Follow Us On

Google News
Info
Trending

ಬುಧವಾರ, ಗುರುವಾರ ಭಾರೀ ಮಳೆಯ ಮುನ್ಸೂಚನೆ

ಗುರುವಾರದ ತನಕ ಜಿಲ್ಲೆಯಲ್ಲೂ ಮಳೆ
ಹವಾಮಾನ ಇಲಾಖೆ ಮುನ್ಸೂಚನೆ

ಕಾರವಾರ: ಉತ್ತರಕನ್ನಡ ಜಿಲ್ಲೆ, ದಕ್ಷಿಣಕನ್ನಡ, ಉಡುಪಿ ಸೇರಿ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಗುರುವಾರದ ತನಕ ಭಾರೀ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಅಕ್ಟೋಬರ್ ಹದಿಮೂರರಿಂದ ಹದಿನೈದು ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಉತ್ತರಕನ್ನಡ ಸೇರಿದಂತೆ ದಕ್ಷಿಣ ಕನ್ನಡ , ಉಡುಪಿ ಗುರುವಾರ ತನಕ ಭಾರೀ ಮಳೆ ಸಾಧ್ಯತೆ ಇದೆ. ಬಾರೀ ಗಾಳಿ ಬೀಸುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತುಮಕೂರು ಶಿವಮೊಗ್ಗ ಕೊಡಗು ಚಿತ್ರದುರ್ಗ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ಬಳ್ಳಾರಿ ಗದಗ ಬೆಳಗಾವಿ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆಯಾಗಿದೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button
Idagunji Mahaganapati Chandavar Hanuman