Follow Us On

WhatsApp Group
Big News
Trending

ಹೋಳಿ ಹಬ್ಬದ ಹಿನ್ನಲೆ: ಆಚರಣೆಯ ಮಹತ್ವವೇನು? ಇದರ ಹಿಂದಿರುವ ವೈಜ್ಞಾನಿಕ ರಹಸ್ಯ ಏನಿದೆ?

ಲೇಖನ: ಶ್ರೀ ಗಣೇಶ ಭಟ್ಟ , ಸಂಸ್ಕøತಉಪನ್ಯಾಸಕರು.
ನೆಲ್ಲಿಕೇರಿ,ಕುಮಟಾ.ಉಕ.
[email protected]

ಹೋಳಿಯಂದು ಎರಚಿ ಕೊಂಡಬಣ್ಣವು ಪರಸ್ಪರ ಪ್ರೀತಿ ಹೆಚ್ಚಿಸುವುದು. ಹಳೆಯ ಕಹಿ ಮರೆತು ಪರಸ್ಪರ ಎಲ್ಲರನ್ನು ಒಂದಾಗಿಸುವುದು.ಖಿನ್ನತೆ,ನೋವು,ಹತಾಶೆ,ದುಃಖ,ಒಂಟಿತನ,ಕಿರಿಕಿರಿ,ವಿರಕ್ತಿ ಭಾವನೆಗಳನ್ನು ಕಳೆಯುವುದು.ನಮಗೆ ಅರಿವಿಲ್ಲದಂತೆ ನಮ್ಮದೇಹ-ಮನಸ್ಸು-ಆತ್ಮಗಳು ಒಂದಾಗಿ ಅಧ್ಯಾತ್ಮದ ಚರಮಸೀಮೆಯಾದ ಪರಮಶಾಂತಿ ಹೊಂದುವುದು.

ಹೋಳಿಹುಣ್ಣಿಮೆ, ಕಾಮನಹುಣ್ಣಿಮೆ, ವಸಂತಪೂರ್ಣಿಮೆ,ಸುಗ್ಗಿಹುಣ್ಣಿಮೆ ಇವೇ ಮುಂತಾದ ಹೆಸರಿನಿಂದ ನಮ್ಮಇಡೀ ಭಾರತ ದೇಶಾದ್ಯಂತ ಮಾತ್ರವಲ್ಲದೇ,ಭಾರತೀಯ ಸಂಪ್ರದಾಯವನ್ನು ಪ್ರೀತಿಸುವ ಬೇರೆ ಬೇರೆದೇಶದವರೂ, ಸಡಗರ-ಸಂಭ್ರಮದಿಂದ ಆಚರಿಸುವ ಬಣ್ಣದ ಹಬ್ಬವೇ ಹೋಳಿಹಬ್ಬ. ಈ ಹಬ್ಬದಲ್ಲಿ ಹಾಡುಕುಣಿತದೊಂದಿಗೆ ಬಣ್ಣ ಎರಚುವಿಕೆ ಇರುವುದರಿಂದ ಇದುರಾಗ-ರಂಗಿನ ಹಬ್ಬ.

ಶಿವರಾತ್ರೆ ಹಾಗೂ ಯುಗಾದಿಯ ನಡುವೆ ಬರುವ ಈ ಹಬ್ಬ,ಶಿಶಿರ ಋತುವಿನ ಚಳಿಯಗಲಿ,ಗ್ರೀಷ್ಮ ಋತುವಿನ ಸೆಕೆಯಾಗಲಿ ಇಲ್ಲದ,ವಸಂತನ ಆಗಮನಕ್ಕೆ ಗಿಡಮರಬಳ್ಳಿಗಳನ್ನೊಳಗೊಂಡ ಪ್ರಕೃತಿಸಿರಿಯು ಹಸಿರಿನಿಂದ ಕಂಗೊಳಿಸುವ ಸಮಯದಲ್ಲಿ,ಎಲ್ಲಾ ವರ್ಣೀಯರುಯುವಕ-ಯುವತಿಯರೂ ಸೇರಿದಂತೆಎಲ್ಲಾ ವಯಸ್ಸಿನ ಸ್ತ್ರೀಪುರುಷರು ಬಿಚ್ಚುಮನಸ್ಸಿನಿಂದ ಪರಸ್ಪರ ಬೆರೆತು ಸೌವಾರ್ದತೆಯಿಂದ ಆಚರಿಸುವ ಹಬ್ಬವಾಗಿದೆ. ಸಮಗ್ರ ಭಾರತದಲ್ಲಿ ಅಲ್ಲಲ್ಲಿಯ ಪ್ರಾದೇಶಿಕ ಪದ್ಧತಿ-ಸಂಪ್ರದಾಯಕ್ಕೆಅನುಗುಣವಾಗಿ ಈ ಹೋಳಿಹಬ್ಬವನ್ನು ಭಿನ್ನ ಭಿನ್ನವಾಗಿಎಲ್ಲರು ಒಂದಾಗಿ ಆಚರಿಸುವರು.

