Big News
Trending

ಕೈಬಳೆಯಿಂದ ಸಿಕ್ಕಿತು ಹಂತಕರ ಸುಳಿವು: ಮರದ ಕೊಂಬೆ ತುಂಡಾಗಿ ಬಿದ್ದ ವಿಚಾರದಲ್ಲಿ ಜಗಳ: ಪಕ್ಕದ ಮನೆಯ ಮಹಿಳೆಯನ್ನು ಕೊಲೆ ಮಾಡಿದ್ದ ಕೊನೆಗೂ ಆರೋಪಿಗಳು ಅಂದರ್

ಅಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆ ತಲೆಗೆ ಆಯಧದಿಂದ ಬಡಿದು ಹಲ್ಲೆ ನಡೆಸಿದ್ದಾರೆ. ಕೆಳಗೆ ಬಿದ್ದ ವೇಳೆ ಮೃತರು ಧರಿಸಿದ ಸೀರೆಯನ್ನು ಕೊರಳಿಗೆ ಹಾಕಿ ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸುವ ಪ್ರಯತ್ನ ನಡೆಸಿದ್ದು. ಅಮಾಯಕರಂತೆ ಇದ್ದ ನೆರೆಮನೆಯವರು ಇದೀಗ ಅರೆಸ್ಟ್ ಆಗಿದ್ದು, ಕೊಲೆಯ ನಿಗೂಢತೆ ಬಯಲಾಗಿದೆ.

ಭಟ್ಕಳ: ಮನೆಗೆ ನುಗ್ಗಿ ಮನೆಯಲ್ಲಿದ್ದ ಒಂಟಿ ಮಹಿಳೆಯೊರ್ವರನ್ನು ಹತ್ಯೆ ಮಾಡಿದ ಪ್ರಕರಣ ಭಟ್ಕಳ ತಾಲೂಕಿನಾದ್ಯಂತ ಸದ್ದು ಮಾಡಿತ್ತು. ಇದೀಗ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ. ಕೊಲೆಯಾದ ಲಕ್ಷ್ಮಿ ಕೃಷ್ಣ ನಾಯ್ಕ(45) ಮನೆಯ ಎದುರು ಇರುವ ದಾರಿ ಪಕ್ಕದಲ್ಲಿ ಬೆಳೆದ ಗೋಡಂಬಿ ಮರದ ಕೊಂಬೆ ತುಂಡಾಗಿ ಬಿದ್ದ ವಿಚಾರದಲ್ಲಿ ಮೃತರೊಂದಿಗೆ ಮಾಸ್ತಮ್ಮ ನಾಯ್ಕ, ಮಾದೇವ ನಾಯ್ಕ, ಎನ್ನುವವರು ಗಲಾಟೆ ನಡೆಸಿದ್ದರು. ನಂತರ ಜನವರಿ 23ರ ರಾತ್ರಿ ಮನೆಯೊಳಗೆ ನುಗ್ಗಿ ಬೆಂಕಿ ಹಾಕಿದ್ದು, ನಂತರ ಅವರನ್ನು ಬೆಂಕಿಗೆ ದೂಡಲು ಪ್ರಯತ್ನಿಸಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಅಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆ ತಲೆಗೆ ಆಯಧದಿಂದ ಬಡಿದು ಹಲ್ಲೆ ನಡೆಸಿದ್ದಾರೆ. ಕೆಳಗೆ ಬಿದ್ದ ವೇಳೆ ಮೃತರು ಧರಿಸಿದ ಸೀರೆಯನ್ನು ಕೊರಳಿಗೆ ಹಾಕಿ ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸುವ ಪ್ರಯತ್ನ ನಡೆಸಿದ್ದಾರೆ. ಆರೋಪಿಗಳಿಗೆ ಕೊಲ್ಲುವ ಉದ್ದೇಶ ಇತ್ತೋ ಅಥವಾ ಇಲ್ಲವೋ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಮಹಿಳೆ ಸತ್ತ ಬಳಿಕ ಅಲ್ಲಿಯೇ ಇದ್ದ ಸೀಮೆ ಎಣ್ಣೆಯನ್ನು ಕೋಣೆಗೆ ಚೆಲ್ಲಿ ಬೆಂಕಿ ಹಚ್ಚಿದ ಆರೋಪಿಗಳು, ಅಲ್ಲಿಂದ ಪರಾರಿಯಾಗಿದ್ದು, ತಮಗೇನೂ ತಿಳಿದಿಲ್ಲ ಎಂಬಂತೆ ನಾಟಕವಾಡಿದ್ದರು. ಭಟ್ಕಳದ ಉತ್ತರ ಕೊಪ್ಪಾ ನಿವಾಸಿ ಮಾದೇವ ನಾಯ್ಕ ಮತ್ತು ಮಾಸ್ತಮ್ಮ ನಾಯ್ಕ ಬಂಧಿತ ಆರೋಪಿಗಳ ದುಷ್ಕೃತ್ಯ ಇದೀಗ ಬಯಲಾಗಿದೆ.

