ಯಾವೆಲ್ಲ ವಾಹನ ಸಂಚಾರಕ್ಕೆ ಇರಲಿದೆ ಅನುಮತಿ
ಯಾವೆಲ್ಲ ವಾಹನ ಸಂಚಾರಕ್ಕೆ ನಿರ್ಭಂಧ?
ಇoದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟ
ಕುಮಟಾ-ಶಿರಸಿ ರಸ್ತೆ ಕಾಮಗಾರಿಯ ಕುರಿತಾಗಿ ಚರ್ಚೆ ನಡೆಸಲು ಕುಮಟಾ ಸಹಾಯಕ ಆಯುಕ್ತರಾದ ಅಜೀತ್ ಎಂ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಿ.ಡಬ್ಲ್ಯು.ಡಿ ಎಂಜಿನಿಯರ್ಸ್,, ಸಾರಿಗೆ, ಪೋಲಿಸ್ ಮುಂತಾದ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಭೆಯನ್ನು ಕುಮಟಾ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳಾದ ಹರೀಶಕುಮಾರ್ ಅವರ ನಿರ್ಧೇಶನದಂತೆ ಕುಮಟಾ-ಶಿರಸಿ ರಸ್ತೆ ಕಾಮಗಾರಿಯ ಸಂಬoದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಿ.ಡಬ್ಲ್ಯು.ಡಿ, ಸಾರಿಗೆ, ಪೋಲಿಸ್ ಇನ್ನಿತರ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ 18 ತಿಂಗಳುಗಳ ಕಾಲವೂ ಸಂಪೂರ್ಣ ರಸ್ತೆ ಬಂದ್ ಮಾಡಬಾರದೆಂದು ತೀರ್ಮಾನಿಸಲಾಗಿದೆ ಎಂದರು.
ಕುಮಟಾದಿoದ ಶಿರಸಿಯ ವರೆಗೆ ಸಮತೋಲನವಿರುವಂತ ಪ್ರದೇಶದಲ್ಲಿ ಹಾಗೂ ಕಾಮಗಾರಿ ನಡೆಸುವ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ವಾಹನ ಸಂಚಾರಕ್ಕೆ ಅನೂಕೂಲವಾಗುವಂತಹ ಜಾಗವಿರುತ್ತದೆಯೋ ಅಲ್ಲಿಂದಲೇ ಲಘು ವಾಹನವು ಸಂಚರಿಸುವoತೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಘಾಟ್ ಸೆಕ್ಷನ್ ಹಾಗೂ ಬ್ರಿಡ್ಜ್ಗಳಿರುವ ಭಾಗದಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮಾತ್ರ ಸಂಪೂರ್ಣವಾಗಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ. ಅದರ ಕುರಿತಾಗಿ ತಾಲೂಕಾಡಳಿತಕ್ಕೆ ಹಾಗೂ ಪೋಲಿಸ್ ಇಲಾಖೆಗೆ ರಸ್ತೆ ಕಾಮಗಾರಿಗೆ ಸಂಬoಧಪಟ್ಟ ಅಧಿಕಾರಿಗಳು ಮುಂಚಿತವಾಗಿ ಮಾಹಿತಿ ನೀಡಲಿದ್ದು, ಅದನ್ನು ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಷ್ಟಕರ ಮತ್ತು ಭಾರೀ ತಿರುವಿನ ಭಾಗದಲ್ಲಿ ಕಾಮಗಾರಿ ನಡೆಸುವ ದಿನವನ್ನು ಹೊರತುಪಡಿಸಿ ಬೇರೆಲ್ಲಾ ದಿನಗಳಲ್ಲಿಯೂ ಸಹ ಲಘು ವಾಹನಗಳಿಗೆ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತದೆ. ಟೆನ್ ವೀಲರ್, ಟ್ಯಾಂಕರ್ ಸೇರಿದಂತೆ ಇನ್ನಿತರ ದೊಡ್ಡ ವಾಹನಗಳು ಮಾತ್ರ ಕುಮಟಾ-ಶಿರಸಿ ರಸ್ತೆ ಮಾರ್ಗವಾಗಿ ಸಂಚರಿಸುವoತಿಲ್ಲ. ಇಂತಹ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ನಾಮ ಪಲಕ ಸೇರಿದಂತೆ ರಸ್ತೆ ಕಾಮಗಾರಿಗೆ ಸಂಬoದಪಟ್ಟ ಎಲ್ಲಾ ಮುಂಜಾಗೃತ ಕ್ರಮಗಳನ್ನು ವಹಿಸಿ ಇನ್ನು ಒಂದು ವಾರದೊಳಗಾಗಿ ಕಾಮಗಾರಿ ಪ್ರಾರಂಭಿಸುವದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಇದೇ ವೇಳೆ ಸಹಾಯಕ ಆಯುಕ್ತರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕುಮಟಾ ತಹಶೀಲ್ಧಾರ ಮೇಘರಾಜ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ಸಿ.ಟಿ ನಾಯ್ಕ, ಕುಮಟಾ ಪಿ.ಎಸ್.ಐ ಆನಂದಮೂರ್ತಿ, ಸಹಾಯಕ ಅಭಿಯಂತರರಾದ ಆರ್.ಜಿ ಗುನಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಕಿರಣ ಹುಬ್ಬಣ್ಣನವರ್, ಗುತ್ತಿಗೆದಾರರಾದ ಗೋವಿಂದ್ ಭಟ್ ಮುಂತಾದವರು ಹಾಜರಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