
ಗೋಕರ್ಣ: ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ರಾಜ್ಯ ಸರ್ಕಾರದ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ರವರು ಕುಟುಂಬ ಸಮೇತರಾಗಿ ಆಗಮಿಸಿದ್ದರು. ಈ ವೇಳೆ ಮಹಾಬಲೇಶ್ವರನಿಗೆ ಗಂಗಾಭಿಷೇಕ, ನವಧಾನ್ಯ ಅಭಿಷೇಕ, ಸುವರ್ಣ ನಾಗಾಭರಣ ಪೂಜೆ ಮಾಡಿದರು. ಉಪಾಧಿವಂತ ಮಂಡಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಜಿ ಕೆ ಹೆಗಡೆಯವರು ಸಚಿವರಿಗೆ ಗೌರವ ಸಮರ್ಪಿಸಿದರು.
ಸಚಿವರು ದೇವಾಲಯದ ಸ್ವಚ್ಛತೆ, ಶಿಸ್ತು ಬದ್ಧತೆ ಮತ್ತು ಪೂಜಾ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತ್ಮಲಿಂಗ ವಿಶ್ವರೂಪ ದರ್ಶನದ ಆಸಕ್ತಿ ವ್ಯಕ್ತಪಡಿಸಿದರು.
ವಿಸ್ಮಯ ನ್ಯೂಸ್, ಗೋಕರ್ಣ
[sliders_pack id=”1487″]ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಕರಾವಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾವು
- SSLC ಯಲ್ಲಿ ಸಾಧನೆ ಮಾಡಿದ ರೈತ ಕುಟುಂಬದ ಕನ್ನಡದ ಕುವರಿಗೆ ಇಂಜಿನೀಯರ್ ಆಗೋ ಕನಸು: ಹೆಸರಿಗೆ ತಕ್ಕಂತೆ ಇದೆ ಗ್ರಾಮೀಣ ಭಾಗದ ಆದರ್ಶ ಪ್ರೌಢಶಾಲೆ
- ಯುದ್ಧ ಸಿದ್ಧತೆ ಹಿನ್ನಲೆ: ಉಪವಾಸ ಸತ್ಯಾಗ್ರಹ ಮುಂದಕ್ಕೆ
- ಅತ್ಯಂತ ಸುಸಜ್ಜಿತವಾದ ಮಳಿಗೆ ಮಾರಾಟಕ್ಕಿದೆ: ಕೂಡಲೇ ಸಂಪರ್ಕಿಸಿ
- ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಮೇ 10 ರಂದು ಪ್ರವೇಶ ದಾಖಲಾತಿ ಪರೀಕ್ಷೆ