Follow Us On

WhatsApp Group
Important
Trending

ಉತ್ತರಕನ್ನಡ ಜಿಲ್ಲೆಯ ಇಂದಿನ ಕರೊನಾ ವಿವರ: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡದಲ್ಲಿ ಇಂದು 41 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ‌‌ ಜಿಲ್ಲೆಯಲ್ಲಿ ಇಂದು ಇಬ್ಬರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಕುಮಟಾದಲ್ಲಿ ಒಂದು, ಶಿರಸಿಯಲ್ಲಿ 1 ಸಾವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ‌ ಸಂಖ್ಯೆ 734ಕ್ಕೆ ಏರಿಕೆಯಾಗಿದೆ.

ಕುಮಟಾದಲ್ಲಿ 6, ಹೊನ್ನಾವರ 13, ಕಾರವಾರದಲ್ಲಿ 6, ಅಂಕೋಲಾದಲ್ಲಿ 1, ಭಟ್ಕಳದಲ್ಲಿ 5, ಶಿರಸಿಯಲ್ಲಿ 6, ಯಲ್ಲಾಪುರದಲ್ಲಿ 4 ಸೇರಿ ಒಟ್ಟು 41 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕುಮಟಾ 8, ಹೊನ್ನಾವರ 9, ಭಟ್ಕಳ 6, ಶಿರಸಿ 1, ಯಲ್ಲಾಪುರ 5, ಮುಂಡಗೋಡ 6, ಕಾರವಾರ 4, ಅಂಕೋಲಾ‌ 28, ಕೊರೊನಾ ಗೆದ್ದು ಮನೆಗೆ ಮರಳಿದ್ದಾರೆ.

ಅಂಕೋಲಾದಲ್ಲಿ 1 ಹೊಸ ಕೋವಿಡ್ ಕೇಸ್ : ನಾಳೆ 410 ಲಸಿಕೆ ವಿತರಣೆಗೆ ಕ್ರಮ

ಅಂಕೋಲಾ ಅ 2: ತಾಲೂಕಿನಲ್ಲಿ ಸೋಮವಾರ 1ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ, ಒಟ್ಟೂ 50 ಸಕ್ರಿಯ ಪ್ರಕರಣಗಳಿವೆ. ಸೋಂಕು ಮುಕ್ತರಾದ 28 ಜನರನ್ನು ಬಿಡುಗಡೆಗೊಳಿಸಲಾಗಿದೆ.

ಆಸ್ಪತ್ರೆಗಳಲ್ಲಿ 5 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣವುಳ್ಳ 45ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಈ ವರೆಗೆ ತಾಲೂಕಿನಲ್ಲಿ ಒಟ್ಟೂ 64 ಜನರು ಕರೊನಾದಿಂದ ಮೃತರಾಗಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ 3396ಜನರಲ್ಲಿ ಸೋಂಕು ದೃಢಪಟ್ಟಿದೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ನಾಳೆ ದಿನಾಂಕ ಆಗಸ್ಟ್ 3ರ ಮಂಗಳವಾರ ತಾಲೂಕಿನ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ 100 ಡೋಸ್ ಪ್ರಥಮ ಹಾಗೂ ದ್ವಿತೀಯ,ಅಂತೆಯೇ ಬೆಳೆಸೆಯಲ್ಲಿ ಪ್ರಥಮ (110), ಎರಡನೇ (100) ಡೋಸ್ ಸೇರಿ ಒಟ್ಟು 410 ಡೋಸ್ ನೀಡಿಕೆಗೆ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ.

ಕುಮಟಾ, ಹೊನ್ನಾವರದ ವಿವರ?

ಕುಮಟಾ, ಹೊನ್ನಾವರ ತಾಲೂಕಿನಲ್ಲಿ ನಾಳೆ ಯಾವುದೇ ಲಸಿಕೆ ಲಭ್ಯವಿಲ್ಲ ಎಂದು ತಾಲೂಕಾ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ವಿಸ್ಮಯ ನ್ಯೂಸ್ ಕಾರವಾರ ಮತ್ತು ವಿಲಾಸ್ ನಾಯಕ

Back to top button