ಮಾಹಿತಿ
Trending

ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ “ ಸಪ್ತಪದಿ ಸರಳ ಸಾಮೂಹಿಕ ವಿವಾಹ ”

ಹೆಸರು ನೋಂದಾಯಿಸಲು ಹೀಗೆ ಮಾಡಿ
ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಸಂಪರ್ಕಿಸಿ

ಶಿರಸಿ : ಶ್ರೀ ಕ್ಷೇತ್ರ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಬರುವ ದಿನಾಂಕ : 10-12-2020 ರ ಗುರುವಾರ ಬೆಳಿಗ್ಗೆ 11.30 ರಿಂದ 12.40 ರ ವರೆಗೆ ಅಭಿಜಿನ್ ಲಗ್ನದ ಶುಭ ಮೂಹೂರ್ತದಲ್ಲಿ ಶ್ರೀ ದೇವಸ್ಥಾನದ ಸಭಾ ಮಂಟಪದಲ್ಲಿ ಮಾಡಬೇಕೆಂದು ನಿಶ್ಚಯಿಸಿದೆ. ಈ ಸಂದರ್ಭದಲ್ಲಿ ವಿವಾಹವಾಗಲಿಚ್ಛಿಸುವವರು ದಿನಾಂಕ : 03-12-2020 ರ ಒಳಗೆ ವಧೂ – ವರರ ಹೆಸರನ್ನು ನೋಂದಾಯಿಸಬೇಕು ಮತ್ತು ಈ ಕೆಳಗೆ ನಮೂದಿಸಿದ ದಾಖಲೆಗಳನ್ನು ಪೂರೈಸಬೇಕು.

ಹೆಸರು ನೋಂದಾಯಿಸಲು ಬೇಕಾದ ದಾಖಲೆಗಳು

(1) ವಧೂವಿಗೆ 18 ವರ್ಷ, ವರನಿಗೆ 21 ವರ್ಷ ಪೂರ್ಣಗೊಂಡಿರಬೇಕು.
(2). ಪಾಲಕರ ಒಪ್ಪಿಗೆ ಪತ್ರ ,
(3).ಜನ್ಮದಾಖಲೆ ಪ್ರಮಾಣ ಪತ್ರ / ಶಾಲಾ ದಾಖಲಾತಿ ಪ್ರಮಾಣ ಪತ್ರ,
(4) ವಧೂ-ವರರ ಪಾಸ್ ಪೋರ್ಟ ಅಳತೆಯ 2 ಫೋಟೋ ,
(5) ರೇಶನ್ ಕಾರ್ಡ / ಚುನಾವಣಾ ಗುರುತಿನ ಚೀಟಿ /ಆಧಾರ ಕಾರ್ಡು/ವಾಸ್ತವ್ಯ ಪ್ರಮಾಣ ಪತ್ರ
ಇವುಗಳ ದೃಢೀಕೃತ ಪ್ರತಿ
(6) ಕೋರ್ಟ ಅಫಿಡವಿಟ್


ವರನಿಗೆ ಧೋತಿ- ಶಾಲು, ವಧುವಿಗೆ ಸೀರೆ- ರವಿಕೆ ಖಣ ಮತ್ತು ಮಂಗಲ ಸೂತ್ರವನ್ನು ಕೊಡಲಾಗುವುದು. ಎರಡೂ ಕಡೆಯಿಂದ ಒಟ್ಟೂ 10 ಜನ ಮೀರಕೂಡದು. ಸರಕಾರಿ ಉಪನೊಂದಣಾಧಿಕಾರಿಗಳಿAದ ಸದರಿ ವಿವಾಹವನ್ನು ರಜಿಸ್ಟರ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಯನ್ನು ಶ್ರೀ ದೇವಸ್ಥಾನದ ಕಛೇರಿಯಲ್ಲಿ ಪಡೆಯಬಹುದು. ವಿವಾಹಕ್ಕೆ ನೊಂದಣಿ ಮಾಡಿಕೊಳ್ಳುವ ಅಥವಾ ತಿರಸ್ಕರಿಸುವ ಹಕ್ಕು ಶ್ರೀ ದೇವಸ್ಥಾನದ ವಿಶ್ವಸ್ಥ ಮಂಡಳಿಗೆ ಇರುತ್ತದೆ. ಯಾವುದೇ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ.
ಶ್ರೀ ದೇವಸ್ಥಾನದ ದೂರವಾಣಿ ಸಂಖ್ಯೆ : – 08384 226360
ಮಾಹಿತಿ ಪಡೆಯುವ ವೇಳೆ ಬೆಳಿಗ್ಗೆ 10-30 ರಿಂದ 2-00, ಸಂಜೆ 5-30 ರಿಂದ ರಾತ್ರಿ 9-00 ರ ವರೆಗೆ

ಡಾ. ವೆಂಕಟೇಶ.ಎಲ್.ನಾಯ್ಕ,
ಅಧ್ಯಕ್ಷರು,
ಶ್ರೀ ಮಾರಿಕಾಂಬಾ ದೇವಸ್ಥಾನ, ಶಿರಸಿ (ಉ.ಕ.).

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

[sliders_pack id=”1487″]

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

Back to top button