Important
Trending

ಉತ್ತರಕನ್ನಡದಲ್ಲಿ 21 ಕೇಸ್:34 ಮಂದಿ ಗುಣಮುಖ

ಕಾರವಾರ: ಉತ್ತರ ಕನ್ನಡದಲ್ಲಿ ಇಂದು ಒಟ್ಟು 21 ಕರೊನಾ ಸೋಂಕಿತ‌ ಪ್ರಕರಣ‌ ಪತ್ತೆಯಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ‌ ದಾಖಲಾದಂತೆ ಕಾರವಾರ 3, ಸಿದ್ದಾಪುರ 2, ಶಿರಸಿ 3, ,ಯಲ್ಲಾಪುರದಲ್ಲಿ‌ ಮೂರು ಕೇಸ್ ದಾಖಲಾಗಿದೆ. ಭಟ್ಕಳ, ಮುಂಡಗೋಡ, ಹಳಿಯಾಳ, ಜೋಯ್ಡಾದಲ್ಲಿ ಇಂದು ಯಾವುದೇ ಕೇಸ್ ದಾಖಲಾಗಿಲ್ಲ.

ಇದೇ ವೇಳೆ ಇಂದು 34 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರ 10, ಅಂಕೋಲಾ 4, ಕುಮಟಾ 6, ಭಟ್ಕಳ 7, ಶಿರಸಿ 7 ಸೇರಿ ಒಟ್ಟು 34 ಜನ ಬಿಡುಗಡೆಯಾಗಿದ್ದಾರೆ.

ಕುಮಟಾದಲ್ಲಿ ಐದು ಪಾಸಿಟಿವ್:

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಬಾಡ, ಹುಬ್ಬಣಗೇರಿ, ಗೋಕರ್ಣ ಮುಂತಾದ ಭಾಗಗಳಲ್ಲಿ ಇಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬಾಡದ 38 ವರ್ಷದ ಮಹಿಳೆ, ಗೋಕರ್ಣದ 58 ವರ್ಷದ ಮಹಿಳೆ, ಹುಬ್ಬಣಗೇರಿಯ 45 ವರ್ಷದ ಪುರುಷ, ಕುಮಟಾದ 37 ವರ್ಷದ ಮಹಿಳೆ, 44 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 5 ಪ್ರಕರಣ ದಾಖಲಾದ ಬೆನ್ನಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1945 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಒಂದು ಕೇಸ್ ದೃಢ

ಹೊನ್ನಾವರ: ತಾಲೂಕಿನಲ್ಲಿ ಇಂದು ಓರ್ವ ಮಹಿಳೆಯಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಜಡ್ಡಿದೆದ್ದೆಯ 37 ವರ್ಷದ ಮಹಿಳೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

ಶಿರಸಿಯಲ್ಲಿಂದು ಮೂರು‌ ಕೇಸ್

ಶಿರಸಿ: ತಾಲೂಕಿನಲ್ಲಿ ಶನಿವಾರ ಮೂರು ಕೊರೊನಾ ಕೇಸ್ ದೃಢವಾಗಿದೆ. ಇಂದು ಮಂಜವಳ್ಳಿಯಲ್ಲಿ 1, ಅಂಬಾಗಿರಿಯಲ್ಲಿ 1, ಕಳವೆ ಹೆಗಡೆಕಟ್ಟಾದಲ್ಲಿ 1 ಕೇಸ್ ದೃಢವಾಗಿದೆ. ಈವರೆಗೆ 1567 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 1535 ಮಂದಿ ಗುಣಮುಖರಾಗಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button