ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಕರೊನಾ ವ್ಯಾಕ್ಸಿನ್ ಡ್ರೈ ರನ್ ಮಾಡಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಲಸಿಕೆ ನೀಡಲು ಮೂರು ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೊದಲು ಆರೋಗ್ಯ ಕಾರ್ಯಕರ್ತರಿಗೆ ನಂತರ ಕರೋನಾ ವಾರಿಯರ್ ಗಳಿಗೆ ಲಸಿಕೆ ನೀಡಲಾಗುತ್ತದೆ. ಬಳಿಕ 55 ವರ್ಷ ದಾಟಿದವರಿಗೆ ಚುಚ್ಚುಮದ್ದು ನೀಡಲು ತಯಾರಿ ಮಾಡಿಕೊಳ್ಳಲಾಗಿದೆ.
ಇನ್ನು ಲಸಿಕೆ ನೀಡಲು ಜಿಲ್ಲೆಯಾದ್ಯಂತ ಪಿ.ಹೆಚ್.ಸಿ ಗಳಲ್ಲಿ ಮೂರು ಕೊಠಡಿಗಳನ್ನು ವ್ಯವಸ್ತೆ ಮಾಡಿಕೊಳ್ಳಲಾಗಿದೆ. ಈ ಕರೋನಾ ಲಸಿಕೆಯ ಡ್ರೈ ರನ್ ಪರೀಕ್ಷಿಸಲು ಹಾಗೂ ಸಾಧಕ ಭಾದಕಗಳನ್ನು ತಿಳಿಯಲು ಎಸಿ ಮತ್ತು ತಹಶಿಲ್ದಾರ್ ರವರು ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ನೂರು ಜನರನ್ನು ಲಸಿಕೆ ನೀಡಲು ಆಯ್ಕೆ ಮಾಡಲಾಗಿದೆ. ಆದರೇ ಒಂದು ಸೆಂಟರ್ ನಲ್ಲಿ ಮೊದಲು 25 ಜನರ ಮೇಲೆ ಮಾತ್ರ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ .ಈ ಕೆಳಗಿನ ಸ್ಥಳಗಳಲ್ಲಿ ನಾಳೆ ಡ್ರೈ ರನ್ ನಡೆಯಲಿದೆ.
- ಕಾರವಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ.ಚಿತ್ತಾಕುಲ.
- ತಾಲೂಕು ಆಸ್ಪತ್ರೆ ಹೊನ್ನಾವರ
- ಕಾರವಾರ ಮೆಡಿಕಲ್ ಕಾಲೇಜಿನ ಜಿಲ್ಲಾ ಆಸ್ಪತ್ರೆ.
- ಸಮುದಾಯ ಆರೋಗ್ಯ ಕೇಂದ್ರ ಹೊನ್ನಾವರ.
- ಟಿ.ಎಸ್.ಎಸ್. ಖಾಸಗಿ ಆಸ್ಪತ್ರೆ. ಶಿರಸಿ.
- ಹೆಗಡೆ ಕಟ್ಟ ಸಮುದಾಯ ಆರೋಗ್ಯ ಕೇಂದ್ರ ಶಿರಸಿ
ಕೊವಿಡ್-19 ಲಸಿಕಾ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಜಿಲ್ಲೆಯ ಆರು ಕಡೆಗಳಲ್ಲಿ ಸ್ಥಳ ಆಯ್ಕೆ ಮಾಡಲಾಗಿದ್ದು, ಸದರಿ ಸ್ಥಳಗಳಿಗೆ ವೀಕ್ಷಕರನ್ನೂ ಸಹ ನೇಮಿಸಲಾಗಿದೆ. ಜಿಲ್ಲಾ ಆಸ್ಪತ್ರೆ (ಕ್ರಿಮ್ಸ್) ಕಾರವಾರದಲ್ಲಿ ವೀಕ್ಷಕರಾಗಿ ಸಹಾಯಕ ಆಯುಕ್ತೆ ವಿದ್ಯಾಶ್ರೀ ಚಂದರ್ಗಿ, ಬೈತಕೋಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೀಕ್ಷಕರಾಗಿ ಕಾರವಾರ ತಹಶೀಲ್ದಾರ್ ಆರ್ ವಿ ಕಟ್ಟೆ, ಶಿರಸಿಯ ಟಿಎಸ್‍ಎಸ್ ಆಸ್ಪತ್ರೆಯಲ್ಲಿ ವೀಕ್ಷಕರಾಗಿ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ಹೆಗಡೆಕಟ್ಟಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೀಕ್ಷಕರಾಗಿ ತಹಶೀಲ್ದಾರ್ ಎಮ್ ಆರ್ ಕುಲಕರ್ಣಿ, ಹೊನ್ನಾವರದ ತಾಲೂಕು ಆಸ್ಪತ್ರೆಯಲ್ಲಿ ವೀಕ್ಷಕರಾಗಿ ತಹಶೀಲ್ದಾರ್ ವಿವೇಕ ಶೇಣ್ವಿ, ದಾಂಡೇಲಿಯ ಸಮುದಾಯ ಆರೋಗ್ಯ ಕೇಂದ್ರದ ವೀಕ್ಷಕರಾಗಿ ತಹಶೀಲ್ದಾರ್ ಶೈಲೇಶ ಪರಮಾನಂದ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್