ನೀರಿನ ಬಾಟಲಿಗಿಂತ ಸ್ವಲ್ಪ ಮಾತ್ರ ಉದ್ದ! ವಿಶ್ವದ ಅತ್ಯಂತ ಕುಳ್ಳಿ ಇವಳೇ ನೋಡಿ

ಈ ಜಗತ್ತಿನಲ್ಲಿ ಅಚ್ಚರಿಗಳಿಗೆ, ವಿಸ್ಮಯಗಳಿಗೆನೂ ಕೊರತೆಯಿಲ್ಲ. ಹಲವು ಭಿನ್ನ-ವಿಭಿನ್ನತೆಗಳು ಸುದ್ದಿಯಾಗುತ್ತಲೇ ಇರುತ್ತದೆ. ಈಗ ನಾವು ಹೇಳ್ತಾ ಇರೋದು ಕೂಡಾ ವಿಸ್ಮಯ ಜಗತ್ತಿನ ವಿಸ್ಮಯಕಾರಿ ಸುದ್ದಿ.! ಹೌದು, ಈಕೆಯದ್ದು 24 ಇಂಚು ಹೈಟು, 5 ಕೆಜಿ ವೈಟು, ವಯಸ್ಸು 26.. ಇವಳು ಒಂದು ಲೀಟರ್ ಕೋಕಾಕೋಲಾ ಬಾಟಲಿಗಿಂತ ಸ್ವಲ್ಪ ಮಾತ್ರ ಉದ್ದ ಇದ್ದಾಳೆ! ಜೋರಾಗಿ ಗಾಳಿ ಬಂದರೆ ಎಂದರೆ ಹಾರಿ ಹೋಗುತ್ತಾಳೇನೋ ಎನ್ನುವಷ್ಟು ಸಣ್ಣಗೆ ಕಾಣುತ್ತಾಳೆ.


ಜಗತ್ತಿನ ಅತ್ಯಂತ ಕುಳ್ಳ ಯುವತಿ ಎಂಬ ದಾಖಲೆಗೆ ಪಾತ್ರವಾಗಿರುವ ಜ್ಯೋತಿ ಅಮ್ಗೆ ಗಿನ್ನಿಸ್ ದಾಖಲೆಯ ರೂವಾರಿ.. ಗಿನ್ನಿಸ್ ಅಧಿಕಾರಿಗಳ ಪ್ರಕಾರ, ಜ್ಯೋತಿ ಕಳೆದ ಎರಡು ವರ್ಷಗಳಲ್ಲಿ ಕೇವಲ 1 ಸೆಂಟಿಮೀಟರ್ಗಳಿಗಿoತಲೂ ಕಡಿಮೆ ಎತ್ತರಕ್ಕೆ ಬೆಳೆದಿದ್ದಾಳೆ. ಅವಳ ಕುಬ್ಜತನಕ್ಕೆ ಅಕಾಂಡ್ರೊಪ್ಲಾಸಿಯಾ ಎನ್ನುವ ಅಂಶ ಕಾರಣವಾಗಿದೆಯಂತೆ. ಅಂದಹಾಗೆ ಈ ಜ್ಯೋತಿ, ಮಹಾರಾಷ್ಟ್ರದ ನಾಗ್ಪುರ್ ಮೂಲದಳು. ತನ್ನ ಕುಳ್ಳ ದೇಹದಿಂದಲೇ ಈಗ ಈಕೆ ವಿಶ್ವದ ಗಮನಸೆಳೆದಿದ್ದಾಳೆ


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version