Follow Us On

WhatsApp Group
Uttara Kannada
Trending

ಕುಮಟಾದಲ್ಲಿಂದು 33 ಕರೊನಾ ಕೇಸ್ ದಾಖಲು

  • ಹೆಗಡೆ,‌ಮಿರ್ಜಾನ್,ಹೊಳೆಗದ್ದೆ, ಬಾಡ,ಮಾಸೂರು,ಮದ್ಗುಣಿ,ಹೊಳೆಗದ್ದೆ ಸೇರಿ ಹಲವೆಡೆ ಸೋಂಕು ದೃಢ
  • ಕುಮಟಾದಲ್ಲಿ ಕಿರಾಣಿ‌ ಮಳಿಗೆ ಸ್ವಯಂಪ್ರೇರಿತ ಬಂದ್ ನಿರ್ಧಾರ ವಾಪಸ್

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 33 ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬಂಕಿಕೋಡ್ಲಾದಲ್ಲಿ 3, ಹೆಗಡೆ 3, ಮಿರ್ಜಾನ್ 2, ಸುಭಾಷ್ ರೋಡ್ ಸಮೀಪ 2, ಗಾಂಧಿನಗರ 2, ಮಾಸೂರ್ 2, ಹೊಸಹೆರವಟ್ಟಾ 2, ಸೇರಿದಂತೆ ಮದ್ಗುಣಿ, ಹೊಲನಗದ್ದೆ, ಬಾಡ, ಹೊಳೆಗದ್ದೆ, ತದಡಿ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಕಂಡುಬಂದಿದೆ.

ಕುಮಟಾದ ಮದ್ಗುಣಿಯ 11 ವರ್ಷದ ಬಾಲಕ, ಬಾಡದ 30 ವರ್ಷದ ಪುರುಷ, ಹೋಳೆಗದ್ದೆಯ 57 ವರ್ಷದ ಪುರುಷ, ಮಣ್ಕಿಯ 64 ವರ್ಷದ ಪುರುಷ, ಕುಮಟಾದ 49 ವರ್ಷದ ಪುರುಷ, ಕುಮಟಾದ 33 ವರ್ಷದ ಪುರುಷ, 27 ವರ್ಷದ ಯುವಕ, 44 ವರ್ಷದ ಮಹಿಳೆ, 49 ವರ್ಷದ ಪುರುಷ, 64 ವರ್ಷದ ಮಹಿಳೆ, 47 ವರ್ಷದ ಪುರುಷ, 79 ವರ್ಷದ ವೃದ್ಧ, 69 ವರ್ಷದ ಪುರುಷ, 78 ವರ್ಷದ ವೃದ್ಧೆ, 47 ವರ್ಷದ ಮಹಿಳೆ, ಮಿರ್ನಾನಿನ 36 ವರ್ಷದ ಪುರುಷ, ಮಿರ್ಜಾನಿನ 30 ವರ್ಷದ ಪುರುಷ, ಬಂಕಿಕೋಡ್ಲಾದ 45 ವರ್ಷದ ಮಹಿಳೆ, ಬಂಕಿಕೋಡ್ಲಾದ 25 ವರ್ಷದ ಯುವತಿಗೆ ಸೋಂಕು ಕಾಣಿಸಿಕೊಂಡಿದೆ.

ಬಂಕಿಕೋಡ್ಲಾದ 21 ವರ್ಷದ ಯುವತಿ, ಹೆಗಡೆಯ 27 ವರ್ಷದ ಪುರುಷ, ಹೆಗಡೆಯ 60 ವರ್ಷದ ಮಹಿಳೆ, ಹೆಗಡೆಯ 23 ವರ್ಷದ ಪುರುಷ, ಮಾಸೂರಿನ 55 ವರ್ಷದ ಮಹಿಳೆ, ಮಾಸೂರಿನ 29 ವರ್ಷದ ಯುವತಿ, ತದಡಿಯ 22 ವರ್ಷದ ಯುವಕ, ಹೊಸಹೆರವಟ್ಟಾದ 78 ವರ್ಷದ ವೃದ್ಧ, ಹೊಸಹೆರವಟ್ಟಾದ 67 ವರ್ಷದ ಮಹಿಳೆ, ಗಾಂಧಿನಗರದ 53 ವರ್ಷದ ಪುರುಷ, ಗಾಂಧಿನಗರದ 24 ವರ್ಷದ ಯುವತಿ, ಸುಭಾಷ್ ರೋಡ್ ಸಮೀಪದ 64 ವರ್ಷದ ಪುರುಷ, ಸುಭಾಷ್ ರೋಡ್ ಸಮೀಪದ 61 ವರ್ಷದ ಪುರುಷ, ಹೊಲನಗದ್ದೆಯ 32 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದಿನ ಈ 33 ಹೊಸ ಪ್ರಕರಣ ಸೇರಿ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 787 ಕ್ಕೆ ಏರಿಕೆಯಾಗಿದೆ.

ಕಿರಾಣಿ‌ ಮಳಿಗೆ ಸ್ವಯಂಪ್ರೇರಿತ ಬಂದ್ ನಿರ್ಧಾರ ವಾಪಸ್

ಇದೇ ವೇಳೆ, ಪಟ್ಟಣದಲ್ಲಿ ಕಿರಾಣಿ ವ್ಯಾಪಾರಸ್ಥರ ಸಂಘ ನಾಳೆಯಿಂದ ವಾರಗಳ ಕಾಲ ಕಿರಾಣಿ ಮಳಿಗೆಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನಿಸಿ ಹೊರಡಿಸಿದ್ದ ಪ್ರಕಟಣೆಯನ್ನು ಹಿಂತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ಸಂಘದ ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಕರೆಯಿಸಿ ಸಭೆ ನಡೆಸಿದ ಉಪವಿಭಾಗಾಧಿಕಾರಿ ಅಜಿತ್ ಎಂ., ಅಂಗಡಿಗಳನ್ನು ಮುಚ್ಚದೆ, ವ್ಯಾಪಾರ ನಡೆಸುವಂತೆ ಅಂಗಡಿಕಾರರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

Back to top button