ಅಧ್ಯಾತ್ಮ ಯಾತ್ರೆಯಲ್ಲಿ ಸುಖಭೋಗಗಳಿಂದ ನಮ್ಮದೇಹ ಮತ್ತು ಮನಸ್ಸು ಆನಂದದಲ್ಲಿ ಲೀನವಾಗುವುದು ಮುಖ್ಯ. ಆತ್ಮ ಸಂತೋಷಗೊಳ್ಳಲು ದೇಹಸಂತೋಷ ಹಾಗೂ ಮನ್ಸಂತೋಷವಾಗಿರುವುದು ಮುಖ್ಯವೆನಿಸುವುದು. ಹೋಳಿಹಬ್ಬದಂದು ನಮ್ಮ ದೇಹ-ಮನಸ್ಸು-ಆತ್ಮ ಈ ಮೂರೂ ಸಂತೋಷವಾಗಿರುವ ಒಂದು ವಿಶೇಷವಾದ ದಿನ. ಹೋಳಿಹಬ್ಬದ ಆಚರಣೆಯ ಹಿನ್ನಲೆಯ ಕುರಿತಾಗಿ ಅನೇಕ ಪುರಾಣಕಥೆಗಳು ಪ್ರಚಲಿತದಲ್ಲಿವೆ.

ಢುಂಢಾರಾಕ್ಷಸಿಯಕಥೆ: ಸತ್ಯಯುಗದಲ್ಲಿ ಮಾಲಿ ಎನ್ನುವ ಹೆಸರಿನ ರಾಕ್ಷಸರಾಜನ ಮಗಳು ಢುಂಢಾ ಎಂಬ ರಾಕ್ಷಸಿಯಿದ್ದಳು. ಆಕೆ ಪಾರ್ವತಿ-ಪರಮೇಶ್ವರನ್ನು ಕಠಿಣತಪಸ್ಸಿನ ಮೂಲಕ ಪ್ರಸನ್ನಗೊಳಿಸಿ,ವರವನ್ನು ಬೇಡುವಾಗ-‘ವರ್ಷದಲ್ಲಿಒಂದು ದಿನ ಯುವಕ-ಯುವತಿಯರುನನ್ನ ಕೈಗೆ ಸಿಕ್ಕಿ,ನನ್ನ ಆಹಾರವಾಗಲಿ,ಹಸಿವನ್ನು ನೀಗಿಸಲಿ.’ಎಂದು ಬೇಡಿಕೊಂಡಳು.

