ಅಂಕೋಲಾ ಪುರಸಭೆಯ ಸಾಮಾನ್ಯ ಸಭೆಯ ಗೊಂದಲ : ತಾತ್ಕಾಲಿಕ ತೆರೆ.
ತಾಲೂಕಾಡಳಿತದಿಂದ ಮನವೊಲಿಕೆ : ಪ್ರತಿಭಟನೆ ಹಿಂಪಡೆದ ಕಾಂಗ್ರೆಸಿಗರು
ಅಂಕೋಲಾ : ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ನಡೆದ ಗೊಂದಲದಿಂದಾಗಿ ಕಾಂಗ್ರೆಸಿಗರು ಅಹೋರಾತ್ರಿ ಧರಣಿ ನಡೆಸಿ ಪ್ರತಿಭಟಿಸಿದ್ದರು. ಬೆಳಗಾಗುವವರೆಗೂ ಪುರಸಭೆ ಕಚೇರಿಯ ಆವರಣದ ಲ್ಲಿಯೇ ಬೀಡುಬಿಟ್ಟಿದ್ದ ಪ್ರತಿಭಟನಾಕಾರರು, ಶನಿವಾರ ಬೆಳಿಗ್ಗೆ ಪುರಸಭೆಯ ಪ್ರವೇಶ ದ್ವಾರದ ಬಳಿ ತಮ್ಮ ಪ್ರತಿಭಟನೆ ಮುಂದುವರೆಸಿದ್ದರು. ಈ ನಡುವೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಉದಯ ಕುಂಬಾರ ಮೇಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ, ಪ್ರತಿಭಟನಾಕಾರರ ಮನವೊಲಿಸಿದಿರು. ಹಿರಿಯ ಅಧಿಕಾ ರಿಗಳ ಸಮ್ಮುಖದಲ್ಲಿ ಜ.26ರಂದು ಸಭೆ ಕರೆಯಲಾಗುವುದು ಎನ್ನುವ ತಹಸೀಲ್ದಾರರವರ ಭರವಸೆ ಮೇರೆ ಗೆ ಕಾಂಗ್ರೆಸ್‍ನವರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಸತ್ಯ ಹೇಳಿತೇ ಸಿಸಿ ಕ್ಯಾಮರಾ ಪುಟೇಜ್ : ಸಾಮಾನ್ಯ ಸಭೆ ನಡೆಯುತ್ತಿದ್ದ ಸಭಾಭವನದಲ್ಲಿ ಸಿಸಿ ಕ್ಯಾಮ ರಾ ಅಳವಡಿಸಲಾಗಿದ್ದು, ಸಭೆಯ ದೃಶ್ಯಾವಳಿಗಳು ದಾಖಲಾಗಿವೆ. ಶುಕ್ರವಾರ ಸಭೆ ನಡೆಸುವ ವೇಳೆ ಕಾಂಗ್ರೆಸ್ ಸದಸ್ಯನೊರ್ವ ಕುಡಿಯುವ ನೀರಿನ ಗ್ಲಾಸ್‍ನ್ನು ಎಸೆದು ಸಭೆಯಲ್ಲಿ ಗೊಂದಲ ಮೂಡುವಂತಾ ಯಿತು ಎಂಬಂತೆ ಬಿಂಬಿಸಲಾಗಿತ್ತು.
ಈ ಘಟನೆಯಿಂದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದರು ಎನ್ನು ವ ರೀತಿಯಲ್ಲಿ ಹೇಳಿಕೆಗಳು ಕೇಳಿ ಬಂದಿದ್ದವು. ಆದರೆ ತಹಸೀಲ್ದಾರ ಸಮ್ಮುಖದಲ್ಲಿ ಸಿಸಿ ಕ್ಯಾಮರಾ ಪುಟೇಜ್ ತೆಗೆದು ನೋಡಲಾಗಿ, ಬಿಜೆಪಿ ಸದಸ್ಯರು ಹೊರ ನಡೆದು ಬಹುಹೊತ್ತಿನ ನಂತರ ಮುಖ್ಯಾಧಿ ಕಾರಿಯೊಂದಿಗೆ ಕಾಂಗ್ರೆಸ್‍ನ ಸದಸ್ಯರು, ಗಂಭೀರ ಚರ್ಚೆಯಲ್ಲಿರುವಾಗ, ಹಿರಿಯ ಸದಸ್ಯನೊರ್ವ ಎದ್ದು ನಿಲ್ಲುವ ಭರದಲ್ಲಿ ಅಥವಾ ಆಕಸ್ಮಿಕವಾಗಿಯೋ ಎದುರುಗಡೆ ಟೇಬಲ್ ಮೇಲಿದ್ದ ಕುಡಿಯುವ ನೀರಿನ ಗ್ಲಾಸ್ ಕೆಳಗೆ ಬಿದ್ದಂತೆ ಕಂಡು ಬರುತ್ತಿದೆ. ಹೀಗಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಆರೋಪ-ಪ್ರತ್ಯಾ ರೋಪಗಳ ಕುರಿತು ಸಿಸಿ ಕ್ಯಾಮರ ದೃಶ್ಯಾವಳಿಗಳೇ ಪ್ರಮುಖ ಸಾಕ್ಷಿಯಾದಂತಿದೆ.
ಸಿಸಿ ಕ್ಯಾಮರ ದೃಶ್ಯಾ ವಳಿಗಳು ಸತ್ಯ ಘಟನೆ ತೋರಿಸುತ್ತೀವೆಯಾದರೂ ಅದರ ಜೊತೆಯಲ್ಲಿ ಸಭೆಯ ನಡಾವಳಿಗಳ ಮಾತು ಗಳು ರೆಕಾರ್ಡ್ ಆಗುವಂತಿದ್ದರೆ ಇನ್ನಷ್ಟು ಒಳ್ಳೆಯದಿತ್ತು ಎನ್ನುವ ಮಾತು ಪ್ರತಿಭಟನೆಯ ನೇತೃತ್ವ ವಹಿಸಿ ದ್ದ ಮಾಜಿ ಶಾಸಕ ಸೈಲ್‍ರಿಂದ ಕೇಳಿಬಂತು.
ಚಹ ತಯಾರಿಸಿ ವಿನೂತನ ಪ್ರತಿಭಟನೆ : ಪುರಸಭೆಯ ಆವರಣದಲ್ಲಿಯೇ ರಾತ್ರಿ ಕಳೆದ ಪ್ರತಿಭಟನಾಕಾರರು ಬೆಳಿಗ್ಗೆ ಮಹಿಳಾ ಪ್ರಮುಖರ ಮೂಲಕ ಸ್ಥಳದಲ್ಲಿಯೇ ಚಹಾ ತಯಾರಿಸಿ ವಿನೂತನ ಪ್ರತಿಭಟನೆ ನಡೆಸಿದರು. ಚಹಾ ತಯಾರಿಸಿದ್ದಲ್ಲದೇ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ವೇಳೆ ಬಹುಹೊತ್ತು ಪುರಸಭೆ ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿದ್ದ ಕಾಂಗ್ರೆಸಿಗರು, ಅದೇ ಅಧಿಕಾರಿಗೂ ಹೆಚ್ಚಿನ ಪ್ರಮಾಣದ ಹಾಲು ಬೆರೆಸಿದ್ದ ಕೇಟಿ ಚಹಾ ನೀಡಿದರಲ್ಲದೆ ಇತರೇ ಅಧಿಕಾರಿಗಳಿಗೂ ನೆರೆದ ಬಹುತೇಕರಿಗೆ ಚಹಾ ನೀಡಿ ಆತ್ಮೀಯತೆ ತೋರ್ಪಡಿಸಿದರು.
ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