Important
Trending

ಉತ್ತರಕನ್ನಡದಲ್ಲಿ ಇಂದು ಲಭ್ಯವಿರುವ ಲಸಿಕೆಯ ವಿವರ : ಎಲ್ಲೆಲ್ಲಿ‌ ಎಷ್ಟು ಲಸಿಕೆ ಲಭ್ಯ ನೋಡಿ?

ಕಾರವಾರ : ಉತ್ತರಕನ್ನಡ ಜಿಲ್ಲೆಯ ಇಂದು ಲಭ್ಯವಿರುವ ವಾಕ್ಸಿನ್ ವಿವರ ಇಲ್ಲಿದೆ. ಕಾರವಾರ 1,200, ಮುಂಡಗೋಡ 800, ಕುಮಟಾ 1,200, ಅಂಕೋಲಾದಲ್ಲಿ 800, ಭಟ್ಕಳ 1200, ಹಳಿಯಾಳ 700, ಹೊನ್ನಾವರ 1,000, ಜೋಯ್ಡಾ 500, ಸಿದ್ದಾಪುರ 800, ಯಲ್ಲಾಪುರ 800, ದಾಂಡೇಲಿಯಲ್ಲಿ 500 ಸಿಗಲಿದೆ.

ಇದೇ ವೇಳೆ, ಜಿಲ್ಲೆಯ ವಿವಿಧೆಡೆ ಕೊರೊನಾ ವ್ಯಾಕ್ಸಿನ್ ನೀಡಲು ಕ್ಯಾಂಪ್ ಮಾಡಿ ಲಸಿಕೆ ನೀಡಲಾಗುತ್ತಿದ್ದು, ಜುಲೈ 23 ಶುಕ್ರವಾರ ಶಿರಸಿ ತಾಲೂಕಿನಲ್ಲಿ ಒಟ್ಟು 1,200 ಡೋಸ್ ಕೋವಿಶೀಲ್ಡ್ ಲಸಿಕೆಯಿದೆ, ಅದರಲ್ಲಿ 1,100 ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವ ಗ್ರಾಮಾಂತರ ಭಾಗದ ಜನರಿಗೆ ನೀಡಲಾಗುತ್ತದೆ. ಇನ್ನುಳಿದ ಉಳಿದ 100 ಲಸಿಕೆಯಲ್ಲಿ ಶಾಲಾ ಶಿಕ್ಷಕರಿಗೆ, ಶಾಲಾ ಅಡುಗೆಯವರಿಗೆ ಹಾಗು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಶಿರಸಿ ತಾಲೂಕಿನ 1,100 ಡೋಸ್ ಲಸಿಕೆಯಲ್ಲಿ ತಾಲೂಕಿನ ಬನವಾಸಿಯಲ್ಲಿ 200, ಸಾಲ್ಕಣಿ 100, ಕಕ್ಕಳ್ಳಿ 100, ಮೆಣಸಿ 50, ಸುಗಾವಿ 100, ಬಿಸಲಕೊಪ್ಪದಲ್ಲಿ 200, ರೇವಣಕಟ್ಟಾದಲ್ಲಿ 150, ದೇವನಳ್ಳಿ 100, ದಾಸನಕೊಪ್ಪ 100 ಡೋಸ್ ಲಸಿಕೆ ಲಭ್ಯವಿದೆ.

ಅಂಕೋಲಾ ತಾಲೂಕಿನ ವಿವಿಧೆಡೆ ಜುಲೈ 23 ರ ಶುಕ್ರವಾರ ಒಟ್ಟೂ 800 ಡೋಸ್ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ. ಚಂದುಮಠ (100), ವಂದಿಗೆ (150), ಬೆಲೇಕೇರಿ (150), ಹಾರವಾಡ (100), ಸುಂಕಸಾಳ (50), ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ(250) ಲಸಿಕೆ ವಿಂಗಡಣೆ ಮಾಡಿ ವಿತರಿಸಲಾಗುತ್ತಿದೆ.

ಈ ಹಿಂದೆ ಮೊದಲ ಡೋಸ್ ಪಡೆದವರು, ಲಸಿಕೆ ಪಡೆದ ದಿನಾಂಕದಿಂದ,16ಕ್ಕೂ ಹೆಚ್ಚು ವಾರಗಳಾಗಿದ್ದಲ್ಲಿ ಅವರಿಗೆ ಪ್ರಥಮ ಪ್ರಾಶಸ್ತ್ಯ, 12ಕ್ಕೂ ಹೆಚ್ಚು ವಾರಗಳಾಗಿದ್ದಲ್ಲಿ ದ್ವಿತೀಯ ಪ್ರಾಶಸ್ತ್ಯದಡಿ 2 ಹಂತದ ಲಸಿಕೆ ನೀಡಲಾಗುತ್ತಿದೆ.

ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರು,ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇತರೆ ಸಿಬ್ಬಂದಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಫಾರ್ಮ್ ನಂಬರ್ 3 ತಂದರೆ ಅಂಥವರಿಗೆ ಅಗತ್ಯ ಇರುವ 1 ನೇ ಇಲ್ಲವೆ 2 ನೇ ಡೋಸ್ ಲಸಿಕೆ ನೀಡಲಾಗುತ್ತದೆ. ಅಂತೆಯೇ ನಾನಾ ಕಾಲೇಜಿಗಳಲ್ಲಿ ಈ ಹಿಂದೆ ವ್ಯಾಕ್ಸಿನೇಷನ್ ಕ್ಯಾಂಪ್ ನಡೆದಾಗ ಅನಿವಾರ್ಯ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲಾಗದ ವಿದ್ಯಾರ್ಥಿಗಳು,ತಮ್ಮ ಕಾಲೇಜಿನ ಮುಖ್ಯಸ್ಥರಿಂದ ಫಾರ್ಮ್ ನಂಬರ್ 3 ತಂದು ಮೊದಲ ಡೋಸ್ ಪಡೆಯಬಹುದಾಗಿದೆ.

ವಿಶೇಷ ಪ್ರಾಶಸ್ತ್ಯದಡಿ ಬಾಳಂತಿಯರೂ ಮೊದಲ ಇಲ್ಲವೇ ಎರಡನೆ ಹಂತದ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button