ಕಾರವಾರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕಿ ರೂಪಾಲಿ : ಅಂಕೋಲಾದಲ್ಲಿ 6055 ಪುಟಾಣಿಗಳಿಗೆ ಪೊಲೀಯೋ ಹನಿ

ಕಾರವಾರ : ಕೋವಿಡ್ ಮತ್ತಿತರ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಪಲ್ಸ್ ಪೊಲೀಯೋ ಅಭಿಯಾನ ಜ.31 ಭಾನುವಾರ ದಿಂದ ಪುನರಾರಂಭಗೊಂಡಿದ್ದು, ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಪುಟಾಣಿಗೆ ಪೋಲಿಯೋ ಹನಿ ಹಾಕುವ ಮೂಲಕ ಅಭಿ ಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ, ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಳಕರ್, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಅಂಕೋಲಾ : ಇದೇ ವೇಳೆ, ತಾಲೂಕಾ ಆಸ್ಪತ್ರೆಯಲ್ಲಿ ವಿವಿಧ ಜನಪತ್ರಿನಿಧಿಗಳು ಪಲ್ಸ್ ಪೋಲೊಯೋ ಅಭಿಯಾನಕ್ಕೆ ಚಾಲನೆ ನೀಡಿದರು. ತಾ.ಪಂ. ಅಧ್ಯಕ್ಷೆ ಸುಜಾತಾ ಗಾಂವಕರ, ಪುರಸಭೆ ಅಧ್ಯಕ್ಷ ಶಾಂತಾಲಾ ನಾಡಕರ್ಣಿ, ಉಪಾಧ್ಯಕ್ಷೆ ರೇಖಾ ಡಿ.ಗಾಂವಕರ, ತಹಸೀಲ್ದಾರ್ ಉದಯ ಕುಂಬಾರ, ಟಿಎಚ್‍ಒ ಡಾ.ನಿತಿನ್, ಆಡ ಳಿತಾಧಿಕಾರಿ ಡಾ.ಮಹೇಂದ್ರ ನಾಯಕ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ನಾಯಕ, ರೋಟರಿ ಪ್ರಮುಖರಾದ ಸತ್ಯಾನಂದ ನಾಯಕ, ಭಾಸ್ಕರ ನಾರ್ವೇಕರ್, ವಿವಿಧ ಜನಪ್ರತಿನಿಧಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತಾಲೂಕು ವ್ಯಾಪ್ತಿಯ 5 ಪ್ರಾಥಮಿಕ ಕೇಂದ್ರಗಳು, ಪಟ್ಟಣದ ಸರ್ಕಾರಿ ಆಸ್ಪತ್ರೆ ಮತ್ತು ವಿಶೇಷ 64 ಪೊಲೀಯೋ ಬೂತ್‍ಗಳ ಮೂಲಕ ಒಟ್ಟಾರೆಯಾಗಿ 6399 ಮಕ್ಕಳಿಗೆ ಪೊಲೀಯೋ ಹನಿ ಹಾಕುವ ಗುರಿ ನಿಗಧಿಪಡಿಸಲಾಗಿದ್ದು, ತಾಲೂಕಿನಲ್ಲಿ ಒಟ್ಟೂ 6055 ಮಕ್ಕಳಿಗೆ ಪೊಲೀಯೋ ಹನಿ ಹಾಕಲಾಯಿತು.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Exit mobile version