ಈ ರಸ್ತೆಯಲ್ಲಿ ಬಾಯ್ತೆರೆದುಕೊಂಡಿದೆ ಸಾವಿನ ಹೊಂಡಗಳು

ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆರಿಸಲಾಗುತ್ತಿದ್ದು, ಗುತ್ತಿಗೆ ಪಡೆದ ಕಂಪನಿ ಕಾಮಗಾರಿಗೆ ಎರಡು ವರ್ಷಗಳ ಕಾಲಾವಕಾಶ ಕೇಳಿದೆ. ಆದರೆ ಕರಾವಳಿ ಹಾಗೂ ಮಲೆನಾಡು ಭಾಗವನ್ನು ಬೆಸೆಯುವ ಪ್ರಮುಖ ಹೆದ್ದಾರಿಯೇ ಇದಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗದoತೆ ತಡೆಯಲು ಜಿಲ್ಲಾಡಳಿತ ಬದಲಿ ಮಾರ್ಗಗಳನ್ನು ಸೂಚಿಸಿದೆ. ಆದರೆ ಗುರುತಿಸಿದ ಬದಲಿ ರಸ್ತೆಯೊಂದು ದುರಸ್ಥಿಗೆ ತಲುಪಿ ಹಲವು ವರ್ಷಗಳೇ ಕಳೆದಿದ್ದು, ಗುಂಡಿಗಳಿoದಲೇ ತುಂಬಿರುವ ರಸ್ತೆಯಲ್ಲಿ ಸಂಚರಿಸುವುದು ಇದೀಗ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.


ಹೌದು, ಶಿರಸಿ-ಕುಮಟಾ-ಬೆಲೆಕೇರಿ ರಾಷ್ಟ್ರೀಯ ಹೆದ್ದಾರಿ ಯನ್ನಾಗಿಸಲು ಭಾರತ್ ಮಾಲಾ ಪರಿಯೋಜನಾ ಅಡಿಯಲ್ಲಿ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ 60 ಕಿ.ಮೀ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಈ ಸಂಬoಧ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆಯನ್ನು 18 ತಿಂಗಳ ಕಾಲ ಬಂದ್ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿತ್ತು. ಅದರಂತೆ ಜಿಲ್ಲಾಡಳಿತ ಹೆದ್ದಾರಿಗಳಲ್ಲಿ ಭಾರಿ ವಾಹನಗಳಿಗೆ ನಿಷೇಧ ಹೇರಿ ಪರ್ಯಾಯ ಮಾರ್ಗ ಸೂಚಿಸಿದೆ.

ಶಿರಸಿ ಹೋಗಿ ಬರುವವರಿಗೆ ಯಲ್ಲಾಪುರದ ಮೇಲೆ ಎನ್‌ಎಚ್ 63ರಲ್ಲಿ ತೆರಳುವಂತೆ, ಹೊನ್ನಾವರ ಭಾಗದಿಂದ ಹೋಗುವವರು ಮಾವಿನಗುಂಡಿ ರಸ್ತೆ ಮೂಲಕ ಮತ್ತು ಕುಮಟಾದಿಂದ ಬಡಾಳ ದೊಡ್ಮನೆ ಘಟ್ಟದ ಮೂಲಕ ಸಿದ್ದಾಪುರಕ್ಕೆ ತೆರಳಿ ಶಿರಸಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.

ಆದರೆ ಕುಮಟಾ ಬಡಾಳ ಸಿದ್ದಾಪುರ ಮಾರ್ಗವಾಗಿ ಸೂಚಿಸಿದ ರಸ್ತೆಯೂ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು ಕೆಲವೆಡೆ ಸಂಚಾರ ಮಾಡುವುದಕ್ಕೆ ಹರಸಾಹ ಪಡಬೇಕಾದ ಸ್ಥಿತಿ ಇದೆ. ಅದರಲ್ಲೂ ದೊಡ್ಮನೆ ಘಟ್ಟ ಪ್ರದೇಶ ಹಾಗೂ ಸಿದ್ದಾಪುರ ಪಟ್ಟಣದ ಆರಂಭದಲ್ಲಿದಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದಿದ್ದು, ಸಂಚಾರ ಮಾಡಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಈ ಕುರಿತ ವಿಡಿಯೋ ಇಲ್ಲಿದೆ ನೋಡಿ

ಒಟ್ಟಾರೆ ಶಿರಸಿ ಕುಮಟಾ ರಸ್ತೆಯನ್ನು ಮೇಲ್ದರ್ಜೆಗೆರಿಸುವ ಕಾರಣ ಎರಡು ವರ್ಷಗಳ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಈ ಕಾರಣದಿಂದ ಕುಮಟಾ ಭಾಗದಿಂದ ಶಿರಸಿ ತೆರಳುವ ವಾಹನಗಳು ಅನಿವಾರ್ಯವಾಗಿ ಬಡಾಳ ಸಿದ್ದಾಪುರ ಮಾರ್ಗವಾಗಿ ಸಂಚಿರಿಸಬೇಕಾಗಿದ್ದು ಆದಷ್ಟು ಬೇಗ ಹದಗೆಟ್ಟಿರುವ ರಸ್ತೆ ದುರಸ್ತಿಗೊಳಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version