ಕರಾಳವಾಗಿ ಪರಿಣಮಿಸಿದ ದೀಪಾವಳಿ: ಮನೆಸುಟ್ಟು ಕರಕಲು

10 ಲಕ್ಷಕ್ಕೂ ಅಧಿಕ ಹಾನಿ
ಮನೆಯಲ್ಲಿನ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿ

ಶಿರಸಿ: ದೀಪಾವಳಿ ಇವರ ಪಾಲಿಗೆ ಕರಾಳವಾಗಿ ಪರಿಣಮಿಸಿದೆ. ಹೌದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿಬಿದ್ದು ಇಡೀ ಮನೆ ಸುಟ್ಟುಹೋದ ಘಟನೆ ತಾಲೂಕಿನ ಸೋಂದಾ ಬಳಿಯ ಕಡಕೋಡಿಯಲಿನಲ್ಲಿ ನಡೆದಿದೆ. ಮನೆಯ ಜೊತೆಗೆ ಮನೆಗೆ ತಾಗಿಕೊಂಡಿದ್ದ ಅಂಗಡಿಯೂ ಸುಟ್ಟುಹೋಗಿದೆ. ನೋಡನೋಡುತ್ತಿದ್ದಂತೆಯೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿಬಿದ್ದಿದ್ದು, ಸೋಪಾ, grinder, ಮಿಕ್ಸರ್ ಎಲ್ಲವೂ ಸುಟ್ಟು ಕರಕಲಾಗಿದೆ.

ಈ ಅವಘಡದಲ್ಲಿ ಸುಮಾರು 10ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಂದಾದ ಕಡಕೋಡಿಯ ಗೋಪಾಲ ನಾಯ್ಕ ಅವರಿಗೆ ಸೇರಿದ ಮನೆ ಇದು ಎಂಬ ಮಾಹಿತಿ ದೊರೆತಿದೆ.

ವಿಸ್ಮಯ ನ್ಯೂಸ್, ಶಿರಸಿ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

ನಿಮಗೆ ಬೇಕಾದ ಸುದ್ದಿಯನ್ನು ಈ ಕೆಳಗೆ ಸರ್ಚ್ ಮಾಡಿ

Exit mobile version