Follow Us On

WhatsApp Group
Important
Trending

ಈತನ ಕೈಚಳಕ ನೋಡಿ: ಕ್ಷಣಾರ್ದದಲ್ಲಿ ಎಟಿಎಮ್ ಅದಲು-ಬದಲು: ಅಮಾಯಕರೇ ಈತನ ಟಾರ್ಗೆಟ್

ಮುಂಡಗೋಡ: ಅಡ್ಡದಾರಿಯನ್ನೇ ಬಳಸಿಕೊಂಡು ದುಡ್ಡು ಮಾಡುವ ದುಷ್ಕರ್ಮಿಗಳು ಇತ್ತಿಚೆಗೆ ಎಲ್ಲೆಡೆ ಹುಟ್ಟುಕೊಂಡಿದ್ದಾರೆ. ಅಮಾಯಕ ಅಮಾಯಕತನವನ್ನೇ ಬಂಡವಾಳ ಮಾಡಿಕೊಳ್ಳುವ ಇವರು ತಮ್ಮ ಕೈಚಳಕ ತೋರಿ ಮೋಸ ಮಾಡುತ್ತಿದ್ದಾರೆ. ಇಂತದೊಂದು ಪ್ರಕರಣ ಈಗ ಬೆಳಕಿಗೆ ಬಂದಿದೆ. ಇವರು ಹೇಗೆಲ್ಲಾ ಮೋಸ ಮಾಡ್ತಾರೆ ಅನ್ನೋದಕ್ಕೆ ಇದೊಂದು ಉತ್ತಮ ಉದಾಹರಣೆ.. ತಾಲೂಕಿನ ವ್ಯಕ್ತಿಯೋರ್ವನಿಗೆ ಅಪರಿಚಿತ ವ್ಯಕ್ತಿಯೋರ್ವ ಎಟಿಎಂ ನಿಂದ ಹಣ ತೆಗೆದುಕೊಡುವ ನೆಪದಲ್ಲಿ ಮೋಸ ಮಾಡಿದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂತರ್ ಜಿಲ್ಲಾ ವಂಚನಕನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಂನಲ್ಲಿ ಇತ್ತಿಚೆಗೆ ಹಣ ತೆಗೆದುಕೊಡಿವ ನೆಪವೊಡ್ಡಿ ಎ.ಟಿ.ಎಂ ಕಾರ್ಡ್ ಪಡೆದ ದುಷ್ಕರ್ಮಿಯೊಬ್ಬ ಪಾಸವರ್ಡ್ ತಿಳಿದುಕೊಂಡಿದ್ದ. ಹಣ ತೆಗೆದುಕೊಡುವ ನಾಟಕವಾಗಿ ತನ್ನ ಕೈಚಳಕದಿಂದ ವ್ಯಕ್ತಿಯ ಎ.ಟಿ.ಎಂ ಕಾರ್ಡ ಕ್ಷಣಾರ್ಧದಲ್ಲಿ ಅದಲುಬದಲು ಮಾಡಿದ್ದಾನೆ., ತನ್ನಲ್ಲಿರುವ ಬೇರೆ ಎ.ಟಿ.ಎಮ್ ಕಾರ್ಡ ಕೊಟ್ಟು ನಂತರ ಅದೇ ದಿನ ವ್ಯಕ್ತಿಯ ಎ.ಟಿ.ಎಂ ಉಪಯೋಗಿಸಿ 20,000 ರೂ ಹಣವನ್ನು ಡ್ರಾ ಮಾಡಿ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಭೇದಿಸಲು ಶಿವ ಪ್ರಕಾಶ್ ದೇವರಾಜು ಪೊಲೀಸ್ ಅಧೀಕ್ಷಕರು ಕಾರವಾರ, ಎಸ್ ಬದರಿನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ರವಿ.ಡಿ ನಾಯ್ಕ ಡಿ.ಎಸ್.ಪಿ ಶಿರಸಿ ರವರ ಮಾರ್ಗದರ್ಶನದಲ್ಲಿ ಪ್ರಭುಗೌಡ ಡಿ.ಕೆ ಪೊಲೀಸ ನಿರೀಕ್ಷಕರು ರವರ ನೇತೃತ್ವದ ವಿಶೇಷ ತಂಡ ರಚಿಸಿದ್ದರು. ಮೋಸ ಹೋದ ವ್ಯಕ್ತಿಯ ಹಣವನ್ನು ಆರೋಪಿಯು ಹಾನಗಲ್ ಎ.ಟಿ.ಎಂ ದಿಂದ ಡ್ರಾ ಮಾಡಿದ್ದು ತಿಳಿದು ಬಂದಿದೆ. ವ್ಯಕ್ತಿಗೆ ಕೊಟ್ಟ ಎ.ಟಿ.ಎಂ ಮಾಹಿತಿ ಸಂಗ್ರಹಿಸಲು ಅದು ಬಂಕಾಪುರದ ಒಬ್ಬ ಮಹಿಳೆಗೆ ಸಂಬ0ಧಿಸಿದ್ದು ಇದ್ದು ಅವಳಿಗೂ ಸಹ ಮೋಸ ಮಾಡಿದ ಬಗ್ಗೆ ತಿಳಿದು ಬಂದಿದೆ. ಆರೋಪಿ ಗಿರೀಶನ ತಂದೆ ಸಿದ್ದಪ್ಪನ್ನನು ವಿಚಾರಣೆ ಮಾಡಿದಾಗ ಇನ್ನೂ ಇಬ್ಬರಿಗೆ ಈ ರೀತಿ ಮೋಸಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯು ಕಳೆದ ವರ್ಷ ಮಂಡ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ಎಂಟು ಜನರಿಗೆ ಹಣ ತೆಗೆದುಕೊಡುವ ನೆಪದಲ್ಲಿ ಮೋಸ ಮಾಡಿ ಬಂಧನಕ್ಕೊಳಗಾಗಿದ್ದ. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ. ಬಳಿಕವೂ ತನ್ನ ಮೋಸ ಮಾಡುವ ಬುದ್ಧಿಯನ್ನು ಬಿಟ್ಟಿರಲಿಲ್ಲ.

