Follow Us On

WhatsApp Group
Big News
Trending

ಮೂಗಿನಡಿಯಲ್ಲಿ ಬಂಗಾರ, ಮಾಸ್ಕ್‌ ನಲ್ಲೂ ಬಂಗಾರ ಸಾಗಾಟ : ಭಟ್ಕಳದ ಆರೋಪಿ ಬಂಧನ

ಭಟ್ಕಳ: ಭಟ್ಕಳ ಮೂಲದ ಅಮರ್ ಎನ್ನುವ ವ್ಯಕ್ತಿ ಮಾಸ್ಕ್‌ ನಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಅಧಿಕಾರಿಗಳು ಆತನನ್ನು ಬಂಧಿಸಿದ ಘಟನೆ ನಡೆದಿದೆ.

ಅರಬ್ ರಾಷ್ಟ್ರಗಳಿಂದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸುತ್ತಿದ್ದ ಈ ವ್ಯಕ್ತಿ ಇಲ್ಲಿನ ಕರಿಪುರಂ ವಿಮಾನ ನಿಲ್ದಾಣಕ್ಕೆ ಯುಎಇ ಇಂದ ಬಂದು ವಿಮಾನದಿಂದ ಇಳಿದಿದ್ದ. ಈತ ಮಾಸ್ಕ್ ನೊಳಗೆ ಸುಮಾರು 2 ಲಕ್ಷ ಮೌಲ್ಯದ 40 ಗ್ರಾಂ ಚಿನ್ನವನ್ನು ಅಕ್ರಮವಾಗಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದ.

ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಲು ಅನೇಕರು ವಿವಿಧ ರೀತಿಯ ಪ್ರಯತ್ನ ನಡೆಸುತ್ತಾರೆ.
ಆದರೆ ಕರೋನಾ ಸಂದರ್ಭದಲ್ಲಿ ಮಾಸ್ಕ ಉಪಯೋಗಿಸಿಕೊಂಡು ಅಕ್ರಮವಾಗಿ ಚಿನ್ನ ಸಾಗಿಸಿರುವುದು ಬೆಳಕಿಗೆ ಬಂದಿದೆ.

ಕರಿಪುರಂನಲ್ಲಿ ಇದೇ ಮೊದಲ ಬಾರಿಗೆ ಮಾಸ್ಕ್ ನಲ್ಲಿ ಚಿನ್ನವನ್ನಿಟ್ಟುಕೊಂಡು ಸಾಗಿಸಲು ಯತ್ನಿಸಿದ್ದು, ಕೋಝಿಕೋಡೆ ಏರ್ ಇಂಟಲಿಜೆನ್ಸಿ,‌ ಕ್ಯಾಲಿಕಟ್ ಯುನಿಟ್, ಕೊಚ್ಚಿನ್ ಕಸ್ಟಮ್ಸ್ ಪ್ರಿವೆಂಟಿವ್ ಅಧಿಕಾರಿಗಳು ಈ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button