ಶಿರಸಿ: ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಗಳನ್ನು ಕಸ್ತೂರಬಾ ನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನ ಸಮೀಪದಲ್ಲಿ ಹೊಸ ಮಾರುಕಟ್ಟೆ ಪೋಲಿಸರು ಬಂಧಿಸಿದ್ದಾರೆ. ಆರೋಪಿತರಾದ ಮಹ್ಮದ್ ಮೋಸಿನ್ ತಂದೆ ನಜೀರ್ ಅಹ್ಮದ್ ಶೇಖ್ ಕಸ್ತೂರ ಬಾ ನಗರ, ಮಂಜುನಾಥ (ಮಿಂಟಾ) ಪೂಜಾರಿ ವಿದ್ಯಾನಗರ ಈ ಇಬ್ಬರು ಸಿಕ್ಕಿಬಿದ್ದ ಆರೋಪಿಗಳು. ಆರೋಪಿತರನ್ನು ವಶಕ್ಕೆ ಪಡೆದು 266 ಗ್ರಾಂ ತೂಕದ ಗಾಂಜಾ,ಕೃತ್ಯಕ್ಕೆ ಬಳಸಲಾದ ಹೊಂಡಾ ಆಕ್ಟಿವ್ ಬೈಕ್, ನಗದು ಹಣ 1000, ಹಾಗೂ 2 ಮೊಬೈಲ್ ಫೊನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜುರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ಈ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಪ್ರಕಾಶ್ ದೇವರಾಜು ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ, ಬದ್ರಿನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ, ರವಿ ಡಿ ನಾಯ್ಕ ಡಿ.ಎಸ್.ಪಿ ಶಿರಸಿ ಉಪವಿಭಾಗ, ಬಿ.ಯು ಪ್ರದೀಪ್ ವೃತ್ತ ನಿರೀಕ್ಷಕರು ಶಿರಸಿ ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಪ್ರೋ ಪಿ.ಎಸ್.ಐ ರತ್ನಾ ಕುರಿ ಸಿಬ್ಬಂದಿಗಳಾದ ಪ್ರಶಾಂತ ಪವಾಸ್ಕರ್ ನಗರ ಠಾಣೆ , ಚಂದ್ರಪ್ಪ ಕೊರವರ ಬನವಾಸಿ ಠಾಣೆ,ಮೋಹನ ನಾಯ್ಕ, ರಾಮಯ್ಯ ಪೂಜಾರಿ ,ಹನುಮಂತ ಮಾಕಾಪುರರವರನ್ನು ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತ್ತು.
ವಿಸ್ಮಯ ನ್ಯೂಸ್, ಶಿರಸಿ