ಈ ರೀತಿ ಎ.ಟಿ.ಎಮ್ ಕಾರ್ಡ ಬದಲಾಯಿಸಿ ಜನರಿಗೆ ಮೋಸ ಮಾಡುವ ಅಂತರಜಿಲ್ಲಾ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡದಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳಾದ ಪ್ರಭುಗೌಡ ಡಿ.ಕೆ ಪಿ.ಐ ಮುಂಡಗೋಡ ಬಸವರಾಜ ಮಬನುರ ಪಿ.ಎಸ್.ಐ. ಮುಂಡಗೋಡ, ಬಾಬುದ್ದಿನ್ ಪ್ರೊ. ಪಿ.ಎಸ್.ಐ. ಎ.ಎಸ್.ಐ.ಗಳಾದ ಅಶೋಕ ರಾಠೋಡ. ಕೆ.ಎನ್.ಘಟಕಾಂಬಳೆ, ಹಾಗೂ ಸಿಬ್ಬಂದಿಗಳಾದ ವಿನೋದಕುಮಾರ. ಜಿ. ಬಿ, ಅರುಣಕುಮಾರ ಬಾಗೇವಾಡಿ, ಭಗವಾನ ಗಾಂವಕರ, ರಾಘವೇಂದ್ರ ನಾಯ್ಕ, ತಿರುಪತಿ ಚೌಡಣ್ಣನವರ, ರಾಘವೇಂದ್ರ ಪಟಗಾರ ಟೇಕ್ನಿಕಲ್ ಸೇಲ್ ಕಾರವಾರದ ಸಿಬ್ಬಂದಿಗಳಾದ ಸುಧೀರ ಮಡಿವಾಳ, ಅಣ್ಣಪ್ಪ ಬುಡಿಗೇರ ರವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777


ವಿಸ್ಮಯ ನ್ಯೂಸ್, ಕಾರವಾರ

Back to top button