Join Our

WhatsApp Group
Important
Trending

ಉತ್ತರಕನ್ನಡಿಗರಿಗೆ ನೆಮ್ಮದಿಯ ಸುದ್ದಿ: ಕಡಿಮಾಗುತ್ತಿದೆ ಕೋವಿಡ್ ಅಬ್ಬರ

ಕಾರವಾರ : ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ಕರೊನಾ ತೀವ್ರತೆ ಕಡಿಮೆಯಾಗುತ್ತಿರುವುದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂದು ಒಟ್ಟು 10 ಕರೊನಾ ಕೇಸ್ ದಾಖಲಾಗಿದ್ದು, 29 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಐದು ತಾಲೂಕಿನಲ್ಲಿ ಶೂನ್ಯ ಕೇಸ್ ದಾಖಲಾಗಿದೆ.

ಕಾರವಾರ 03, ಅಂಕೋಲಾ 9, ಹೊನ್ನಾವರ 1,ಭಟ್ಕಳ 1, ಶಿರಸಿ 4, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 0 ಕೇಸ್ ದೃಢಪಟ್ಟಿದೆ. ಇದೇ ವೇಳೆ, ಕಾರವಾರ 8, ಅಂಕೋಲಾ 3, ಕುಮಟಾ 4, ಹೊನ್ನಾವರ 3, ಭಟ್ಕಳ 1, ಶಿರಸಿ 3, ಸಿದ್ದಾಪುರ 4, ಯಲ್ಲಾಪುರ 2, ಮುಂಡಗೋಡ 0, ಹಳಿಯಾಳ 0, ಜೋಯಡಾದಲ್ಲಿ ಒಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಹೊನ್ನಾವರದಲ್ಲಿ ಒಂದು ಕೇಸ್: ಕುಮಟಾದಲ್ಲಿ 0

ಕೋವಿಡ್ ಸಂಖ್ಯೆ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. ಕುಮಟಾ ತಾಲೂಕಿನಲ್ಲಿ ಇಂದು ಯಾವುದೇ ಕೊರೋನಾ ಪ್ರಕರಣಗಳು ಕಂಡುಬ0ದಿಲ್ಲ. ಅದೇ ರೀತಿ ಹೊನ್ನಾವರ ತಾಲೂಕಿನಲ್ಲಿ ಇಂದು ಓರ್ವ ಮಹಿಳೆಯಲ್ಲಿ ಸೊಂಕು ಕಾಣಿಸಿಕೊಂಡಿದೆ. ಹೊನ್ನಾವರ ಪಟ್ಟಣದ ಜೋಗಮಠದ 24 ವರ್ಷದ ಯುವತಿಯಲ್ಲಿ ಸೊಂಕು ಕಾಣಿಸಿಕೊಂಡಿದೆ. ವಿವಿಧ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದರೆ, ಮೂರು ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಇದನ್ನೂ ಓದಿ: ಪ್ರಮುಖ‌ ಸುದ್ದಿಗಳು

Back to top button