1 ಕೋಟಿ 20 ಲಕ್ಷದ ಕಾಮಗಾರಿಗೆ ಚಾಲನೆ; ಭೂಮಿ ಪೂಜೆ ನೆರವೇರಿಸಿದ ಶಾಸಕರು
ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆ : ಶಾಸಕರಿಗೆ ಅಭಿನಂದನೆ
ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿ ಒಟ್ಟು 1 ಕೋಟಿ 20 ಲಕ್ಷದ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಸುನೀಲ್ ನಾಯ್ಕ ಭೂಮಿ ಪೂಜೆ ನೆರವೇರಿಸಿದರು, ತಾಲೂಕಿನ ಅನಂತವಾಡಿಯ ಹೆರಾಳಿ ಕಾಲಗೋಳಿಯ 25 ಲಕ್ಷದ ರಸ್ತೆ, ಮಂಕಿಯ ಮಾವಿನಸಾಗ್, ಕೆಳಗಿನೂರ ಪಂಚಾಯತ್ ವ್ಯಾಪ್ತಿಯ ಹಕ್ಕಲಕೇರಿಯ 25 ಲಕ್ಷದ ರಸ್ತೆ ಸುಧಾರಣೆ, ಬಳ್ಕೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲಸ್ನಡಿಕೇರಿಯ ರಸ್ತೆ, ಕಾಸರಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸ ಪಟ್ಟಣದಲ್ಲಿ 25 ಲಕ್ಷದ ವೆಚ್ಚದಲ್ಲಿ ರಸ್ತೆ ಸುಧಾರಣೆ ಸೇರಿದಂತೆ ಒಟ್ಟು 1 ಕೋಟಿ 20 ಲಕ್ಷ ರೂಪಾಯಿಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಹೊಸಪಟ್ಟಣ ಗ್ರಾಮಸ್ಥರಾದ ನಾರಾಯಣ ನಾಯ್ಕ ಮಾತನಾಡಿ ಶಾಸಕ ಸುನೀಲ್ ನಾಯ್ಕ ನೇತ್ರತ್ವದಲ್ಲಿ ಕ್ಷೇತ್ರ ಅಭಿವೃದ್ಧಿ ಪತದತ್ತ ಸಾಗುತ್ತಿದೆ. ನಮ್ಮ ಹೊಸಪಟ್ಟಣಕ್ಕೆ ಬಹಳ ವರ್ಷಗಳಿಂದ ರಸ್ತೆ ಇಲ್ಲವಾಗಿತ್ತು. ಈ ರಸ್ತೆಯ ಕನಸನ್ನು ಶಾಸಕರು ನನಸು ಮಾಡಿದ್ದಾರೆ ಎಂದರು.
ಇಂದು ನನ್ನ ಕ್ಷೇತ್ರದ ಹಲವಾರು ಭಾಗಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಕರೋನಾ ಮಹಾಮಾರಿಯಿಂದ ಅಭಿವೃದ್ದಿ ಕೆಲಸಕ್ಕೆ ತೊಡಕಾಗಿತ್ತು. ಸತತ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದ ನನ್ನ ಕ್ಷೇತ್ರದಲ್ಲಿ ಕರೊನಾ ಮಹಾಮಾರಿಯಿಂದ ಅಭಿವೃದ್ಧಿ ಕುಂಟಿತವಾಗಿತ್ತು. ಇಂದು ಅನೇಕ ಭಾಗಗಳಲ್ಲಿ ಭೂಮಿ ಪೂಜೆ ನೆರವೇರಿಸಿದ್ದೇನೆ. ಕರೊನಾ ಮದ್ಯಯೇ ಅಭಿವೃದ್ಧಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ
–ಸುನೀಲ್ ನಾಯ್ಕ, ಶಾಸಕರು, ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ
ಈ ಸಂದರ್ಭದಲ್ಲಿ ಬಳ್ಕೂರ ಗ್ರಾಮ ಪಂಚಾಯತ ಅಧ್ಯಕ್ಷ ಕೇಶವ ನಾಯ್ಕ, ಸದಸ್ಯರಾದ ಗಣಪತಿ ನಾಯ್ಕ ಬಿಟಿ, ಸೈಮನ್ ರೊಡ್ರಗಿಸ್, ಸಂದ್ಯಾ ಸತ್ಯೆಂದ್ರ ಬಂಡಾರಕರ, ಪಂಚಾಯತ ಅಧ್ಯಕ್ಷೆ ದೇವಿ ಮಾಭ್ಲ ಗೌಡ, ಕಾಸರಕೋಡ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಲಸಾದ ಬೇಗಂ, ಮುಕಂಡರುಗಳಾದ ಸುಬ್ರಾಯ ನಾಯ್ಕ, ಗಣಪತಿ ಗೌಡ ಚಿತ್ತಾರ, ಶಿವಾನಂದ ಗೌಡ, ಮಂಜುನಾಥ ಗೌಡ, ದೇವ ಗೌಡ, ದತ್ತಾತ್ರೆಯ ಹೆಗಡೆ, ಮುಂತಾದವರ ಇದ್ದರು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,