ಇಬ್ಬರು ಆತ್ಮಹತ್ಯೆಗೆ ಶರಣು
ಸಂಬoಧಿಕರೊoದಿಗೆ ಗಲಾಟೆ: ಮನೆಯ ಪಕ್ಕದ ಬಾವಿಯಲ್ಲಿ ಆತ್ಮಹತ್ಯೆ
ಭಟ್ಕಳ: ತಾಲೂಕಿನ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರದಂದು ಇರಡು ಪ್ರತ್ಯೇಕ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಕೃಷಿಕನೊರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಕೃಷಿಕ ಅಣ್ಣಪ್ಪ ಚನ್ನಾ ನಾಯ್ಕ(33) ಎಂದು ತಿಳಿದು ಬಂದಿದೆ. ಈತ ತನ್ನ ತಂದೆಯ ಅನಾರೋಗ್ಯ ಹಾಗೂ ತಮ್ಮನ ಶಸ್ತ್ರಚಿಕಿತ್ಸೆಗೆಂದು ಅಧಿಕ ಸಾಲ ಮಾಡಿದ್ದು, ಸಾಲ ಮರಳಿ ತೀರಿಸಲಾಗದೆ ಮನನೊಂದ್ದಿದ್ದ. ನಿನ್ನೆ ಸಂಬoದಿಕರೊಬ್ಬರ ನಿಶ್ಚಿತಾರ್ಥ ಮುಗಿಸಿ ಹೋದವನು ಮನೆಗೆ ಬರಲಿಲ್ಲ. ರಾತ್ರಿ ತನ್ನ ಗ್ಯಾರೇಜಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿನಿಂದಾಗಿ ಇಂದು ನಡೆಯಬೇಕಾದ ಸಂಬoಧಿಕರ ಮದುವೆ ನಿಂತು ಹೋಗಿದೆ.
ಇನ್ನೊಂದೆಡೆ, ಕುಟುಂಬಸ್ಥರೊoದಿಗೆ ಮನಸ್ತಾಪ ಮಾಡಿಕೊಂಡು ಬೋಟ್ ಕೆಲಸಕ್ಕೆ ಹೋಗುವುದಾಗಿ ರಾತ್ರಿ ಮನೆಯಿಂದ ಹೋದ ವ್ಯಕ್ತಿ ಮನೆಯ ಪಕ್ಕದ ಬಾವಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಇಸ್ಮಾಯಿಲ್ ಕೆ.ಎಂ (56) ಎಂದು ತಿಳಿದು ಬಂದಿದೆ. ಈತ ಕೆಲವು ವರ್ಷಗಳಿಂದ ಕುಡಿತದ ದಾಸನಾಗಿದ್ದ. ಕೆಲವು ವರ್ಷಗಳಿಂದ ಗೋವಾ ರತ್ನಗಿರಿಯಲ್ಲಿ ಬೋಟ್ ಕೆಲಸ ಮಾಡಿಕೊಂಡಿದ್ದ ಈತ ಕಳೆದ 15 ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದಾನೆ.
ನಿನ್ನೆ ರಾತ್ರಿ ಕುಡಿದು ಕುಟುಂಬಸ್ಥರೊoದಿಗೆ ಮನಸ್ಥಾಪ ಮಾಡಿಕೊಂದ್ದಾನೆ. ನಂತರ ಬ್ಯಾಗ್ ತೆಗೆದುಕೊಂಡು ರತ್ನಗಿರಿಗೆ ಬೋಟ್ ಕೆಲಸಕ್ಕೆ ಹೋಗುದಾಗಿ ಹೋದವನು ಮುಂಜಾನೆ ಮನೆಯ ಪಕ್ಕದ ಬಾವಿಯಲ್ಲಿ ಬ್ಯಾಗ್ ಹಾಕಿಕೊಂಡ ಸ್ಥಿತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