Follow Us On

Google News
Important
Trending

ಹೊನ್ನಾವರ ತಾಲೂಕಿನ ಇಂದಿನ ಕರೊನಾ ಮಾಹಿತಿ ಇಲ್ಲಿದೆ

ತಾಲೂಕಿನಲ್ಲಿ ಆರು ಜನರಲ್ಲಿ ಸೋಂಕು ದೃಢ
103 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ

ಹೊನ್ನಾವರ: ತಾಲೂಕಿನಲ್ಲಿ ಇಂದು 6 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಆರು ಕೇಸ್ ಗಳ ಪೈಕಿ ನಾಲ್ಕು ಕೇಸ್ ಪಟ್ಟಣ ವ್ಯಾಪ್ತಿಯಲ್ಲೇ ಕಾಣಿಸಿಕೊಂಡಿದೆ.

ಪಟ್ಟಣದ 82 ವರ್ಷದ ಮಹಿಳೆ, ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 45 ವರ್ಷದ ಮಹಿಳೆ, ಕೆಳಗಿನಪಾಳ್ಯದ 54 ವರ್ಷದ ಪುರುಷ, ಸಿಡಿಪಿಐ ಇಲಾಖೆಯ 35 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.


ಗ್ರಾಮಿಣ ಭಾಗವಾದ ಕಡತೋಕಾದ 45 ವರ್ಷದ ಪುರುಷ ಮತ್ತು ಕುಮಟಾದ 53 ವರ್ಷದ ಪುರುಷ ಹೊನ್ನಾವರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸೋಂಕು ಪತ್ತೆಯಾಗಿದೆ.

ತಾಲೂಕಾ ಆಸ್ಪತ್ರೆಯಲ್ಲಿ 17 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 103 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button
Idagunji Mahaganapati Chandavar Hanuman