
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ,ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದ ಹಳದೀಪುರ ಬಗ್ರಾಣಿಯ ವಿನಾಯಕ ಶ್ರೀಧರ ಶೇಟ್ ನಿಧನರಾಗಿದ್ದಾರೆ.ನಿನ್ನೆ ಸಂಜೆ ಶಿರಸಿಯಲ್ಲಿರುವ ತಮ್ಮ ಮಾವನ ಮನೆಯಿಂದ ತುರ್ತು ಕೆಲಸದ ನಿಮಿತ್ತ ಬೈಕ್ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿ, ರಸ್ತೆಯ ತಿರುವಿನಲ್ಲಿ ವಾಹನವೊಂದು ಇವರ ಬೈಕ್ ಗೆ ಅಪ್ಪಳಿಸಿದ್ದರಿಂದ ವಿನಾಯಕ ತೀವ್ರ ತಲೆಯ ಗಾಯಕ್ಕೆ ಒಳಗಾಗಿದ್ದರು.
ತಕ್ಷಣ ಅವರನ್ನು ಹುಬ್ಬಳ್ಳಿಯ ಕೆ.ಎಂ.ಸಿ.ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಇಂದು ಮಧ್ಯಾಹ್ನ ೪ ಗಂಟೆ ವೇಳೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವಿನಾಯಕ ಶೇಟ್ ಅವರ ನಿಧನಕ್ಕೆ ಮಾಜಿ ಶಾಸಕರಾದ ಶಾರದಾಮೋಹನ್ ಶೆಟ್ಟಿ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಪ್ ತೆಂಗೇರಿ ಸೇರಿ ಹಲವು ಗಣ್ಯರು ಸಂಪಾದ ಸೂಚಿಸಿದ್ದಾರೆ.
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಬೃಹತ್ ಶೋರೂಮ್ ಬ್ರೌನ್ವುಡ್ ನಲ್ಲಿ 12 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ
- ವಿದ್ಯಾರ್ಥಿಗಳಿಗೆ ಭಗವದ್ಗೀತೆ ನೀಡಿ ಭವಿಷ್ಯಕ್ಕೆ ಶುಭ ಕೋರಿದ ಪ್ರಮುಖ ಸೌಹಾರ್ದ ಸಹಕಾರಿ
- ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ಈಗಿನಿಂದಲೇ ಸಮಯಕ್ಕೆ ಮಹತ್ವ ನೀಡಿ : ಡಾ. ಗಣೇಶ ನಾಗ್ವೇಕರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಮ್ಮೇಳನ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರಿನ ಅಭಿವೃದ್ಧಿ
- ವಿದ್ಯಾರ್ಥಿ ಸಂಸತ್ ಉದ್ಘಾಟನೆ ಹಾಗೂ ಬರಹ ಪಠ್ಯ ವಿತರಣೆ