Info
Trending

ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತೊಂದರೆ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ

ಅಳ್ವೇಕೋಡಿ:”ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ವತಿಯಿಂದ ನಿರ್ಮಲ ಕಾಮತ್ ಹೈಸ್ಕೂಲ್‌ನಲ್ಲಿ “ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತೊಂದರೆ ಮತ್ತು ಲೈಂಗಿಕ ಶಿಕ್ಷಣದ”ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು..

ಹದಿಹರೆಯವು ಜೀವನದ ಅತೀ ಮುಖ್ಯ ಘಟ್ಟ, ಈ ಸಮಯದಲ್ಲಿ ಹಲವಾರು ಬದಲಾವಣೆ ಮಕ್ಕಳಲ್ಲಿ ಉಂಟಾಗುವುದು, ಬಾಲ್ಯಾವಸ್ಥೆಯಿಂದ ಪ್ರೌಢರಾಗಿ ಜೀವನದಲ್ಲಿ ನಾವು ಕಂಡ ಕನಸು, ಗುರಿಗಳ ಸಾಧನೆಯ ಅಡಿಪ್ರಾರಂಭವಾಗುವ ಸಮಯ. ಹತಾಷೆ, ಅಸೂಯೆ ಉಂಟಾಗುವ ಹಂತ.ಈ ವಯಸ್ಸಿನಲ್ಲಿ ತಾವು ಸ್ವಯಂ ನಿರ್ಧಾರ ತೆಗೆದುಕೋಳ್ಳುವ ಹಂತ. ಆದರೆ ಇಂದು ಬದಲಾದ ಸನ್ನಿವೇಶದಲ್ಲಿ ಪ್ರೀತಿ, ಪ್ರೇಮ ಎಂಬ ಆಕರ್ಷಣೆಗೆ ಒಳಗಾಗುವ ಯುವ ಪೀಳಿಗೆ ಜೀವನದ ಅತಿ ಮೌಲ್ಯ ಸಮಯದಲ್ಲಿ ಎಡವುತ್ತಿದ್ದಾರೆ ಎಂಬುದು ವಿಷಾದನೀಯ.ಕಮಲಾ ಬಾಳಿಗಾ ಪ್ರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದಂತಹ ರೇಖಾ ಯಲಿರ‍್ರವರು ಉಪನ್ಯಾಸ ನೀಡಿದರು.

ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡರವರು ಕಾರ್ಯಕ್ರಮ ಪ್ರಾಸ್ತಾವಿಕ ಮಾತನಾಡಿದರು.
ನಿರ್ಮಲ ಕಾಮತ್ ಹೈಸ್ಕೂಲ್‌ನ ಮುಖ್ಯೋಧ್ಯಾಪಕರಾದಂತಹ ಶ್ರೀ ಎಸ್. ಎನ್ ಪಟಗಾರ ಅಧ್ಯಕ್ಷತೆ ವಹಿಸಿ ಅಧ್ಯಕ್ಷಿಯ ಮಾತನಾಡಿದರು.
ನಿರ್ಮಲ ಕಾಮತ್ ಹೈಸ್ಕೂಲ್‌ನ ಶಿಕ್ಷಕರಾದ ಶ್ರೀ ವಿನೋದ ನಾಯಕ್ ರವರು ವಂದಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Back to top button