Important
Trending

ಕುಮಟಾ, ಹೊನ್ನಾವರದ ಇಂದಿನ ಕರೊನಾ ವಿವರ

ಹೊನ್ನಾವರ ತಾಲೂಕಿನಲ್ಲಿ ಇದುವರೆಗೂ 12 ಸಾವಿರ ಜನರಿಗೆ ಟೆಸ್ಟ್
ಕುಮಟಾದಲ್ಲಿ 28, ಹೊನ್ನಾವರದಲ್ಲಿ ಏಳು ಪಾಸಿಟಿವ್

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 25 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ರಥಬೀದಿಯಲ್ಲಿ 5, ಬಿದ್ರಗೇರಿ 4, ಗೋಕರ್ಣ 2, ಸೇರಿದಂತೆ ಕತಗಾಲ್, ಕಿಮಾನಿ, ಉಲ್ಲಾಸ ನಗರ, ಬೆಲೆಹಿತ್ಲ, ಧಾರೇಶ್ವರ, ಕೋಡ್ಕಣಿ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಬೆಲೆಹಿತ್ಲದ 38 ವರ್ಷದ ಪುರುಷ, ಚೌಡ್ಗೇರಿಯ 59 ವರ್ಷದ ಪುರುಷ, 48 ವರ್ಷದ ಪುರುಷ, ಬಂಗ್ಲೇಗುಡ್ಡದ 42 ವರ್ಷದ ಪುರುಷ, ಬಿದ್ರಗೇರಿಯ 17 ವರ್ಷದ ಬಾಲಕ, 36 ವರ್ಷದ ಪುರುಷ, 25 ವರ್ಷದ ಯುವತಿ, 63 ವರ್ಷದ ವೃದ್ಧೆ, ಧಾರೇಶ್ವರದ 27 ವರ್ಷದ ಯುವತಿಗೆ ಪಾಸಿಟಿವ್ ಬಂದಿದೆ.

ಕಿಮಾನಿಯ 18 ವರ್ಷದ ಮಹಿಳೆ, 70 ವರ್ಷದ ವೃದ್ಧೆ, 17 ವರ್ಷದ ಯುವತಿ, 65 ವರ್ಷದ ವೃದ್ಧೆ, ಉಲ್ಲಾಸನಗರದ 43 ವರ್ಷದ ಮಹಿಳೆ, ರಥಬೀದಿಯ 17 ವರ್ಷದ ಯುವಕ, 19 ವರ್ಷದ ಯುವಕ, 57 ವರ್ಷದ ಮಹಿಳೆ, 54 ವರ್ಷದ ಮಹಿಳೆ, 85 ವರ್ಷದ ವೃದ್ಧೆಗೆ ಸೋಂಕು ಕಂಡುಬAದಿದೆ.

ಚಿತ್ರಗಿಯ 69 ವರ್ಷದ ವೃದ್ಧ, ಕೊಡ್ಕಣಿಯ 48 ವರ್ಷದ ಮಹಿಳೆ, ಗೋಕರ್ಣದ 50 ವರ್ಷದ ಮಹಿಳೆ, 16 ವರ್ಷದ ಬಾಲಕಿ, ಸಂತೇಗುಳಿಯ 82 ವರ್ಷದ ವೃದ್ಧೆ, ಕತಗಾಲ್‌ನ 78 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 25 ಸೋಂಕಿತ ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1574 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಏಳು ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು ಏಳು ಜನರಲ್ಲಿ ಕರೊನಾ ಕೇಸ್ ದೃಢಪಟ್ಟಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ 12 ಸಾವಿರಕ್ಕೂ ಅಧಿಕ ಜನರನ್ನು ಟೆಸ್ಟ್ ಗೆ ಒಳಪಡಿಸಲಾಗಿದ್ದು, ಇದರಲ್ಲಿ ಒಟ್ಟು 1151 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.


ಹೊನ್ನಾವರ ಪಟ್ಟದ ಕಸಬಾಗುಂಡಿಬೈಲನ 33 ವರ್ಷದ ಪುರುಷ, ಮಂಕಿಯ 42 ವರ್ಷದ ಪುರುಷ, ಮಂಕಿ ಗುಳದಕೇರಿಯ 26 ವರ್ಷದ ಯುವಕ, ಹಳದೀಪುರ ಜೋಗನಕಟ್ಟೆಯ 25 ವರ್ಷದ ಯುವತಿ, 14 ವರ್ಷದ ಬಾಲಕ, ಮಾಡಗೇರಿಯ 30 ವರ್ಷದ ಯುವಕ, ಖರ್ವಾದ 35 ವರ್ಷದ ಪುರುಷ ಸೇರಿ ಇಂದು ಏಳು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇಂದು ಐವರು ಡಿಸ್ಚಾರ್ಜ್ ಆಗಿದ್ದು, ಆಸ್ಪತ್ರೆಯಲ್ಲಿ 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 81 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button