ಲಕ್ಷಾಂತರ ಬೆಲೆಯ ವೈಯರ್ ಬಂಡಲ್ ಕಾರಿನಲ್ಲಿ ತುಂಬಿಕೊoಡು ಹೋದ
ಸಿಸಿಟಿವಿಯಲ್ಲಿ ಸೆರೆಯಾಗಿದೆ ಕೃತ್ಯ
ಕುಮಟಾ: ಖರೀದಿ ನೆಪಮಾಡಿಕೊಂಡು ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಎಲೆಕ್ಟ್ರಿಕಲ್ ಅಂಗಡಿಯಿoದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೈರಿಂಗ್ ಬಂಡಲ್ ತೆಗೆದುಕೊಂಡು ಹೋದ ಘಟನೆ ಎಸ್‌ಬಿಐಬ್ಯಾಂಕ್ ಎದುರಿನ ಎಲೆಕ್ಟ್ರಿಕಲ್ ಅಂಗಡಿಯೊoದರಲ್ಲಿ ನಡೆದಿದೆ. ಅಂಗಡಿಗೆ ಬಂದು ಮೊದಲು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೈರಿಂಗ್ ಖರೀದಿ ಮಾಡಿದ್ದಾನೆ. ಬಳಿಕ ಅಂಗಡಿಯವನಿಗೆ ಚೆಕ್ ಮೂಲಕ ಬರೆದುಕೊಟ್ಟಿದ್ದಾನೆ.
ಆತನಿಂದ ಚೆಕ್ ಪಡೆದ ಅಂಗಡಿಯಲ್ಲಿದ್ದ ಯುವಕ ಗ್ರಾಹಕನಿಗೆ ನೀವು ಇಲ್ಲೆ ಇರಿ ಎಂದು ಹೇಳಿ ಅಲ್ಲೆ ಪಕ್ಕದಲ್ಲೇ ಇದ್ದ ಬ್ಯಾಂಕ್ ಗೆ ಹೋಗಿ ಚೆಕ್ ಹಾಕಿ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ತೆರಳಿದ್ದ. ಈ ವೇಳೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ವ್ಯಕ್ತಿ ಅಂಗಡಿಯವ ಬ್ಯಾಂಕ್ ಹೋಗಿ ಬರುವುದರೊಳಗಾಗಿ ಖರೀದಿ ಮಾಡಿದ ಲಕ್ಷಾಂತರ ಬೆಲೆಯ ವೈಯರ್ ಬಂಡಲ್ ಅನ್ನು ತನ್ನ ಕಾರಿನಲ್ಲಿ ತುಂಬಿಕೊoಡು ತೆರಳಿದ್ದಾನೆ.
ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕುಮಟಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಆತನ ಬ್ಯಾಂಕ್ ಖಾತೆಯನ್ನ ಪರಿಶೀಲಿಸಿದ್ದು, ವ್ಯಕ್ತಿಯ ಕುರಿತು ಹಲವು ಮಾಹಿತಿ ಲಭ್ಯವಾಗಿದೆ. ಈ ಸಂಬoಧ ಇನ್ನೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಇದು ಕಣ್ತಪ್ಪಿನಿಂದ ಆಗಿದ್ಯೋ? ಅಕೌಂಟ್ ನಲ್ಲಿ ಹಣ ಇಲ್ಲದಿರುವುದು ಗೊತ್ತಿಲ್ಲವೋ? ಎಂಬುದು ಇನ್ನೂ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್, ಕುಮಟಾ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.