170 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಇಂದು ಇಬ್ಬರ ಸಾವು
ಹೊನ್ನಾವರ ತಾಲೂಕಿನಲ್ಲಿ ಇಂದು 20 ಕರೊನಾ ಪಾಸಿಟಿವ್ ಪ್ರಭಾತನಗರ,ಕೆಳಗಿನಪಾಳ್ಯ,ಹೆರಂಗಡಿ,ಅನಂತವಾಡಿ, ಕಡತೋಕಾ, ಕವಲಕ್ಕಿ ಭಾಗದಲ್ಲಿ ಸೋಂಕು ಪತ್ತೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 184 ಕರೊನಾ ಕೇಸ್ ದಾಖಲಾಗಿದೆ ಕಾರವಾರದಲ್ಲಿ 41, ಕುಮಟಾ 6 ,ಹೊನ್ನಾವರ ಮತ್ತು ಭಟ್ಕಳ 16, ಶಿರಸಿ 49 ಸಿದ್ದಾಪುರ 26, ಯಲ್ಲಾಪುರ 17, ಮುಂಡಗೋಡ 10, ಹಳಿಯಾಳ 2 ಮತ್ತು ಜೋಯ್ಡಾದಲ್ಲಿ ಒಂದು ಕೇಸ್ ದಾಖಲಾಗಿದೆ.
ಇದೇ ವೇಳೆ ಇಂದು 170 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 2 ಅಂಕೋಲಾದಲ್ಲಿ 11, ಕುಮಟಾ 37, ಹೊನ್ನಾವರದಲ್ಲಿ 3, ಭಟ್ಕಳದಲ್ಲಿ 36, ಶಿರಸಿಯಲ್ಲಿ 1, ಸಿದ್ದಾಪುರದಲ್ಲಿ 47 ಹಳಿಯಾಳದಲ್ಲಿ 19, ಜೋಯಡಾದಲ್ಲಿ ಐದು ಮಂದಿ ಸೇರಿ 170 ಮಂದಿ ಬಿಡುಗಡೆಯಾಗಿದ್ದಾರೆ.
ಇಂದು ಇಬ್ಬರ ಸಾವು
ಕರೊನಾದಿಂದಾಗಿ ಜಿಲ್ಲೆಯಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ ಅಂಕೋಲಾದಲ್ಲಿ ಮತ್ತು ಹೊನ್ನಾವರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 85ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 7360 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ 20 ಪಾಸಿಟಿವ್
ಹೊನ್ನಾವರ: ತಾಲೂಕಿನಲ್ಲಿ ಇಂದು 20 ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ ಪ್ರಭಾತನಗರ,ಕೆಳಗಿನಪಾಳ್ಯ,ಹೆರಂಗಡಿ,ಅನಂತವಾಡಿ, ಕಡತೋಕಾ, ಕವಲಕ್ಕಿ ಭಾಗದಲ್ಲಿ ಸೋಂಕು ಪತ್ತೆಯಾಗಿದೆ.
ಹೊನ್ನಾವರ ಪಟ್ಟಣದ ಪ್ರಭಾತನಗರದ 67 ವರ್ಷದ ಪುರುಷ, ಪಟ್ಟಣದ 64 ವರ್ಷದ ಪುರುಷ, ಕೆಳಗಿನ ಪಾಳ್ಯದ 45 ವರ್ಷದ ಮಹಿಳೆ, 18 ವರ್ಷದ ಯುವತಿ,
ಗ್ರಾಮಿಣ ಭಾಗವಾದ ಸಾಲಕೋಡದ 30 ವರ್ಷದ ಯುವಕ, ಹಳದೀಪುರದ 72 ವರ್ಷದ ಪುರುಷ, 59 ವರ್ಷದ ಪುರುಷ, 48 ವರ್ಷದ ಮಹಿಳೆ, 66 ವರ್ಷದ ಮಹಿಳೆ, ಹೆರಂಗಡಿಯ 16 ವರ್ಷದ ಬಾಲಕಿ, ಕಾಸರಕೋಡದ 44 ವರ್ಷದ ಮಹಿಳೆ, 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಅನಂತವಾಡಿಯ 40 ವರ್ಷದ ಪುರುಷ,ಮಂಕಿಯ 62 ಮಹಿಳೆ, 32 ವರ್ಷದ ಯುವತಿ, ಕವಲಕ್ಕಿಯ 35 ವರ್ಷದ ಯುವತಿ, 23 ವರ್ಷದ ಯುವತಿ, ಕಡತೋಕಾದ 48 ವರ್ಷದ ಮಹಿಳೆ, 67 ವರ್ಷದ ಪುರುಷ ಸೇರಿ 20 ಜನರಲ್ಲಿ ಕರೊನಾ ಪಾಸಿಟಿವ್ ದೃಢ ಪಟ್ಟದೆ. ಇಂದು ವರದಿಯಾದ ಬಹುತೇಕ ಪ್ರಕರಣ ಗ್ರಾಮೀಣ ಭಾಗದಲ್ಲೆ ಪತ್ತೆಯಾಗಿದೆ.
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