Follow Us On

WhatsApp Group
Important
Trending

ಪ್ರಸಿದ್ದ ದೇವಸ್ಥಾನವೊಂದರಲ್ಲಿ ಮತ್ತೆ ಕಳ್ಳತನ : ಕ್ಯಾಮರಾ ಕಣ್ಣುಗಳಿಂದ ಪಾರಾಗಲು ಹಾರ್ಡ್ ಡಿಸ್ಕ್ ಕದ್ದೊಯ್ದ ಚಾಲಾಕಿ ಕಳ್ಳರು

ಜಿಲ್ಲೆಯಲ್ಲಿ ಸಕ್ರೀಯವಾಗಿದೆ ದೊಡ್ಡಗ್ಯಾಂಗ್?
ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಗಡಿ, ದೇವಸ್ಥಾನಗಳೇ ಟಾರ್ಗೆಟ್?

ಅಂಕೋಲಾ : ಪಟ್ಟಣದ ಪ್ರವೇಶ ದ್ವಾರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಅಂಚಿನ ಪ್ರಸಿದ್ದ ದೇವಸ್ಥಾನವೊಂದರ ಕಾಣಿಕೆ ಹುಂಡಿ ಒಡೆದು ಸಾವಿರಾರು ರೂಪಾಯಿ ಕಳ್ಳತನ ನಡೆಸಿದ ಘಟನೆಗೆ ಸಂಬಂಧಿಸಿದಂತೆ ರವಿವಾರ ಪ್ರಕರಣ ದಾಖಲಾಗಿದೆ. ಎಂದಿನಂತೆ ಬೆಳಗಿನ ವೇಳೆ ದೇವಸ್ಥಾನಕ್ಕೆ ಸಂಬಂಧಿಸಿದ ವ್ಯಕ್ತಿಯೋರ್ವರು ಸೇವಾಕಾರ್ಯ ನಡೆಸಲು ಬಂದ ವೇಳೆ ಬಾಗಿಲು ಮುರಿದಿರುವುದನ್ನು ಗಮನಿಸಿ, ಆಡಳಿತ ಮಂಡಳಿಯವರ ಮೂಲಕ ಪೊಲೀಸ್ ದೂರು ದಾಖಲಿಸಲಾಗಿದೆ.ಪಿಎಸ್‍ಐ ಈಸಿ ಸಂಪತ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇತ್ತಿಚೇಗಷ್ಟೇ ದೇವಸ್ಥಾನದ ಹುಂಡಿ ಹಣ ಲೆಕ್ಕಾಚಾರ ನಡೆಸಿ ಖಾತೆಗೆ ಜಮಾ ಮಾಡಲಾಗಿತ್ತು ಎನ್ನಲಾಗಿದ್ದು, ತದ ನಂತರ ಭಕ್ತರು ಸಲ್ಲಿಸಿದ್ದ ಅಲ್ಪ ಪ್ರಮಾಣದ ಹಣವಷ್ಟೇ ಕಾಣಿಕೆ ಡಬ್ಬಿಯಲ್ಲಿ ಇತ್ತು ಎಂದು ತಿಳಿದುಬಂದಿದೆ. ತಮ್ಮ ಕಳ್ಳತನದ ಗುರುತು ಪತ್ತೆಯಾಗದಂತೆ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್ ಕದ್ದೊಯ್ದಿರುವ ಕಳ್ಳರು ಚಾಲಾಕಿತನ ತೋರಿದ್ದು, ಈ ಹಿಂದಿನ ಪ್ರಕರಣಗಳಂತೆ ಪೊಲೀಸರಿಗೆ ಪತ್ತೆ ಕಾರ್ಯ ಸವಾಲಿನದ್ದಾಗಿದೆ.

ಪಕ್ಕದ ಮನೆಯ ಸಿಸಿ ಕ್ಯಾಮರಾ ಮೂಲಕವಾದರೂ ಜಾಡು ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ಕೆಲ ತಾಂತ್ರಿಕ ಮತ್ತಿತರ ಕಾರಣಗಳಿಂದ ತನಿಖೆಗೆ ತೊಡಕಾಗಿರುವ ಸಾಧ್ಯತೆಗಳು ಕೇಳಿ ಬಂದಿವೆ.
ತಾಲೂಕಿನಲ್ಲಿ ಹೆಚ್ಚುತ್ತಿರುವ ದೇವಸ್ಥಾನ, ಮನೆ, ಕಛೇರಿ, ಮತ್ತಿತರ ಕಳ್ಳತನ ಪ್ರಕರಣಗಳಲ್ಲಿ ಕೆಲವಷ್ಟೇ ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿವೆಯಾದರೂ ನಿರೀಕ್ಷಿತ ಮಟ್ಟದ ಪತ್ತೆಕಾರ್ಯ ನಡೆದಿಲ್ಲ ಎನ್ನಲಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಹೊರ ಜಿಲ್ಲೆಯ ಕಳ್ಳರ ಗ್ಯಾಂಗ್ ಹಿಡಿದು ಕೊಂಚ ಭರವಸೆ ಮೂಡಿಸಿದ್ದ ಇಲಾಖೆ ಮತ್ತಷ್ಟು ಚುರುಕುಗೊಂಡು ಎಲ್ಲಾ ಪ್ರಕರಣಗಳನ್ನು ಭೇದಿಸಿ ತನ್ನ ಕಾರ್ಯದಕ್ಷತೆ ತೋರಿಸಬೇಕಿದೆ.

ಇನ್ನು ಮುಂದೆ ಕಳ್ಳತನ ಪ್ರಕರಣಗಳು ನಡೆಯದಂತೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸೂಕ್ತ ಮುಂಜಾಗೃತೆ ಕೈಗೊಳ್ಳಬೇಕೆನ್ನುವುದು ಪ್ರಜ್ನಾವಂತರ ಅನಿಸಿಕೆಯಾಗಿದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button