ಪರಮೇಶ್ವರ ವರನೀಡುವಾಗ ಒಂದು ಷರತ್ತು ವಿಧಿಸಿದ -‘ಯುವಕ-ಯುವತಿಯರು ಮುಕ್ತವಾಗಿ ಬಣ್ಣಗಳನ್ನು ಎರಚುತ್ತಾ,ಹಾಡುಸಂಗೀತದೊಂದಿಗೆಕುಣಿಯುತ್ತಾ,ಬೀಭತ್ಸವೇಷದಲ್ಲಿಕಂಡುಬಂದರೆಅಂತವರನ್ನುತಿನ್ನಕೂಡದು’ಎಂದು ಆಜ್ಞಾಪಿಸಿದ. ಹೋಳಿಯದಿನ ಆ ರಾಕ್ಷಸಿ ತನ್ನ ಇಚ್ಛೆಪೂರೈಸಿಕೊಳ್ಳಲು ಆಗಮಿಸಿದಳು. ಆದರೆ ಆ ದಿನ ಯುವಕ-ಯುವತಿಯರೂ ಸೇರಿದಂತೆ ಎಲ್ಲರೂ ಪರಸ್ಪರ ಬಣ್ಣಎರಚಿ,ಮುಕ್ತವಾಗಿ ಕುಣಿದು ಕುಪ್ಪಳಿಸುವಯುವಕ-ಯುವತಿಯರನ್ನು ನೋಡಿದಳು ಹಾಗೂ ಆ ಢುಂಢಾರಾಕ್ಷಸಿ ಹಸಿವಿನಿಂದ ಮರಣ ಹೊಂದಿದಳು.

ಈ ದಿನದ ನೆನಪಿನಲ್ಲಿ ಎಲ್ಲರೂ ಈ ದಿನ ಪರಸ್ಪರ ಸಂತೋಷ, ಸೌಹಾರ್ದತೆಯಿಂದ, ಮುಕ್ತ ಮನಸ್ಸಿನಿಂದ ಬಣ್ಣವನ್ನುಎರಚಿ ಹೋಳಿಯ ಶುಭಾಶಯಗಳನ್ನು ಹಂಚಿಕೊಂಡರೆ, ಜೀವನದಲ್ಲಿ ಅನುಭವಿಸಿದ ಹತಾಶೆ,ಕೀಳರಿಮೆಗಳೆಲ್ಲಾ ದೂರವಾಗುವುದು ಎಂಬ ನಂಬಿಕೆ ಬಹಳಕಾಲದಿಂದ ನೆಡೆದುಬಂದಿದೆ.

ಹೋಳಿ(ಹೋಲಿಕಾ)ಕಥೆ:ತಾವೇ ಸ್ವಯಂ ಪರಮೇಶ್ವರರೆಂದು ಘೋಷಿಸಿಕೊಂಡ ಹಿರಣ್ಯಾಕ್ಷ-ಹಿರಣ್ಯಕಶಿಪುವರ ಸಹೋದರಿಯೇ ಹೋಲಿಕಾ.ಮಹಾಮಾಯಾವಿಯಾದ ಆಕೆ ಅಗ್ನಿಸಿದ್ಧಿಯನ್ನು ಪಡೆದುಕೊಂಡವಳಾಗಿದ್ದಳು. ದೈತ್ಯರಾಜನಾದ ಹಿರಣ್ಯಕಶಿಪುವು ಪರಮವಿಷ್ಣುಭಕ್ತನಾದತನ್ನ ಮಗ ಪ್ರಹ್ಲಾದನ್ನುಕೊಲ್ಲಲು ಬಹಳ ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ.ಹಿರಣ್ಯಕಶಿಪುವು ತನ್ನ ಸಹೋದರಿ ಹೋಲಿಕಾಗೆ ಹೇಗಾದರೂ ಮಾಡಿಮಗ ಪ್ರಹ್ಲಾದನ್ನುಕೊಲ್ಲುವಂತೆ ಆದೇಶಿಸುತ್ತಾನೆ.

ಆಕೆ ಪ್ರಹ್ಲಾದನ್ನು ಹಿಡಿದುಕೊಂಡುಅಗ್ನಿಯ ಮಧ್ಯದಲ್ಲಿ ಕುಳಿತುಕೊಳ್ಳುವಳು.ಅಗ್ನಿಸಿದ್ಧಿಯನ್ನು ಪಡೆದುಕೊಂಡ ನನಗೆ ಎನೂ ಆಗದು,ಪ್ರಹ್ಲಾದನುಅಗ್ನಿಗೆ ಸುಟ್ಟು ಭಸ್ಮವಾಗುವನುಎಂದು ಆಕೆ ಯೋಚಿಸಿದ್ದಳು ಆದರೆ ಪರಿಣಾಮ ಮಾತ್ರ ವಿಪರೀತವಾಯಿತು. ಹೋಲಿಕಾಳು ಆಗ್ನಿಯಲ್ಲಿ ದಗ್ಧಳಾದಳು.ಪ್ರಹ್ಲಾದನಿಗೆ ಏನೂ ಆಗದೆ‘ಶ್ರೀಹರಿ ’ಎನ್ನುತ್ತಾಆ ಭಸ್ಮರಾಶಿಯಿಂದ ಸಂತೋಷದಿಂದಎದ್ದು ಬಂದನು.ಈ ದಿನದ ನೆನಪಿನಲ್ಲಿ ಹೋಳಿ(ಹೋಲಿಕಾ)ಹಬ್ಬವನ್ನುಆಚರಿಸುತ್ತಾ ಬಂದಿದ್ದೇವೆ.

