ಉತ್ತರಕನ್ನಡದ ಹಲವೆಡೆ ಅಕಾಲಿಕ ಮಳೆ: ರೈತರಲ್ಲಿ ಆತಂಕ

ಕಾರವಾರ: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜನವರಿ 8 ರವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ, ಮುಂದಿನ ಮೂರ್ನಾಲ್ಕು ದಿನ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ನೀಡಿದೆ.

ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರ, ಯಲ್ಲಾಪುರದ ಹಲವಡೆ ಸೋಮವಾರ ಮಳೆಯಾಗಿದ್ದು,‌ಅಕಾಲಿಕ ಮಳೆಯಿಂದ‌ ರೈತರು ಕಂಗಾಲಾಗಿದ್ದಾರೆ. ಬೆಳೆಗಳು ಮೊಗ್ಗುಬಿಡುವ ಸಮಯವಾಗಿದ್ದು, ಅಕಾಲಿಕ ಮಳೆ ಮತ್ತು ಮೋಡದ ವಾತಾವರಣವಿದ್ದರೆ ಬೆಳೆ ಹಾನಿ ತಪ್ಪಿದ್ದಲ್ಲ.‌ಇದು ರೈತರನ್ನು ಚಿಂತೆಗೀಡುಮಾಡಿದೆ.

ಶಿರಸಿಯ ಹಕವಡೆ ವರುಣ ಎರಡು ತಾಸಿಗೂ ಅಧಿಕ ಕಾಲ ಅಬ್ಬರಿಸಿದ್ದಾನೆ. ತಾಲೂಕಿನ ಮಿರ್ಜಾನ್ ಬ್ರಹ್ಮೂರಿನಲ್ಲೂ ಮಳೆಯ ಆರ್ಭಟಿಸಿದೆ.

ಬ್ಯೂರೋ ರಿಪೋರ್ಟ್ , ವಿಸ್ಮಯ ನ್ಯೂಸ್

Exit mobile version