ಮಾಹಿತಿ
Trending

ಅಂಕೋಲಾದಲ್ಲಿಂದು ಕೊವಿಡ್‍ಗೆ ಬಿಡುವು !

ಗುಣಮುಖ 14 : ಸಕ್ರಿಯ 14
ಹೋಂ ಐಸೋಲೇಶನ್ 14

ಅಂಕೋಲಾ : ತಾಲೂಕಿನಲ್ಲಿ ಸರ್ವೇ ಸಾಮಾನ್ಯವಾಗಿ ಪ್ರತಿ ದಿನ ಹೊಸ ಕೊವಿಡ್ ಕೇಸ್‍ಗಳು ಧೃಡ ಪಡುತ್ತಿದ್ದವಾದರೂ, ಭಾನುವಾರ ಸರಕಾರಿ ರಜೆ (ಬಿಡುವು) ಎಂಬಂತೆ ಯಾವುದೇ ಕೊರೊನಾ ಪ್ರಕರಣ ಗಳು ದಾಖಲಾಗಿಲ್ಲಾರಲಿಲ್ಲಾ. ಸೋಮವಾರ ಸಹ ಯಾವುದೇ ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗ ದೇ ಎರಡನೇ ದಿನವು ಬಿಡುವು ನೀಡಿದಂತಾಗಿದೆ.

ಮೊನ್ನೆಯಷ್ಟೇ ತಾಲೂಕಿನ ಆರೋಗ್ಯ ಸಂಬಂಧಿ ಹಿರಿಯ ಅಧಿಕಾರಿಯೊರ್ವರಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟ ಹಿನ್ನಲೆಯಲ್ಲಿ, ಮುಂಜಾಗೃತ ಕ್ರಮವಾಗಿ ಅವರ ಕಚೇರಿ ಮತ್ತಿತರೆಡೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ (ಸೆನಿಟೈಜೇಶನ್), ಕೊವಿಡ್ ಸಂಬಂಧಿತ ಸ್ವಾಬ್ ಟೆಸ್ಟ್ ಮತ್ತಿತರ ಕಾರ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸೋಮವಾರದಿಂದ ಎಂದಿನಂತೆ ಸಿಬ್ಬಂದಿಗಳುಕಾರ್ಯ ನಿರ್ವಹಿ ಸಿದ್ದು, 34 ರ್ಯಾಟ್,95 ಆರ್‍ಟಿಪಿಸಿಆರ್ ಸೇರಿದಂತೆ 129 ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿ ಸಲಾಗಿದೆ.

ಗುಣಮುಖರಾದ 14 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿ ರುವ 14 ಮಂದಿ ಸಹಿತಿ ಒಟ್ಟೂ 14 ಪ್ರಕರಣಗಳು ಸಕ್ರಿಯವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button