ಮಾಹಿತಿ
Trending

ಬನವಾಸಿ ಅನಾನಸ್ ಬೆಳೆ ಖ್ಯಾತಿಯ ಪ್ರಗತಿಪರ ಕೃಷಿಕ ನಿಧನ

ರಾಷ್ಟ್ರಮಟ್ಟದಲ್ಲಿ ಬನವಾಸಿ ಅನಾನಸ್ ಪರಿಚಯ
ಎಕರೆಯೊಂದಕ್ಕೆ 40 ಟನ್ ಅನಾನಸ್!

ಶಿರಸಿ: ರಾಷ್ಟ್ರಮಟ್ಟದಲ್ಲಿ ತಾಲೂಕಿನ ಅನಾನಸ್ ಬೆಳೆಯನ್ನು ಪರಿಚಯಿಸಿದ್ದ, ಪ್ರಗತಿಪರ ಕೃಷಿಕ ಬನವಾಸಿಯ ಡಾ.ಅಬ್ದುಲ್ ರವೂಫ್ ಶೇಖ್ (75) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಳ್ಳಿಗಾಡಿನಲ್ಲಿದ್ದು ಯಾಂತ್ರೀಕರಣ, ನವೀನತೆ ಜತೆ ನಿಖರತೆಯನ್ನು ಕೃಷಿ ಕ್ಷೇತ್ರದಲ್ಲಿ ಇವರು ಪರಿಚಯಿಸಿದ್ದರು.

ವೈಜ್ಞಾನಿಕ ಕೃಷಿ ಪದ್ದತಿಯ ಮೂಲಕ ಎಕರೆಯೊಂದಕ್ಕೆ 30 ಟನ್ ಅನಾನಸ್ ಬೆಳೆದು ಗಮನ ಸೆಳೆದಿದ್ದರು. ಮೊದಲ ಬಾರಿಗೆ ಬನವಾಸಿ ಅನಾನಸ್ ಗೆ ಬೆಂಗಳೂರು, ಹೈದ್ರಾಬಾದ್, ಮುಂಬೈ ಹಾಗೂ ಗೋವಾ ಮಾರುಕಟ್ಟೆ ಪರಿಚಯಿಸಿ ಅನಾನಸ್ ಬೆಳೆಗಾರರಿಗೆ ಸ್ಪೂರ್ತಿ ತುಂಬಿದ್ದರು.

ಇವರಿಗೆ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ, 2006 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಟಿ.ಎಸ್.ಎಸ್. ಸಂಸ್ಥೆಯ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ಮೃತರು ಪತ್ನಿ, ಆರು ಪುತ್ರರು, 4 ಪುತ್ರಿಯರು ಸೇರಿ ಅಪಾರ ಬಂಧು ಬಳಗ ಅಗಲಿದ್ದಾರೆ.

ವಿಸ್ಮಯ ನ್ಯೂಸ್ ಶಿರಸಿ

Related Articles

Back to top button