Follow Us On

WhatsApp Group
Focus News
Trending

ಬಿಜೆಪಿ ಅಭ್ಯರ್ಥಿ ಗೆಲುವಿನ ಹಿನ್ನಲೆ : ಮುಖಂಡರು ಮತ್ತು ಕಾರ್ಯಕರ್ತರಿಗೆ ಅಭಿನಂದನೆ

ಶಾಸಕಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಂಕನೂರ
ಸರ್ವರನ್ನು ಅಭಿನಂದಿಸಿದ ವಿಪ ಸದಸ್ಯ

ಅಂಕೋಲಾ : ಇತ್ತೀಚೆಗೆ ನಡೆದ ಪಶ್ವಿಮ ಪದವೀಧರ ಮತಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಪಟ್ಟಣದ ಶಾಂತಾದುರ್ಗಾ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ಸಂಜೆ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ತನ್ನ ಗೆಲುವಿಗೆ ಶ್ರಮಿಸಿದ ಸರ್ವರನ್ನು ವಿ.ಪ.ಸದಸ್ಯ ಎಸ್.ವಿ.ಸಂಕನೂರ ಅಭಿನಂದಿಸಿದರು.

ಬಳಿಕ ಮಾತನಾಡಿದ ಅವರು ವಿಶಾಲ ಕ್ಷೇತ್ರ ವ್ಯಾಪ್ತಿ ಹೊಂದಿರುವ ಪಶ್ವಿಮ ಪದವೀಧರ ಕ್ಷೇತ್ರದಲ್ಲಿ 80 ಸಾವಿರಕ್ಕೂ ಅಧಿಕ ಮತದಾರರಿದ್ದು, ಕೋವಿಡ್ ಮಾರ್ಗ ಸೂಚಿ ಹಿನ್ನಲೆಯಲ್ಲಿ ನಡೆದ ಚುನಾವಣೆ ಮತ್ತಿ ತರ ಕಾರಣಗಳಿಂದ ಎಲ್ಲಾ ಮತದಾರರನ್ನು ವೈಯಕ್ತಿವಾಗಿ ಭೇಟಿ ಮಾಡಲು ಸಾಧ್ಯವಾಗದ ಕಾರಣದಿಂದ, ತಾವೆಲ್ಲರೂ ತಮ್ಮ ವ್ಯಾಪ್ತಿಯ ಪದವೀಧರ ಮತದಾರರನ್ನು ಭೇಟಿಯಾಗಿ ನನ್ನ ಪರವಾಗಿ ಮತ ಯಾಚಿಸಿ, ಚುನಾವಣೆಯಲ್ಲಿ ಗೆಲುವು ಸಾಧಿಸುವಂತೆ ಮಾಡಿ ಮತ್ತೆ 6 ವರ್ಷ ಸೇವೆ ನೀಡಲು ಆಶೀರ್ವ ದಿಸಿದ್ದು, ನಿಮಗೆಲ್ಲರಿಗೂ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪಶ್ವಿಮ ಪದವೀಧರ ಕ್ಷೇತ್ರದಲ್ಲಿ 80 ಸಾವಿರ ಮತದಾರರಿದ್ದು, ಚುನಾವಣೆ ಸಂದರ್ಭದಲ್ಲಿ ವಿಶಾಲ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದ ಎಲ್ಲ ಮತದಾರರನ್ನು ಭೇಟಿ ಮಾಡುವುದು ಕಷ್ಟಸಾಧ್ಯವಾದ ಪರಿಸ್ಥಿತಿಯಲ್ಲಿ ತಾವೆಲ್ಲರೂ ತಮ್ಮ ತಮ್ಮ ಭಾಗದ ಪದವಿದರ ಮತದಾರರನ್ನು ಭೇಟಿ ಮಾಡಿ ನನ್ನ ಪರವಾಗಿ ಮತಯಾಚಿಸಿ ಗೆಲುವಿಗೆ ಕಾರಣಕರ್ತರಾಗಿದ್ದೀರಿ. ಈ ಗೆಲವು ಪಕ್ಷ ಮತ್ತು ನಿಮ್ಮೆಲ್ಲರ ಗೆಲುವಾಗಿದೆ. ಆಗಿದೆ ಎಂದು ವಿ.ಪ.ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