ಕೈಬಳೆಯಿಂದ ಸಿಕ್ಕಿತು ಸಾಕ್ಷ್ಯ? ಮಹಿಳೆ ಮೃತಪಟ್ಟ ಬಳಿಕ ಮಗ, ಇದೇ ಆರೋಪಿಗಳ ವಿರುದ್ಧ ಅನುಮಾನ ವ್ಯಕ್ತಪಡಿಸಿ, ಕೇಸ್ ದಾಖಲಿಸಿದ್ದ. ಆದರೆ, ಪೊಲೀಸರಿಗೆ ಯಾವುದೇ ಪೂರಕ ಸಾಕ್ಷ್ಯ ಸಿಕ್ಕಿರಲಿಲ್ಲ. ತನಿಖೆ ಮುಂದುವರಿಸಿದ ಪೊಲೀಸರು ಸ್ಥಳದಲ್ಲಿ ಹಸಿರು ಬಳೆಯನ್ನು ಪತ್ತೆ ಹಚ್ಚಿದ್ದರು. ಮೃತ ಮಹಿಳೆ ವಿಧವೆ ಆಗಿದ್ದರಿಂದ ಹಸಿರು ಬಳೆ ತೊಡುವುದಿಲ್ಲ ಎನ್ನುವ ಹಿನ್ನಲೆಯಲ್ಲಿ ತನಿಖೆ ಚುರುಕು ಗೊಳಿಸಿದ್ದರು. ಮೃತಳ ಮನೆಯಲ್ಲಿ ಸಇಕ್ಕಿ ಕೈಬಳೆಯ ತುಣುಕು ಮತ್ತು ಆರೋಪಿ ಮಹಿಳೆಯ ಕೈಯಲ್ಲಿದ್ದ ಕೈಬಳೆ ತುಣುಕು ಹೋಲುತ್ತಿತ್ತು. ಸಂಬಂಧ ಮಹಿಳೆಯನ್ನು ಕರೆದು ಮತ್ತೊಮ್ಮೆ ವಿಚಾರಿಸಿದಾದ ವಿಷಯ ಬೆಳಕಿಗೆ ಬಂದಿದೆ.

ಮಹಿಳೆಯನ್ನು ಕೊಲೆ ಮಾಡಿದ ನೆರಮನೆಯ ಇಬ್ಬರು ಆರೋಪಿಗಳನ್ನು ಬಂಧಿಸಿ ಪೊಲೀಸರು ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ. ಇನ್ನಿಲ್ಲದ ತಲೆ ನೋವು ತಂದಿದ್ದ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಈ ಪ್ರಕರಣದಲ್ಲಿ ಮತ್ಯಾರು ಭಾಗಿಯಾಗಿದ್ದಾರೆ ಎಂಬುದು ತಿಳಿದುಬರಬೇಕಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button