Join Our

WhatsApp Group
Info
Trending

ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಭಾ ಪುರಸ್ಕಾರ

ಶಿರಸಿ: 2019-2020 ರ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶ್ರೀ ದೇವಸ್ಥಾನದಿಂದ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಈ ಸಮಾರಂಭ ದಿನಾಂಕ : 10-01-2021 ರ ರವಿವಾರದಂದು ಬೆಳಿಗ್ಗೆ 11-00 ಘಂಟೆಗೆ ಶ್ರೀ ದೇವಸ್ಥಾನದ ಸಭಾ ಮಂಟಪದಲ್ಲಿ ನಡೆಯಲಿದೆ.

ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಗೌರವಾನ್ವಿತ ಪ್ರದಾನ ಜಿಲ್ಲಾ ಹಾಗೂ ಸತ್ರನ್ಯಾಯಾಧೀಶರು ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ನಿಯಂತ್ರಣಾಧಿಕಾರಿಗಳೂ ಆದ ಮಾನ್ಯ ಶ್ರೀ ಸಿ. ರಾಜಶೇಖರ ರವರು ಆಗಮಿಸಲಿದ್ದಾರೆ. ಕೋವಿಡ್ ಕಾರಣದಿಂದ ದಿನಾಂಕ: 10-01-2021 ರಿಂದ 12-01-2021 ರವರೆಗೆ ಮೂರು ಹಂತಗಳಲ್ಲಿ ಬೆಳಿಗ್ಗೆ 11 ಘಂಟೆಯಿoದ ಮಧ್ಯಾಹ್ನ 1 ಘಂಟೆಯವರೆಗೆ ನೀಡಲಾಗುವುದು. ನಿಗದಿಪಡಿಸಿದ ದಿನಾಂಕದoದು ಬರಬೇಕಾದ ವಿದ್ಯಾರ್ಥಿಗಳಿಗೆ ದೇವಸ್ಥಾನದ ಕಛೇರಿಯಿಂದ ಪ್ರತ್ಯೇಕ ಸಂದೇಶ ಹಾಗೂ ದೂರವಾಣಿ ಮೂಲಕ ತಿಳಿಸಲಾಗುವುದು.

ಕಾರಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪುರಸ್ಕಾರ ಹಾಗೂ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುದ್ದಿ ರೂಪದಲ್ಲಿ ಪ್ರಕಟಿಸಿ ಸಹಕರಿಸಬೇಕಾಗಿ ಕೋರುತ್ತೇವೆ. ಹಾಗೂ ಸದರಿ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಗೌರವಾದರಗಳಿಂದ ಆಮಂತ್ರಿಸುತ್ತಿದ್ದೇವೆ ಎಂದು ಶ್ರೀ ದೇವಸ್ಥಾನದ ಧರ್ಮದರ್ಶಿ ವೆಂಕಟೇಶ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Check Also
Close
Back to top button