ಕಾಮದೇವನಕಥೆ:ದಾಕ್ಷಾಯಣಿಯನ್ನು ಕಳೆದುಕಂಡ ಶಿವ ಪರಮವೈರಾಗ್ಯತಾಳಿ ಸಮಾಧಿಸ್ಥಿತಿಗೆ ತಲುಪಿ,ತಪಸ್ಸನ್ನುಆಚರಿಸುತ್ತಿದ್ದನು.ಇಂದ್ರನಇಚ್ಛೆಯಂತೆಕಾಮದೇವನು ಶಿವನ ತಪಸ್ಸಿಗೆ ಭಂಗವನ್ನುಉಂಟುಮಾಡಿದ.ಇದರಿಂದಕೋಪಗೊಂಡ ಶಿವನು ತನ್ನ ಮೂರನೇಕಣ್ಣನ್ನುತೆರೆದುಕಾಮದೇವನ್ನು ದಹಿಸಿದ.ಈ ದಿನದ ಸ್ಮರಣೆಯಲ್ಲಿಹೋಳಿಹುಣ್ಣಿಮೆಯಂದು ಕಾಮನ್ನುದಹಿಸುವರು.ಈ ದಿನ ಕಾಮನವಿಗ್ರಹವನ್ನುದಹಿಸುವುದುಎಂದರೆ,ನಮ್ಮಲ್ಲಿರುವಕಾಮಕ್ರೋಧಾದಿ ದುರ್ಗುಣಗಳನ್ನು ದಹಿಸುವುದುಎಂದರ್ಥ.

ಆಚರಿಸುವ ವಿಧಾನ: ಫಾಲ್ಗುನಪೌರ್ಣಮಾಸೀ ಹೋಲಿಕಾ|| ನಿಶಾಗಮೇ ಪ್ರಪೂಜ್ಯೇತ ಹೋಲಿಕಾ ಸರ್ವದಾ ಬುಧೈಃ| ನ ದಿವಾ ಪೂಜಯೇತ್‍ಢುಂಢಾಂ ಪೂಜಿತಾದುಃಖದಾ ಭವೇತ್|| ಫಾಲ್ಗುಣಶುದ್ಧ ಹುಣ್ಣಿಮೆಯಂದುರಾತ್ರಿ ಹೋಳಿ ಆಚರಿಸಬೇಕುಎಂದು‘ನಿರ್ಣಯಸಿಂಧು’ಗ್ರಂಥದಲ್ಲಿ ಹೇಳಿದೆ.

ಎಲ್ಲಾ ಹಬ್ಬಗಳಂತೆ ಈ ದಿನವೂ ಕೂಡ ಪ್ರಾತಃಕಾಲದಲ್ಲಿ ಸ್ನಾನನಿತ್ಯಕರ್ಮ ಪೂರೈಸಿ,ಮನೆಯನ್ನು ತಳಿರು-ತೋರಣ ರಂಗವಲ್ಲಿಗಳಿಂದ ಅಲಂಕರಿಸಿ,ಕಲಶದಲ್ಲಿರತಿಸಹಿತಕಾಮದೇವನ್ನು ಆಹ್ವಾನಿಸಿ, ಧರ್ಮಸಿಂಧುವಿನಲ್ಲಿ ಹೇಳಿದಂತೆ-ಮಮ ಸಕುಂಬಸ್ಯ ಢುಂಢಾರಾಕ್ಷಸಿ ಪ್ರೀತ್ಯರ್ಥಂ,ತತ್ಪೀಡಾ ಪರಿಹಾರಾರ್ಥಂ ಹೋಲಿಕಾ ಪೂಜನಂಕರಿಷ್ಯೇ||ಹೀಗೆ ಸಂಕಲ್ಪಿಸಿ,ಷೋಡಷೋಪಚಾರಗಳಿಂದ ಪೂಜಿಸಬೇಕು.

