Follow Us On

Google News
Uttara Kannada
Trending

ಮಲಗಿದ್ದ ವೇಳೆ ಹಿತ್ತಿಲ ಬಾಗಿಲಿಂದ ಮನೆಯೊಳಗೆ ಬಂದ ಕಳ್ಳರು

ಚಿನ್ನಾಭರಣ-ನಗದು ದೋಚಿ ಪರಾರಿ
ಮನೆಯವರು ಮಲಗಿದ್ದ ವೇಳೆ ದುಷ್ಕೃತ್ಯ

[sliders_pack id=”1487″]

ಮುಂಡಗೋಡ: ಮನೆಯಲ್ಲಿ ಮಲಗಿದ್ದಾಗ ಹಿಂದಿನ ಬಾಗಿಲಿಂದ ಒಳಗೆ ನುಗ್ಗಿದ ಯಾರೋ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣ ಹಾಗೂ ನಗದು ದೋಚಿಕೊಂಡು ಹೋದ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ನಡೆದಿದೆ. ಮನೆಯೊಳಗೆ ನುಗ್ಗಿದ ಕಳ್ಳರು, 2 ಲಕ್ಷ 52 ಸಾವಿರ ರೂಪಾಯಿ ಬೆಲೆ ಬಾಳುವ 56ಗ್ರಾಂ ಚಿನ್ನದ ಆಭರಣ, ಮತ್ತು 30 ಸಾವಿರ ರೂಪಾಯಿ ನಗದನ್ನು ಕದ್ದಿದ್ದಾರೆ.


ಕುಟುಂಬದವರು ಎಲ್ಲರು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಹಿಂದಿನ ಬಾಗಿಲಿನಿಂದ ಒಳನುಗ್ಗಿದ ಯಾರೋ ಕಳ್ಳರು ಮನೆಯ ದೇವರ ಕೊಣೆಯಲ್ಲಿರುವ ಕಬ್ಬಿಣದ ಕಪಾಟಿನಲ್ಲಿಟ್ಟ 20 ಗ್ರಾಂ ತೂಕದ ಅವಲಕ್ಕಿ ಸರ, 16ಗ್ರಾಂ ತೂಕದ ಚೈನ, 6ಗ್ರಾಂ ತೂಕದ ಜುಮಕಿ, 3ಗ್ರಾಂ ತೂಕದ ಬೆಂಡೋಲೆ, 3ಗ್ರಾಂ ತೂಕದ ಕಿವಿ ಚೈನ್, 2ಗ್ರಾಂ ತೂಕದ ಗುಂಡುಗಳು, 4ಗ್ರಾಂ ತೂಕದ ಡ್ರಾಪ್ಸ್, 2ಗ್ರಾಂ ತೂಕದ ರಿಂಗ ಹಾಗೂ ನಗದು 30.000 ರೂಪಾಯಿ ಸೇರಿ ಸುಮಾರು 2,82,000ರೂ ಕಳ್ಳರು ಕಳ್ಳತನ ಮಾಡಿಕೋಂಡು ಹೋಗಿದ್ದಾರೆ.


ಈ ಸಂಬoಧ ಮನೆಯವರು ರಾಣೇಬೆನ್ನೂರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಪ್ರಭುಗೌಡ್ ಡಿ.ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮಾಹಿತಿ ಸಂಗ್ರಹಿಸಿ, ತನಿಕೆ ಮುಂದುವರಿಸಿದ್ದಾರೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button