Mackerel Fish in Kannada: ಬಂಗುಡೆ ಮೀನು: ಅತಿದೊಡ್ಡ ಬಂಗುಡೆ ಮೀನು ಪತ್ತೆ!

ಕಾರವಾರ: ಭಾರತದಲ್ಲಿ ಇದುವರೆಗೂ ಸಿಕ್ಕ ಬಂಗುಡೆ ಮೀನು ಸಾಮಾನ್ಯವಾಗಿ 32 ರಿಂದ 42 ಸೆಂಟಿಮೀಟರ್ ಉದ್ದ ಇತ್ತು. ಆದರೆ, ಇದೀಗ ಕಾರವಾರದಲ್ಲಿ ಪತ್ತೆಯಾದ ಬಂಗುಡೆ ಮೀನು ಹೊಸ ದಾಖಲೆ ಬರೆದಿದೆ. ಹೌದು, ದೇಶದಲ್ಲೇ ಅತಿದೊಡ್ಡ ಎನ್ನಬಹುದಾದ ಬಂಗುಡೆ ಮೀನೊಂದು (biggest mackerel fish) ಮೀನುಗಾರರ ಬಲೆಗೆ ಬಿದ್ದಿದ್ದು, ಇದು 48 ಸೆಂಟಿಮೀಟರ್ ಉದ್ದವಿದೆ. ಇದರ ತೂಕ ಸುಮಾರು ಒಂದು ಕೆ.ಜಿ.!

ಹೌದು, ಇಲ್ಲಿನ ಮೀನುಗಾರರೊಬ್ಬರಿಗೆ ಮುರ್ಡೇಶ್ವರದ ನೇತ್ರಾಣಿ ದ್ವೀಪದ ಬಳಿ ಈ ಬಂಗುಡೆ ಮೀನು ಸಿಕ್ಕಿತ್ತು. ಬಂಗುಡೆ ತಳಿಯಲ್ಲಿ ಈವರೆಗೆ ದೊರೆತ ಅತಿದೊಡ್ಡ ಗಾತ್ರ ಹಾಗು ಹೆಚ್ಚು ತೂಕದ ಮೀನು ಇದಾಗಿರಬಹುದು ಎಂದು ಕಡಲಜೀವಶಾಸ್ತ್ರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಶಿವಕುಮಾರ ಹರಗಿ ಹೇಳಿದ್ದಾರೆ. ಸದ್ಯ ಈ ಮೀನನ್ನು ಕಾರವಾರದ ಕೇಂದ್ರೀಯ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಅತಿದೊಡ್ಡ ಮೀನು ( biggest mackerel fish) ಎಂಬುದು ಸಾಬೀತಾದರೆ ರಾಷ್ಟ್ರೀಯ ಮೀನು ಸಂಗ್ರಹಾಲಯದಲ್ಲಿ ಇರಿಸಲು ಯೋಜನೆ ರೂಪಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version