Follow Us On

WhatsApp Group
Uttara Kannada
Trending

ರಾಷ್ಟ್ರೀಯ ಹೆದ್ದಾರಿಯಿಂದ ಪಲ್ಟಿಹೊಡೆದು ಹೊಂಡಕ್ಕೆ ಬಿದ್ದ ಗ್ಯಾಸ್ ಟ್ಯಾಂಕರ್‌: ಗ್ರಾಮಸ್ಥರಲ್ಲಿ ಆತಂಕ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪಟ್ಟಣದ ನಿಶಾತ್ ನರ್ಸಿಂಗ್ ಹೋಮ್ ಸಮೀಪ ಖಾಲಿ ಗ್ಯಾಸ್ ಟ್ಯಾಂಕರ್‌ ಪಲ್ಟಿಯಾಗಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ಗೋವಾದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ
ಅಡುಗೆ ಅನಿಲ ತುಂಬುವ ಖಾಲಿ ಹಿಂದುಸ್ಥಾನ ಪೆಟ್ರೋಲಿಯಂ ಕಂಪನಿಗೆ ಸೇರಿದ (ಕೆಎ01,ಸಿ-9476) ಎನ್ನುವ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಇದ ಹೊಂಡ ಕ್ಕೆ ಪಲ್ಟಿಯಾಗಿ ಬಿದ್ದಿದೆ.

ಟ್ಯಾಂಕರ್‌ ಖಾಲಿ ಇದ್ದ ಕಾರಣ ಅನಾಹುತ ಸಂಭವಿಸಿಲ್ಲ. ಟ್ಯಾಂಕರನಲ್ಲಿ ಚಾಲಕ ಮಾತ್ರವಿದ್ದು ಚಾಲಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದು ಎನ್ನಲಾಗಿದೆ. ಟ್ಯಾಂಕರ್ ಅಪಘಾತ ಪ್ರಕರಣ ಹೆಚ್ಚುತ್ತಿದ್ದು, ಹೆದ್ದಾರಿ ಸುತ್ತಲಿನ ಗ್ರಾಮಸ್ಥರು ಆತಂಕಗೊoಡಿದ್ದರು.. ಟ್ಯಾಂಕರ್ ಪಲ್ಟಿಯಾಗಿದ್ದನ್ನು ನೋಡಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊoಡಿದ್ದು, ಖಾಲಿ ಟ್ಯಾಂಕರ್ ಎಂದು ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಉರುಳಿಬಿದ್ದ ಟ್ಯಾಂಕರ್

ಸ್ಥಳಕ್ಕೆ ನಗರ ಠಾಣೆ ಪೋಲಿಸರು ತೆರಳಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button