Uttara Kannada
Trending

ಜಿಲ್ಲೆಯಲ್ಲಿ ಇಂದು ಐದು ಕರೊನಾ ಪಾಸಿಟಿವ್

ಕುಮಟಾದ ನಾಲ್ವರಲ್ಲಿ ಸೋಂಕು
ಎಲ್ಲರೂ ಮಹಾರಾಷ್ಟ್ರದಿಂದ ಬಂದವರು
ಸಿದ್ದಾಪುರದ ಓರ್ವನಲ್ಲಿ ದೃಢ
ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 82ಕ್ಕೆ ಏರಿಕೆ

[sliders_pack id=”1487″]

ಉತ್ತರಕನ್ನಡ: ಜಿಲ್ಲೆಯಲ್ಲಿ ಕಿಲ್ಲರ್ ಕರೊನಾ ಅಟ್ಟಹಾಸ ಮುಂದುವರಿದಿದೆ. ಇಂದು ಆರೋಗ್ಯ ಇಲಾಖೆ ಪ್ರಕಟಿಸಿದ ಹೆಲ್ತ್ ಬುಲೆಟಿನ್‌ನಲ್ಲಿ ಐದು ಪ್ರಕರಣ ಪತ್ತೆಯಾಗಿದೆ. ಸೋಂಕಿತರಲ್ಲಿ ನಾಲ್ವರು ಕುಮಟಾದ ಹೆರವಟ್ಟಾದವರಾಗಿದ್ದು, ಇನ್ನೊರ್ವ ಸಿದ್ದಾಪುರದ ಮೂಲದವನು ಎಂಬ ಮಾಹಿತಿ ಬಂದಿದೆ.


ಸೋಂಕು ದೃಢಪಟ್ಟವರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದು, ತಾಲೂಕಿನ ಯಾರೂ ಭಯಪಡುವ ಅಗತ್ಯವಿಲ್ಲ.

ಅಜಿತ್ ಎಮ್, ಸಹಾಯಕ ಆಯುಕ್ತರು, ಕುಮಟಾ

ಇಂದು ಐದು ಕೇಸ್‌ಗಳು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 82ಕ್ಕೇ ಏರಿಕೆಯಾದಂತಾಗಿದೆ.

Back to top button