ಉತ್ತರಕನ್ನಡದಲ್ಲಿ ಇಳಿಕೆಕಾಣುತ್ತಿದೆ ಕೋವಿಡ್ ಸೋಂಕು: ಸುರಕ್ಷತಾ ಕ್ರಮ ಅನುಸರಿಸದ ಸಿಬ್ಬಂದಿ : ಪರೀಕ್ಷೆಗೆ ಒಳಪಡಲು ಭಯ ಹಾಗೂ ಆತಂಕ ?
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೋವಿಡ್ ಪಾಸಿಟಿವ್ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಇಂದು 175 ಜನರಲ್ಲಿ ಸೋಂಕು ದೃಢಪಟ್ಟಿದೆ.
ಕಾರವಾರದಲ್ಲಿ 18, ಭಟ್ಕಳದಲ್ಲಿ 16, ಶಿರಸಿಯಲ್ಲಿ 46, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 16, ಮುಂಡಗೋಡ 8, ಅಂಕೋಲಾದಲ್ಲಿ 9, ಕುಮಟಾದಲ್ಲಿ 23, ಹೊನ್ನಾವರ 16, ಹಳಿಯಾಳದಲ್ಲಿ 17, ಮತ್ತು ಜೋಯಿಡಾದಲ್ಲಿ 5 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದೇ ವೇಳೆ ಇಂದು 5 ಜನ ಸಾವನ್ನಪ್ಪಿದ್ದು, ಹೊನ್ನಾವರ 1 ಭಟ್ಕಳ 2 ಶಿರಸಿ 1 ಹಳಿಯಾಳದಲ್ಲಿ ಒಂದು ಸಾವು ಸಂಭವಿಸಿದೆ.
ಸುರಕ್ಷತಾ ಕ್ರಮ ಅನುಸರಿಸದ ಸಿಬ್ಬಂದಿ : ಪರೀಕ್ಷೆಗೆ ಒಳಪಡಲು ಭಯ ಹಾಗೂ ಆತಂಕ ?
ಅಂಕೋಲಾ ಜೂ 8: ತಾಲೂಕಿನಲ್ಲಿ ಮಂಗಳವಾರ 8 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ,ಒಟ್ಟೂ 134ಪ್ರಕರಣಗಳು ಸಕ್ರಿಯವಾಗಿದೆ.
ಸೋಂಕು ಮುಕ್ತರಾದ 12 ಜನರನ್ನು ಬಿಡುಗಡೆ ಗೊಳಿಸಲಾಗಿದ್ದು, ಅಂಕೋಲಾ (7), ಕಾರವಾರ (6), ಕುಮಟಾ (3, ಮಣಿಪಾಲ (1), ಮಂಗಳೂರು (2) ಸೇರಿ ಆಸ್ಪತ್ರೆಗಳಲ್ಲಿ ಒಟ್ಟು 19 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 11, ಹೋಂ ಐಸೋಲೇಶನ್ ನಲ್ಲಿ 93 ಜನರಿದ್ದಾರೆ. ಈ ವರೆಗೆ ಕೊಡಿಡನಿಂದ ತಾಲೂಕಿನಲ್ಲಿ ಒಟ್ಟು 55 ಜನರು ಮೃತಪಟ್ಟಿದ್ದಾರೆ.
ವಾರಾಂತ್ಯದ ಲಾಕ್ ಡೌನ್ ಗೆ ಬೆಂಬಲ ಸೂಚಿಸಿದ್ದ ಬಹುತೇಕ ನಾಗರಿಕರು, ಸೋಮವಾರದ ಲಾಕ್ ಡೌನ್ ವಿನಾಯತಿ. ಅವಧಿಯಲ್ಲಿ ಅಗತ್ಯ ಸಾಮಾನು ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಿರುವ ದ್ರಶ್ಯ ಸಾಮಾನ್ಯವಾಗಿತ್ತು. ಪಟ್ಟಣ ಸೇರುವ ಪ್ರಮುಖ ರಸ್ತೆಗಳ ಪ್ರವೇಶದ್ವಾರದ ಬಳಿ ಆರಂಭಿಸಲಾಗಿರುವ ಪೊಲೀಸ್ ಚೆಕ್ ಪೋಸ್ಟ್ ಬಳಿ ಬಂದ ಸಾರ್ವಜನಿಕರನೇಕರನ್ನು ತಡೆದು, ಪಕ್ಕದಲ್ಲೇ ಇರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಕೆಲವರಿಗೆ ಶಾಕ್ ಆದಂತಿತ್ತು ಎನ್ನಲಾಗಿದೆ.
