Important
Trending

ಕುಮಟಾದಲ್ಲಿ ಇಂದು 23 ಕರೊನಾ ಕೇಸ್ ದಾಖಲು

ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1262 ಕ್ಕೆ ಏರಿಕೆ
ಬಾಡ, ಹೆಗಡೆ, ಮೂರೂರ್, ಕೂಜಳ್ಳಿ, ಬಂಕಿಕೋಡ್ಲಾ, ಮಾಸೂರ್ ಸೇರಿ ಹಲವೆಡೆ ಸೋಂಕು

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 23 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಬಾಡದಲ್ಲಿ 2, ಹೆಗಡೆ 2, ಮೂರೂರ್ 2, ಕೂಜಳ್ಳಿ 2, ಬಂಕಿಕೋಡ್ಲಾ 2, ಮಾಸೂರ್ 2, ಗಾಂಧಿನಗರ 2 ಸೇರಿದಂತೆ ಗೋಕರ್ಣ, ಮಿರ್ಜಾನ್, ಬೆಲೆಹಿತ್ಲ, ಕಿಮಾನಿ, ಗುಡೆಅಂಗಡಿ, ಕಾಗಲ್ ಮುಂತಾದ ಭಾಗಗಳಲ್ಲಿ ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಬೆಲೆಹಿತ್ಲದ 34 ವರ್ಷದ ಪುರುಷ, ಕಿಮಾನಿಯ 51 ವರ್ಷದ ಪುರುಷ, ಗುಡೆಅಂಗಡಿಯ 45 ವರ್ಷದ ಪುರುಷ, ಕಾಗಲ್‌ನ 52 ವರ್ಷದ ಪುರುಷ, ಬಾಡದ 70 ವರ್ಷದ ವೃದ್ಧ, 36 ವರ್ಷದ ಪುರುಷ, ಮೂರೂರಿನ 54 ವರ್ಷದ ಮಹಿಳೆ, ಮೂರೂರಿನ 23 ವರ್ಷದ ಮಹಿಳೆ, ಮಣ್ಕಿಯ 65 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಗೋಕರ್ಣದ 84 ವರ್ಷದ ವೃದ್ಧೆ, 36 ವರ್ಷದ ಪುರುಷ, ಕಲ್ಲಬ್ಬೆಯ 63 ವರ್ಷದ ಮಹಿಳೆ, ಬಂಕಿಕೋಡ್ಲಾದ 38 ವರ್ಷದ ಮಹಿಳೆ, 4 ವರ್ಷದ ಮಗು, ಮಾಸೂರಿನ 25 ವರ್ಷದ ಯುವತಿ, 61 ವರ್ಷದ ಪುರುಷ, ಹೆಗಡೆಯ 27 ವರ್ಷದ ಯುವತಿ, 55 ವರ್ಷದ ಮಹಿಳೆ, ಗಾಂಧಿನಗರದ 6 ವರ್ಷದ ಬಾಲಕ, 10 ವರ್ಷದ ಬಾಲಕಿಗೆ ಪಾಸಿಟಿವ್ ಬಂದಿದೆ.

ಕೂಜಳ್ಳಿಯ 79 ವರ್ಷದ ವೃದ್ಧ, 70 ವರ್ಷದ ವೃದ್ಧೆ, ಮಿರ್ಜಾನ್‌ನ 39 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 23 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1262 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button