Uttara Kannada
Trending

ಅಕ್ರಮವಾಗಿ ಮದ್ಯಸಾಗಿಸುತ್ತಿದ್ದವರು ವಶಕ್ಕೆ; ಆರೋಪಿಗಳು ಎಲ್ಲಿಯವರು ಗೊತ್ತಾ?

ಬಂಧಿತ ಆರೋಪಿಗಳು ಶಿರಾಲಿ ಮೂಲದವರು

ಹೊನ್ನವರ: ಹೊನ್ನಾವರದಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಕಾರಿನಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿದ ಮಂಕಿ ಠಾಣೆಯ ಪೊಲೀಸರು ವಾಹನ ಸಮೇತ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಕಿಯಲ್ಲಿರುವ ಮಯೂರ ಡಾಬಾದ ಎದುರು ಅನುಮಾನಾಸ್ಪದವಾಗಿ ನಿಂತಿದ್ದ ಕಾರ್‌ನ್ನು ಪರಿಶೀಲಿಸಿದಾಗ ಕಾರಿನ ಒಳಗೆ 96 ಮದ್ಯದ ಸ್ಯಾಚೆಟ್ ಗಳು, ವಿಸ್ಕಿ 96, ಬಿಯರ್ ಬಾಟಲಿಗಳು ಕಂಡು ಬಂದಿದೆ. ಒಟ್ಟು ಸುಮಾರು 19 ಸಾವಿರ ರೂಪಾಯಿ ಮೌಲ್ಯದ ಮಾಲನ್ನು ಜಪ್ತಿಮಾಡಿ ಕಾರಿನಲ್ಲಿದ್ದ ಮೂವರನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಭಟ್ಕಳ ಶಿರಾಲಿ ಮೂಲದ ರಾಜೇಶ ಮಾದೇವ ನಾಯ್ಕ, ಪರಮೇಶ್ವರ ನಾಗಪ್ಪ ನಾಯ್ಕ ಹಾಗೂ ಹೆಬಳೆಯ ಮಾಧವ ನಾಗಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಪಿ.ಎಸ್.ಐ ಪರಮಾನಂದ ಬಿ ಕೊಣ್ಣೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊರೊನಾ ಕಂಟಕವನ್ನು ಎದುರಿಸಲು ಲಾಕಡೌನ್ ಮುಂದುವರಿಯುತ್ತಿದೆ. ಪೊಲೀಸರು ಲಾಕ್‌ಡೌನ್ ನಿರ್ವಹಣೆಯೊಂದಿಗೆ ಕೊರೊನಾ ನಿಯಂತ್ರಣದತ್ತ ಗಮನ ಕೇಂದ್ರೀಕರಿಸಿರುವ ನಡುವೆಯೇ ಅಕ್ರಮ ಚಟುವಟಿಕೆಗಳೂ ಹೆಚ್ಚುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈ ಸುದ್ದಿಯ ವಿಡಿಯೋ ನ್ಯೂಸ್‌ಗಾಗಿ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನ್ನು ವಿಕ್ಷೀಸಿ. ಅಲ್ಲದೆ, ರಾತ್ರಿ 8.30ರ ಬಳಿಕ ಫೇಸ್‌ಬುಕ್‌ನಲ್ಲೂ ಇದರ ವಿಡಿಯೋ ನ್ಯೂಸ್‌ನ್ನು ವೀಕ್ಷಿಸಬಹುದು.

[sliders_pack id=”1487″]

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Back to top button