ನು ಕೊಲ್ಲುತ್ತದೆ ಭಾರತದಲ್ಲಿ 35-50ವಯಸ್ಸಿನವರಲ್ಲಿ ಹೃದಯ ಖಾಯಿಲೆ ಬರುತ್ತದೆ. ಧನ್ವಂತರಿ ಆಯುರ್ವೇದ ಕಾಲೇಜ್‍ನಲ್ಲಿ ಇಂತಹ ಸೌಲಭ್ಯವುಳ್ಳ ಘಟಕವನ್ನು ತೆರೆಯುತ್ತಿರುವದರಿಂದ ಜನಸಾಮಾನ್ಯರಿಗೆ ತುಂಬಾ ಉಪಯೋಗವಾಗುತ್ತದೆ ಎಂದು ಹೇಳಿದರು.

ಡಾ.ಶಶಿಭೂಷಣ ಹೆಗಡೆ ಪ್ರಾಸ್ತಾವಿಕ ಮಾತನಾಡಿ,ಮನುಷ್ಯನ ಭವಿಷ್ಯ ನಿರ್ಧರಿಸುವುದು ರಕ್ತ ಮತ್ತುಹೃದಯದಿಂದ ಇಂತಹ ಹೃದಯದ ಬಗ್ಗೆ ನಾವು ಖಾಳಜಿವಹಿಸಬೇಕು ಜನಸಾಮಾನ್ಯರಿಗೂ ಹೃದಯ ತಪಾಸಣೆ ಕೈಗೆಟಕುವ ದರದಲ್ಲಿ ಸಿಗಬೇಕು ಎನ್ನುವ ಸದುದ್ದೇಶದಿಂದ ಹೃದಯತಪಾಸಣಾ ಕೇಂದ್ರವನ್ನು ತೆರೆಯಲಾಗುತ್ತಿದೆ ಮುಂದಿನ ದಿನದಲ್ಲಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಹೃದಯ ಸಂಬಂಧಿ ತಪಾಸಣೆಯ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಸಂಜೀವಿನಿ ಎಂಬ ಯೋಜನೆಯನ್ನು ತರಲಾಗುತ್ತಿದೆ ಎಂದು ಹೇಳಿದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Related Articles

Back to top button