Follow Us On

WhatsApp Group
Big News
Trending

ಸ್ಯಾನಿಟರಿ ನ್ಯಾಪ್ ಕಿನ್ ನಲ್ಲಿ ಚಿನ್ನ ಸಾಗಾಟ!ಪೇಸ್ಟ್ ಗೊಳಗೆ ಬಚ್ಚಿಟ್ಟ ಗೋಲ್ಡ್ ವಶಕ್ಕೆ : ಮಹಿಳೆ ಸಹಿತ ಇಬ್ಬರನ್ನು ಬಂಧಿಸಿದ ಅಧಿಕಾರಿಗಳು

ಚಿನ್ನದ ಅಕ್ರಮ ಸಾಗಾಟಕ್ಕೆ ಖರ‍್ನಾಕ್ ಐಡಿಯಾ
ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಬಯಲು
ಇಬ್ಬರು ಕಿಲಾಡಿಗಳು ಅಂದರ್
ಪೇಸ್ಟ್ ನಲ್ಲಿ ಚಿನ್ನವನ್ನು ಪುಡಿ ರೂಪದಲ್ಲಿ ಬಚ್ಚಿದ್ದರು

ಮಂಗಳೂರು: ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಕೆಲವರು ಏನೇನೋ ಐಡಿಯಾ ಮಾಡ್ತಾ ಇದ್ದಾರೆ. ಆದರೆ, ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಕಳ್ಳಸಾಗಾಟವನ್ನು ತಡೆಯುತ್ತಿದ್ದಾರೆ. ಇತ್ತಿಚೆಗೆ ಚಿನ್ನವನ್ನು ಅಕ್ರಮವಾಗಿ ಹೊರದೇಶಗಳಿಂದ ತಂದು ಅವುಗಳನ್ನು ಇಲ್ಲಿ ಮಾರಾಟ ಮಾಡುವ ವ್ಯವಸ್ಥಿತ ಜಾಲವೇ ಸಕ್ರೀಯವಾಗಿದೆ. ಇದನ್ನೆಲ್ಲ ಅರಿತೇ ಕಸ್ಟಮ್ಸ್ ಅಧಿಕಾರಿಗಳು ಎಚ್ಚೆತ್ತುಕೊಂಡು, ಎಲ್ಲಾ ರೀತಿಯ ತಪಾಸಣೆ ಮಾಡುತ್ತಿದ್ದಾರೆ.

ಹೌದು, ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ್ಯಾಪ್ ಕಿನ್ ಒಳಗಡೆ ಬಚ್ಚಿಟ್ಟು ಹಾಗೂ ಪುಡಿರೂಪದಲ್ಲಿ ಅಂಟಿನೊಳಗೆ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 53 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ಪತ್ತೆಹಚ್ಚಿ, ಸ್ವಾಧೀನ ಪಡಿಸಿಕೊಂಡಿದ್ದಾರೆ. ಮಹಿಳೆ ಸಹಿತ ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭ ಮಹಿಳೆ ಮತ್ತು ಮತ್ತೋರ್ವ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇಬ್ಬರಿಂದ ವಶಪಡಿಸಿಕೊಂಡ ಚಿನ್ನದ ಮೌಲ್ಯ ಅಂದಾಹು 53 ಲಕ್ಷ ರೂಪಾಯಿ ಎನ್ನಲಾಗಿದೆ. ಫಾತಿಮಾ ಕೊಟ್ಟಚ್ಚೇರಿ(47 ) ಸ್ಯಾನಿಟರಿ ನ್ಯಾಪ್ ಕಿನ್ ನೊಳಗೆ ಬಚ್ಚಿಟ್ಟು ಹಾಗೂ ಮೊಹಮ್ಮದ್ ಮೊಯ್ದೀನ್( 50 ) ಪುಡಿ ರೂಪದಲ್ಲಿರುವ ಚಿನ್ನವನ್ನು ಪೇಸ್ಟ್ ಗೊಳಗೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದರು.

ಕಸ್ಟಮ್ ಅಧಿಕಾರಿಗಳು ಕಾಸರಗೋಡು ಮೂಲದ ಫಾತಿಮಾ ಕೊಟ್ಟಚ್ಚೇರಿ ಎಂಬಾಕೆಯ ಬಳಿಯಿಂದ 805 ಗ್ರಾಂ ತೂಕದ ಚಿನ್ನ ಹಾಗು ಭಟ್ಕಳ ಮೂಲದ ಮೊಹಮ್ಮದ್ ಮೊಯ್ದೀನ್ ಎಂಬಾತನಿ0ದ 303 ಗ್ರಾಂ ತೂಕದ ಚಿನ್ನವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

” ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button