ಶಾಸಕಿ(ಸಹೋದರಿ) ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಂಕನೂರು : ತನ್ನ ಗೆಲುವಿಗೆ ವಿವಿಧ ಕ್ಷೇತ್ರಗಳ ಜನಪ್ರತಿನಿಧಿ ಗಳು ಪಕ್ಷದ ಹಿರಿ-ಕಿರಿಯ ಮುಖಂಡರು ಶ್ರಮಿಸಿದ್ದು, ಈ ಭಾಗದಲ್ಲಿ ಶಾಸಕಿ ರೂಪಾಲಿ ನಾಯ್ಕ ತನ್ನ ಸಹೋದರನೇ ಚುನಾವಣಾ ಕಣಕ್ಕೆ ಇಳಿದಿರುವಂತೆ ತಿಳಿದು ತನು-ಮನ-ಧನ ಸಹಾಯ ಸಹಕಾರ ನೀಡಿ ದ್ದು, ಅವರ ಪ್ರೀತಿ ವಿಶ್ವಾಸದ ಕೊಡುಗೆಗೆ ತಾನು ಚಿರಋಣಿ ಎಂದು ಹೇಳಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಮುಖಂಡರು ಮತ್ತು ಕಾರ್ಯಕರ್ತರಿಗೆ ಗೌರವ ಸನ್ಮಾನ : ಸಂಜಯ ಎಂ.ನಾಯ್ಕ ಭಾವಿಕೇರಿ, ಜಗದೀಶ ಜಿ. ನಾಯಕ ಮೊಗಟಾ, ಭಾಸ್ಕರ ಕೇ.ನಾರ್ವೇಕರ್, ಶಾಂತಲಾ ನಾಡಕರ್ಣಿ, ರೇಖಾ ಡಿ.ಗಾಂವಕರ, ಪ್ರಶಾಂತ ಜಿ.ನಾಯಕ, ರಾಜೇಂದ್ರ ನಾಯ್ಕ, ರಾಮಚಂದ್ರ ಹೆಗಡೆ, ಬಿಂದೇಶ ನಾಯಕ ಹಿಚ್ಕಡ, ಆರತಿ ಗೌಡ, ರಾಜೇಶ್ವರಿ ಕೇಣಿಕರ್, ಚಂದ್ರಕಾಂತ ನಾಯ್ಕ, ಗಣಪತಿ ನಾಯ್ಕ, ಜಯಾ ಬಾಲಕೃಷ್ಣ ನಾಯ್ಕ, ನಾಗೇಶ ಕಿಣಿ, ರಾಘವೇಂದ್ರ ಭಟ್, ನಿತ್ಯಾನಂದ ಗಾಂವಕರ, ವಿನಾಯಕ ಪಡ್ತಿ, ಅನುರಾಧ ನಾಯ್ಕ, ಶಾಂತಾ ಹರಿಕಂತ್ರ, ಕೆ.ಆರ್.ನಾಯಕ, ಸಂಜಯ ಕುಚನಾಡು, ಗಣಪತಿ ನಾಯ್ಕ, ನಿಲೇಶ ನಾಯ್ಕ, ತಾರಾ ಗಾಂವಕರ, ಸುರಕ್ಷಾ ಭೋವಿ, ಶೀಲಾ ಶೆಟ್ಟಿ ಸೇರಿದಂತೆ ಪಕ್ಷದ ವಿವಿಧ ಸ್ತರದ ಮುಖಂಡರು ಮತ್ತು ಕಾರ್ಯಕರ್ತರ ಸೇವೆಯನ್ನು ಗುರುತಿಸಿಲಾಯಿತು. ಹಲವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಹಲವು ಸ್ವಾರಸ್ಯಕರ ಘಟನಾವಳಿಗಳನ್ನು ವಿವಿರಿಸಿದ ಸಂಕನೂರು, ಈ ಭಾಗದ ವಿದ್ಯಾರ್ಥಿಗಳು, ವಸತಿ ನಿಲಯದ ಅವಶ್ಯಕತೆ ಇರುವವರು, ತುರ್ತು ಕೆಲಸದ ನಿಮಿತ್ತ ಬೆಂಗಳೂರು, ಧಾರವಾಡಕ್ಕೆ ಬರುವ ಸ್ಥಳೀಯರಿಗೆ ತನ್ನ ಕೈಲಾದ ಸಹಾಯ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಮತ್ತಷ್ಟು ವಿಶ್ವಾಸ ಹಾಗೂ ಭರವಸೆ ನೀಡಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button