ಮಹಿಳೆಯರು ಕೆಂಬಣ್ಣದ ವಸ್ತ್ರಧರಿಸಿ,ಚಂದನವೃಕ್ಷವೇ ಮೊದಲಾದ ಪುಣ್ಯವೃಕ್ಷಗಳನ್ನು ಪೂಜಿಸಿ ಆಯುರಾರೋಗ್ಯಐಶ್ವರ್ಯ ಸಮೃದ್ಧಿಗೋಸ್ಕರ ಪ್ರಾರ್ಥಿಸುವರು.ಹಬ್ಬದ ಸಿಹಿಯನ್ನು ನೈವೇಧ್ಯಮಾಡಿ ಸವಿಯುವರು.ಕೆಲಭಾಗಗಳಲ್ಲಿ ಪಂಚಮಿಯಿಂದಾರಂಭಿಸಿ,ಹೋಳಿಹುಣ್ಣಿಮೆಯ ತನಕಅತ್ಯಂತ ಶೃದ್ಧಾಭಕ್ತಿಯಿಂದ ವಿವಿಧ ಬಗೆ ವೇಷಭೂಷಣಗಳನ್ನು ತೊಟ್ಟುಕಾಮದೇವನನ್ನು ಸ್ತುತಿಸುತ್ತಾನರ್ತನಗೈಯುವುದನ್ನುಕಾಣುತ್ತೇವೆ.

ಹುಣ್ಣಿಮೆ ದಿನ ಗ್ರಾಮದ ಹೊರಭಾಗದಲ್ಲಿಅಥವಾ ಮಧ್ಯಭಾಗದಲ್ಲಿಕಟ್ಟಿಗೆ ಹುಲ್ಲು ಮುಂತಾದಉರುವಲನ್ನು ಸೇರಿಸಿ,ಬೆಂಕಿಜ್ವಾಲನೆ ಮಾಡಿ,ಜ್ವಾಲೆಗೆ ಷೋಡಶೋಪಚಾರಮಾಡಿ ಪೂಜಿಸಿ-ಕಾಮದೇವನ ವಿಗ್ರಹವನ್ನುದಹನ ಮಾಡಿ.ನಮ್ಮ ಭಯಹೋಗಲಾಡಿಸಿ ಐಶ್ವರ್ಯಾದಿಗಳನ್ನು ಕರುಣಿಸುಎಂದು ಪ್ರಾರ್ಥಿಸುವರು.

ಹೋಳಿಯಂದು ಎರಚಿ ಕೊಂಡಬಣ್ಣವು ಪರಸ್ಪರ ಪ್ರೀತಿ ಹೆಚ್ಚಿಸುವುದು.ಹಳೆಯ ಕಹಿ ಮರೆತು ಪರಸ್ಪರ ಎಲ್ಲರನ್ನು ಒಂದಾಗಿಸುವುದು.ಖಿನ್ನತೆ,ನೋವು,ಹತಾಶೆ,ದುಃಖ,ಒಂಟಿತನ,ಕಿರಿಕಿರಿ,ವಿರಕ್ತಿ ಭಾವನೆಗಳನ್ನು ಕಳೆಯುವುದು.ಹೋಳಿಯ ಬಣ್ಣವೇ ಹಬ್ಬವಾಗಿ ಬದಲಾಗುವುದು.ನಮಗೆ ಅರಿವಿಲ್ಲದಂತೆ ನಮ್ಮದೇಹ-ಮನಸ್ಸು-ಆತ್ಮಗಳು ಒಂದಾಗಿ ಅಧ್ಯಾತ್ಮದ ಚರಮಸೀಮೆಯಾದ ಪರಮಶಾಂತಿ ಹೊಂದುವುದು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777.

Back to top button