ಸಮುದಾಯದಲ್ಲಿ ಸೋಂಕು ಹರಡಿರುವ ಸಾಧ್ಯತೆಗಳನ್ನು ಪತ್ತೆಹಚ್ಚಲು ಮತ್ತು ಕೆಲ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಜಂಟಿ ಕಾರ್ಯಾಚರಣೆ,ಸಮಯಕ್ಕನುಗುಣವಾಗಿ ಸರಿ ಎನಿಸಿದರೂ ಸಹ ಆರೋಗ್ಯ ಇಲಾಖೆಯ ಸಿಬ್ಬಂದಿ ಅಪಾಯದ ಅರಿವಿದ್ದರೂ ವೈಯಕ್ತಿಕ ಕಾಳಜಿ ವಹಿಸದೇ ಸ್ಟ್ಯಾಬ್ ಟೆಸ್ಟ್ ನಡೆಸುವ ವೇಳೆ ಕೆಲವೆಡೆ ಪಿಪಿಇ ಕಿಟ್ ಧರಿಸದಿರುವುದು, ಜನರನ್ನು ಎಲ್ಲೆಲ್ಲೋ ಕುಳ್ಳಿರಿಸಿ ಸೆನಿಟೈಸೇಶನ್ ಸಹ ಮಾಡದಿರುವುದು, ಪರೀಕ್ಷೆಗೊಳಪಡುವವರ ತಲೆ, ಭುಜಗಳನ್ನು ತನ್ನ ಕೈಗಳಿಂದ ಸ್ಪರ್ಶಿಸಿ ಸುರಕ್ಷಾ ಕ್ರಮಗಳನ್ನು ಗಾಳಿಗೆ ತೂರಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಅಲ್ಲಲ್ಲಿ ಕೇಳಿ ಬಂದಿದೆ.
ಅಲ್ಲದೇ ತುರ್ತಾಗಿ ನಡೆಸುವ ರ್ಯಾಟ್ ಪರೀಕ್ಷೆಗಳು, ನಿಖರ ಫಲಿತಾಂಶ ನೀಡದೇ, ಸೊಂಕು ಇಲ್ಲದಿದ್ದರೂ ಪಾಸಿಟಿವ್ ಬರುವ ಸಾಧ್ಯತೆಗಳ ಬಗ್ಗೆ ಆಕ್ಷೇಪದ ಮಾತು ಕೇಳಿಬಂದಿದ್ದು, ಸಂಬಂಧಿಸಿದ ಇಲಾಖೆ ಕೇವಲ ಟೆಸ್ಟ್ ಸಂಖ್ಯೆಗಳ ಮೇಲಷ್ಟೇ ಗುರಿ ಸಾಧಿಸದೆ ತನ್ನ ಸಿಬ್ಬಂದಿಗಳ ಮತ್ತು,ಪರೀಕ್ಷೆಗೆ ಒಳ ಪಡುವವರ ಸುರಕ್ಷತೆಗೆ ಒತ್ತು ನೀಡಿ ತನ್ನ ಜವಾಬ್ದಾರಿ ನಿಭಾಯಿಸಲಿ ಅ ಮೂಲಕ ಜನತೆ ಭಯ ಹಾಗೂ ಆತಂಕ ಪಡದೇ ಸೋಂಕು ಪರೀಕ್ಷೆಗೆ ಒಳಪಟ್ಟು, ಆಡಳಿತ ವ್ಯವಸ್ಥೆ ಜೊತೆ ಸಹಕರಿಸುವಂತಾಗಲಿ ಎನ್ನುವ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