Info
Trending

ಉತ್ತರ ಕನ್ನಡದಲ್ಲಿ ಇಂದು 109 ಪಾಸಿಟಿವ್

ಜಿಲ್ಲೆಯಲ್ಲಿಂದು ನಾಲ್ವರ ಸಾವು:
ಒಟ್ಟು 131 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 109 ಜನರಿಗೆ ಕರೊನಾ ಕೇಸ್ ದೃಢಪಟ್ಟಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 10, ಅಂಕೋಲಾ 15, ಕುಮಟಾ 32, ಹೊನ್ನಾವರ 13, ಶಿರಸಿ 3, ಸಿದ್ದಾಪುರ 6, ಯಲ್ಲಾಪುರ 4, ಮುಂಡಗೋಡ 16, ಹಳಿಯಾಳದಲ್ಲಿ 1 ಮತ್ತು ಜೋಯ್ಡಾದಲ್ಲಿ 9 ಕೇಸ್ ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಇಂದು ಒಟ್ಟು 131 ಮಂದಿ ಬಿಡುಗಡೆಯಾಗಿದ್ದು, ಕಾರವಾರ 31, ಅಂಕೋಲಾ 10, ಕುಮಟಾ 9, ಹೊನ್ನಾವರ 15, ಭಟ್ಕಳ 19, ಶಿರಸಿ 10, ಸಿದ್ದಾಪುರ 10, ಯಲ್ಲಾಪುರ 9, ಮುಂಡಗೋಡ 18 ಸೇರಿ 131 ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಇಂದು ನಾಲ್ವರು ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 153ಕ್ಕೆ ಏರಿಕೆಯಾಗಿದೆ. ಹೊನ್ನಾವರ 1, ಸಿದ್ದಾಪುರ 1, ಮುಂಡಗೋಡ ಮತ್ತು ಹಳಿಯಾಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಇಂದು 109 ಕೇಸ್ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11,814ಕ್ಕೆ ಏರಿಕೆಯಾಗಿದೆ. 589 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಸಿಯಲ್ಲಿ 22 ಮಂದಿಗೆ ಪಾಸಿಟಿವ್:

ಶಿರಸಿಯಲ್ಲಿಂದು 22 ಮಂದಿಗೆ ಕೊರೊನಾ ದೃಢಪಟ್ಟಿದ್ದು, 27 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1372ಕ್ಕೆ ಏರಿಕೆಯಾಗಿದೆ. ಈವರೆಗೆ 1223 ಮಂದಿ ಗುಣಮುಖರಾಗಿದ್ದಾರೆ. 825 ಮಂದಿ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬಾಳೆಗದ್ದೆಯಲ್ಲಿ 3, ಯಲ್ಲಾಪುರ ನಾಕಾದಲ್ಲಿ 2, ಮರಾಠಿಕೊಪ್ಪಾದಲ್ಲಿ 2, ಅಶೋಕನಗರದಲ್ಲಿ 1, ಗಾಂಧಿನಗರದಲ್ಲಿ 2, ಇಸಳೂರಿನಲ್ಲಿ 1, ಝೂ ಸರ್ಕಲ್‍ನಲ್ಲಿ 1, ನಿಲೇಕಣಿಯಲ್ಲಿ 1, ಬೈರುಂಭೆಯಲ್ಲಿ 1, ರಾಜೀವನಗರದಲ್ಲಿ 1, ಎಕ್ಕಂಬಿಯಲ್ಲಿ 3, ಬಿಸಲಕೊಪ್ಪದಲ್ಲಿ 1, ಕಸ್ತೂರ ಬಾ ನಗರದಲ್ಲಿ 1, ಕೂರ್ಸೆ ಕಂಪೌಂಡ್ ನಲ್ಲಿ 1, ಬನವಾಸಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button