Big News
Trending

ಶಿರಸಿಯಲ್ಲಿ ಕಂಪ್ಯೂಟರ್ & ಸೈಬರ್ ಸೆಂಟರ್ ಗಳ ಮೇಲೆ ದಾಳಿ: ಯಾಕೆ ಗೊತ್ತಾ?

ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ದಾಳಿ

ನಗರದಲ್ಲಿ 10ಕ್ಕೂ ಹೆಚ್ಚು ಕಡೆ ದಾಳಿ
ತಾಂತ್ರಿಕ ಸಿಬ್ಬಂದಿಗಳಿoದ ಪರಿಶೀಲನೆ

[sliders_pack id=”1487″]

ಶಿರಸಿ: ತಾಲೂಕಿನಲ್ಲಿ ಏಕಾಏಕಿ ವಿವಿಧ ಕಂಪ್ಯೂಟರ್ ಸೆಂಟರ್, ಸೈಬರ್ ಸೆಂಟರ್ ಗಳ ಮೇಲೆ ಕಂದಾಯ, ಆಹಾರ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಅನೇಕ ಕಂಪ್ಯೂಟರ್ ಮತ್ತು ಸೈಬರ್ ಸೆಂಟರ್‌ಗಳು ಯಾವುದೇ ಪರವಾನಿಗೆ ಪಡೆಯದೇ ಸೇವೆ ಹೆಸರಿನಲ್ಲಿ ಗ್ರಾಹಕರ ಸುಲಿಗೆ ನಡೆಸುತ್ತಿರುವ ಬಗ್ಗೆ ಇಲಾಖೆಗಳಿಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.


ಅಲ್ಲದೆ, ನಕಲಿ ಪಾಸಪೋಟ್, ಆಧಾರ್ ಕಾರ್ಡ್ ತಯಾರಿಸಿ ಕೊಡುತ್ತಿರುವ ಆರೋಪಗಳು ಇದ್ದವು. ಈ ಹಿಂದೆ ನಕಲಿ ಪಾಸಪೋರ್ಟ ಪ್ರಕರಣ ಶಿರಸಿ ಗ್ರಾಮೀಣ ಠಾಣೆಯಲ್ಲಿ ಬೆಳಕಿಗೆ ಬಂದಿತ್ತು. ದಾಖಲೆ ಪರಿಶೀಲಿಸಿದ ಅಧಿಕಾರಿಗಳ ತಂಡವು ಯಾವುದೇ ದಾಖಲೆ, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳು, ಅದರಲ್ಲಿಯ ದಾಖಲೆ ನಾಶ ಪಡಿಸುವ ಅಥವಾ ಬದಲಾಯಿಸದಂತೆ ಎಚ್ಚರಿಕೆ ನೀಡಿ, ತೆರಳಿದೆ.


ಜಿಲ್ಲಾಧಿಕಾರಿ ಹರೀಶ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರ ನೇತೃತ್ವದಲ್ಲಿ ಡಿವೈ ಎಸ್ಪಿ ಜಿ.ಟಿ.ನಾಯ್ಕ, ಸಿಪಿಐ ಪ್ರದೀಪ ಬಿ.ಯು., ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಆಹಾರ ನಿರೀಕ್ಷಕ ನಾಗರಾಜ, ಪಿಎಸೈ ಶಿವಾನಂದ ಮತ್ತು ಕಂದಾಯ ಇಲಾಖೆಯ ತಾಂತ್ರಿಕ ಸಿಬ್ಬಂದಿಗಳು ನಗರದ ಹಲವೆಡೆ ದಾಳಿ ನಡೆಸಿದ್ದಾರೆ.


ವಿಸ್ಮಯ ನ್ಯೂಸ್, ಶಿರಸಿ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button