ಹೊನ್ನಾವರದಲ್ಲಿ 12, ಕುಮಟಾದಲ್ಲಿ 10 ಕರೊನಾ ಕೇಸ್ ದಾಖಲು

ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1584 ಕ್ಕೆ ಏರಿಕೆ
ಹೊನ್ನಾವರದಲ್ಲಿ ಎಲ್ಲ ಕೇಸ್ ಗ್ರಾಮೀಣ ಭಾಗದಲ್ಲೇ ಪತ್ತೆ

[sliders_pack id=”1487″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 10 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ದಿವಗಿಯಲ್ಲಿ 6 ಪ್ರಕರಣ ಸೇರಿದಂತೆ ಹೊಳೆಗದ್ದೆ, ಕೊಡ್ಕಣಿ, ಊರಕೇರಿ, ಚೌಡಗೇರಿ ಭಾಗದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

ದಿವಗಿಯ 85 ವರ್ಷದ ವೃದ್ಧೆ, 58 ವರ್ಷದ ಮಹಿಳೆ, 84 ವರ್ಷದ ವೃದ್ಧ, 54 ವರ್ಷದ ಪುರುಷ, 49 ವರ್ಷದ ಪುರುಷ, 50 ವರ್ಷದ ಮಹಿಳೆ, ಊರಕೇರಿಯ 75 ವರ್ಷದ ವೃದ್ಧ, ಚೌಡಗೇರಿಯ 63 ವರ್ಷದ ಪುರುಷ, ಹೋಳೆಗದ್ದೆಯ 25 ವರ್ಷದ ಯುವತಿ, ಕೋಡ್ಕಣಿಯ 21 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ. ಇಂದು 10 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1584 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ 12 ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು 12 ಜನರಲ್ಲಿ ಕರೊನಾ ಕಾಣಿಸಿಕೊಂಡಿದೆ. ಇಂದು ಗ್ರಾಮೀಣ ಭಾಗದಲ್ಲಿಯೇ ಎಲ್ಲಾ ಕೇಸ್ ದಾಖಲಾಗಿದೆ.


ತಾಲೂಕಿನ ಕರ್ಕಿಯ 23 ವರ್ಷದ ಯುವಕ, ಜಲವಳ್ಳಿಯ 17 ವರ್ಷದ ಯುವತಿ, 18 ವರ್ಷದ ಯುವಕ, ಹಡಿನಬಾಳದ 21 ವರ್ಷದ ಯುವಕ, 15 ವರ್ಷದ ಬಾಲಕಿ, 65 ವರ್ಷದ ಮಹಿಳೆ, 37 ವರ್ಷದ ಪುರುಷ, 35 ವರ್ಷದ ಮಹಿಳೆ, 32 ವರ್ಷದ ಯುವತಿ, ಗುಂಡಬಳಾದ 32 ವರ್ಷದ ಮಹಿಳೆ, 61 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

ಗುಣವಂತೆಯ 66 ವರ್ಷದ ಮಹಿಳೆ ಸೇರಿ ಒಟ್ಟು 12 ಜನರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಇಂದು ಒಟ್ಟು 16 ಜನರು ಡಿಸ್ಚಾರ್ಜ್ ಆಗುತ್ತಿದ್ದು, ತಾಲೂಕಾ ಆಸ್ಪತ್ರೆಯಲ್ಲಿ 13 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Exit mobile version